27 ರಂದು ಹೊಸಪೇಟೆಯಲ್ಲಿ ರಾಯಣ್ಣ ಉತ್ಸವ

KannadaprabhaNewsNetwork |  
Published : Sep 23, 2026, 02:30 AM IST
ಹರಪನಹಳ್ಳಿ: ಸೆ.27 ರಂದು ಹೊಸಪೇಟೆಯಲ್ಲಿ ನಡೆಯುವ ರಾಯಣ್ಣ ಉತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಖ್ಯಾತ ಚಿತ್ರ ನಟ ದ್ರುವ ಸರ್ಜಾ, ಜನಪದ ಗಾಯಕ ಬಾಳು ಬೆಳಗುಂದಿ ಹಾಗೂ ಸಮಾಜದ ಜನಪ್ರತಿನಿಧಿ ಭಾಗವಹಿಸಲಿದ್ದು,

ಹರಪನಹಳ್ಳಿ: ಹೊಸಪೇಟೆ ನಗರದಲ್ಲಿ ಸೆ. 27ರಂದು ವಿಜಯನಗರ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿಜಯನಗರ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಮಜ್ಜಿಗೆ ನಾಗರಾಜ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಹೊಸಪೇಟೆ ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ 228 ನೇ ಜನ್ಮದಿನದ ಅಂಗವಾಗಿ ರಾಯಣ್ಣ ಉತ್ಸವ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ, ಖ್ಯಾತ ಚಿತ್ರ ನಟ ದ್ರುವ ಸರ್ಜಾ, ಜನಪದ ಗಾಯಕ ಬಾಳು ಬೆಳಗುಂದಿ ಹಾಗೂ ಸಮಾಜದ ಜನಪ್ರತಿನಿಧಿ ಭಾಗವಹಿಸಲಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಾಲೂಕಿನ ಸಮಾಜದ ಬಂಧು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಎಚ್.ಬಿ. ಪರಶುರಾಮಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ ವಕೀಲ ಬಂಡ್ರಿ ಗೋಣಿ ಬಸಪ್ಪ, ಜಿಲ್ಲಾ ಉಪಾಧ್ಯಕ್ಷ ಬಿ.ಎಚ್. ಬಸವರಾಜಪ್ಪ, ಜಿಲ್ಲಾ ನಿರ್ದೇಶಕ ಸಾಬಳ್ಳಿ ಜಂಬಣ್ಣ, ಎಂ. ದ್ಯಾಮಪ್ಪ, ಸಿದ್ದಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಬಳಿಗನೂರು ಪರಶುರಾಮ್, ಗೌರವಧ್ಯಕ್ಷ ಕಲ್ಲೇರ್ ಬಸವರಾಜಪ್ಪ, ಉಪಾಧ್ಯಕ್ಷ ಎಚ್. ವಸಂತಪ್ಪ, ನಗರಸಭೆ ಮಾಜಿ ಸದಸ್ಯ ಜೋಗಿನರ ಭರತೇಶ್, ಕಲ್ಲಹಳ್ಳಿ ಬಸವರಾಜ, ದಾದಾಪುರ ಶಿವಪುತ್ರ, ಕಂಚಿಕೆರೆ ಕೆಂಚಪ್ಪ, ಹಲವಾಗಲು ಸುನೀಲ್, ನಾಗರಾಜ್, ರಾಗಿಮಸಾಲವಾಡ ಶಂಭುಲಿಂಗಪ್ಪ, ಇಟ್ಟಿಗುಡಿ ರಮೇಶ್, ಸೇರಿದಂತೆ ಸಮಾಜದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಬೀದಿಪಾಲು ಮಾಡುವ ಆದೇಶ ಕೈಬಿಡಲು ಒತ್ತಾಯ
ಬಡವರ ಒಕ್ಕಲೆಬ್ಬಿಸಲು ಹುನ್ನಾರ: ತಿಮ್ಮಪ್ಪ ಎಂ.ಕೆ.