ಜಾತಿಗಳ ಮರು ದೃವೀಕರಣ ಆತಂಕಕಾರಿ ಬೆಳವಣಿಗೆ

KannadaprabhaNewsNetwork |  
Published : Apr 16, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಮಾಧ್ಯಮ ಅಕಾಡೆಮಿ ಸದಸ್ಯ ಅಹೋಬಲಪತಿ ಅಭಿಮತಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಇತ್ತೀಚೆಗಿನ ವರ್ಷಗಳಲ್ಲಿ ಜಾತಿಗಳು ಮರು ದೃವೀಕರಣವಾಗುತ್ತಿದ್ದು ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮಾದ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಲಪತಿ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಕಾರ್ಯನಿರತರ ಪತ್ರಕರ್ತ ಸಂಘದ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪತ್ರಕರ್ತರು ಸಂವಿಧಾನದ ಆಶಯಗಳ ಜಾರಿಗೆ ಧ್ವನಿಯಾಗಬೇಕು ಆಗ ಮಾತ್ರ ಅಂಬೇಡ್ಕರ್ ಅವರ ಸ್ಮರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.

ಸಮಾಜದಲ್ಲಿ ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಜಾತಿ ಸಂಘರ್ಷಗಳು ಏರ್ಪಡುತ್ತಿವೆ. ಸಮಾಜದಲ್ಲಿ ಶೋಷಿತ ಹಾಗೂ ಹಿಂದುಳಿದ ಜಾತಿಗಳು ಸಂಘಟನೆಯಾಗವುದಕ್ಕೂ, ಮುಂದುವರಿದ ಜಾತಿಗಳು ಸಂಘಟನೆ ಕಟ್ಟುವುದಕ್ಕೆ ಬಹಳ ಅಂತರವಿದೆ. ಅಂಬೇಡ್ಕರ್ ಅವರು 23-24ನೇ ವಯಸ್ಸಿನಲ್ಲಿ ಜಾತಿ ವಿನಾಶ (Annihilation of Caste) ದಂತಹ ಅದ್ಭುತ ಕೃತಿ ಬರೆದರು. ಆ ಕೃತಿಯಲ್ಲಿ ಅವರು ಉಲ್ಲೇಖಿಸಿದ ವಿಚಾರಗಳು ಅವರ ಅಗಾಧ ಓದು ಮತ್ತು ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ. ಮಾರ್ಕ್ಸ್, ಲೆನಿನ್ ಅವರಂತೆ ಅಂಬೇಡ್ಕರ್ ಅವರ ವಿಚಾರಧಾರೆಗಳು ಜಾಗತಿಕ ಮಟ್ಟದಲ್ಲಿ ಪ್ರಸ್ತುತವಾಗಿವೆ ಎಂದರು.

ಪತ್ರಕರ್ತ ಎಮ್.ಎನ್.ಯೋಗಿಶ್ ಮಾತನಾಡಿ ಸಂವಿಧಾನ ಕೇವಲ ಕಾನೂನು ಗ್ರಂಥವಲ್ಲ, ಅದೊಂದು ಜೀವನ ದರ್ಶನವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನವು ವಕೀಲರಿಗೆ ಅಥವಾ ಶಾಸಕರಿಗೆ ಸೀಮಿತವಾದ ಗ್ರಂಥವಲ್ಲ, ಬದಲಾಗಿ ಪ್ರತಿಯೊಬ್ಬ ನಾಗರಿಕನೂ ಸಮಗ್ರವಾಗಿ ಅಧ್ಯಯನ ಮಾಡಬೇಕಾದ ಮಹಾಗ್ರಂಥವಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳ ಸಂವಿಧಾನಗಳು ಕಾಲಕ್ಕೆ ತಕ್ಕಂತೆ ಸಂಪೂರ್ಣ ಬದಲಾವಣೆ ಕಾಣುತ್ತವೆ. ಆದರೆ, ಭಾರತೀಯ ಸಂವಿಧಾನವು ಅದರ ಮೂಲ ಆಶಯಗಳಿಗೆ ಧಕ್ಕೆ ಬಾರದಂತೆ, ಕೇವಲ ಅಗತ್ಯ ತಿದ್ದುಪಡಿಗಳಿಗೆ ಮಾತ್ರ ಅವಕಾಶ ನೀಡುವಂತಹ ಭದ್ರ ಬುನಾದಿಯನ್ನು ಹೊಂದಿದೆ ಎಂದರು.

ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಅಂಬೇಡ್ಕರ್ ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ನಿಂತಿದೆ. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಹ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ ವಿಷಯ. ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ'''''''' ಎಂಬ ಮಂತ್ರವು ಇಂದಿಗೂ ಪ್ರಸ್ತುತ. ಶೋಷಿತ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗುವ ಅಗತ್ಯವಿದೆ. ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಮೌಲ್ಯಗಳನ್ನು ಅರಿತು, ಅವುಗಳ ಅನುಷ್ಠಾನಕ್ಕೆ ಬದ್ಧರಾದಾಗ ಮಾತ್ರ ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣ ಸಾಧ್ಯ ಎಂದರು.

ಪತ್ರಕರ್ತ ರವಿ ಮಲ್ಲಾಪುರ ಮಾತನಾಡಿ, ಸಂವಿಧಾನ ಎಂಬುದು ಕೇವಲ ಒಂದು ಪುಸ್ತಕವಲ್ಲ, ಅದು ಈ ದೇಶದ ಶೋಷಿತರ ಬದುಕಿನ ಆಸರೆ. ಅಂಬೇಡ್ಕರ್ ಅವರು ನೀಡಿದ ಈ ಸಂವಿಧಾನದ ಆಶಯಗಳನ್ನು ಜಾರಿಗೊಳಿಸಬೇಕಾದ ಸರ್ಕಾರಗಳು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಕಾರ್ಯನಿರತ ತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ.ಬಿ, ಪ್ರಧಾನ ಕಾರ್ಯದರ್ಶಿ ವಿರೇಶ್, ರಾಜ್ಯ ಪ್ರತಿನಿಧಿ ಸಿದ್ದರಾಜು, ಹಿರಿಯ ಪರ್ತಕರ್ತರಾದ ಶ.ಮಂಜುನಾಥ, ಎಸ್.ಟಿ.ನವೀನ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ದಿನೇಶ್ ಗೌಡಗೆರೆ, ಜಿ.ಓ.ಎನ್.ಮೂರ್ತಿ ಅಂಬೇಡ್ಕರ್ ಕುರಿತು ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಾರುತಿ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಸಂಘದ ಸದಸ್ಯರಾದ ನಾಗೇಶ್.ಬಿ.ಆರ್., ಶ್ರೀನಿವಾಸ, ಪ್ರಹ್ಲಾದ್, ರಾಘವೇಂದ್ರ, ದ್ವಾರಕನಾಥ್, ದರ್ಶನ್, ಕೃಷ್ಣಪ್ಪ, ಹರೀಶ್, ಶ್ರೀನಿವಾಸ, ರಾಜಶೇಖರ, ವಿಜಯಕುಮಾರ್, ಪೃಥ್ವಿರಾಜ್, ಮಲ್ಲಿಕಾರ್ಜುನ್, ಆನಂದಮೂರ್ತಿ, ಸಂಪತ್ ಕುಮಾರ್, ಪ್ರದೀಪ್ ಕುಮಾರ್, ರಂಗನಾಥ್ ಮತ್ತಿರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ವರದಾನ
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೆರೆಗಳ ಪಾತ್ರ ಅತಿಮುಖ್ಯ