ಧರ್ಮಸ್ಥಳದಲ್ಲಿನ ಸಾವುಗಳ ಕುರಿತು ಮರು ತನಿಖೆಯಿಂದ ಸತ್ಯ ಹೊರಗೆಳೆಯಬೇಕು: ದೇವಿ

KannadaprabhaNewsNetwork |  
Published : Jul 24, 2025, 12:46 AM IST
22ಕೆಎಂಎನ್ ಡಿ16 | Kannada Prabha

ಸಾರಾಂಶ

ಸರಣಿ ಹತ್ಯೆ ಪ್ರಕರಣ ಹೊರ ಬರುತ್ತಿವೆ. ವ್ಯಕ್ತಿ ಓರ್ವ ತಾನೇ ಸ್ವಂತ ಉಳಿಯುವುದಾಗಿ ದೂರು ನೀಡಿ ಹೊತಿರುವ ಕಳೇಬರವನ್ನು ತೆಗೆದುಯುವುದಾಗಿ ಹೇಳಿದರೂ ಅವುಗಳ ಬಗ್ಗೆ ಪೊಲೀಸ್ ಆಸಕ್ತಿ ತೋರಿಸುತ್ತಿಲ್ಲ ಎಂಬುವುದಾಗಿ ವರದಿಗಳು ಬರುತ್ತವೆ. ಸರ್ಕಾರ ಧರ್ಮಸ್ಥಳದ ನೂರಾರು ಪ್ರಕರಣಗಳನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ನಿಷ್ಪಕ್ಷಪಾತ ತನಿಖೆ ಮಾಡಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಧರ್ಮಸ್ಥಳದ ಸುತ್ತಮುತ್ತ ಕಳೆದ ದಶಕಗಳಲ್ಲಿ ನಡೆದ ಸಾವುಗಳ ಕುರಿತು ಮರುತನಿಖೆ ನಡೆಸಿ ಸತ್ಯವನ್ನು ಹೊರಗೆಳೆಯಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಒತ್ತಾಯಿಸಿದರು.

ಪಟ್ಟಣದಲ್ಲಿ ಶಾದಿ ಮಹಲ್‌ನಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 8ನೇ ತಾಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, 2012ರಲ್ಲಿ ರಾಜ್ಯವೇ ಬೆಚ್ಚಿಬಿದ್ದ ಧರ್ಮಸ್ಥಳದ ಸಮೀಪದ ಉಜ್ಜರೆಯ ಸೌಜನ್ಯ ಪ್ರಕರಣ ಸುತ್ತಮುತ್ತ ನೂರಾರು ಅಸಾಹಜ ಸಾವುಗಳು ಕುರಿತು ವರದಿಗಳಾಗಿದೆ ಎಂದರು.

ಸರಣಿ ಹತ್ಯೆ ಪ್ರಕರಣ ಹೊರ ಬರುತ್ತಿವೆ. ವ್ಯಕ್ತಿ ಓರ್ವ ತಾನೇ ಸ್ವಂತ ಉಳಿಯುವುದಾಗಿ ದೂರು ನೀಡಿ ಹೊತಿರುವ ಕಳೇಬರವನ್ನು ತೆಗೆದುಯುವುದಾಗಿ ಹೇಳಿದರೂ ಅವುಗಳ ಬಗ್ಗೆ ಪೊಲೀಸ್ ಆಸಕ್ತಿ ತೋರಿಸುತ್ತಿಲ್ಲ ಎಂಬುವುದಾಗಿ ವರದಿಗಳು ಬರುತ್ತವೆ. ಸರ್ಕಾರ ಧರ್ಮಸ್ಥಳದ ನೂರಾರು ಪ್ರಕರಣಗಳನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಬೇಕೇಂದು ಆಗ್ರಹಿಸಿದರು.

ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯ ದೌರ್ಜನ್ಯ, ದಬ್ಬಾಳಿಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹಿಂಸೆ ನಡೆಯುತ್ತಿದೆ. ಜನವಾದಿ ಮಹಿಳಾ ಸಂಘಟನೆಯ ದೇಶದಲ್ಲಿ ಒಂದು ಕೋಟಿ ಹೆಚ್ಚು ಸದಸ್ಯತ್ವ ಹೊಂದಿದೆ. ದೇಶದ ಅತಿ ದೊಡ್ಡ ಸಂಘಟನೆಯಾಗಿ ಹೊರ ಹೊಮ್ಮಿ ಎಲ್ಲಾ ವಿಭಾಗದ ಮಹಿಳೆಯರನ್ನು ಸಂಘಟಿಸಿ ಹೋರಾಟ ನಡೆಸುತ್ತಿದೆ ಎಂದರು.

ಪ್ರ‍್ರತಿ ನಿತ್ಯ ಮಹಿಳೆ ಒಂದಾಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾಳೆ. ಮಹಿಳೆಯರ ಸಂಘಟಿತರಾಗಿ ಮಹಿಳೆಯರ ಮೇಲೆ ದಿನ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರ, ಹೆಣ್ಣು ಮಕ್ಕಳ ಹತ್ಯೆ, ಲಿಂಗ ತಾರತಮ್ಯ ಹಾಗೂ ಜಾತಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗಳು ನಿಲ್ಲಬೇಕೆಂದು ಆಗ್ರಹಿಸಿದ್ದರು.

ಸಭೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷೆ ಜಯಶೀಲ, ಕಾರ್ಯದರ್ಶಿ ಪ್ರೇಮ, ಖಜಾಂಚಿ ಅನಿತಾ ಸೇರಿದಂತೆ 17 ಜನರ ಸಮಿತಿ ಆಯ್ಕೆ ಮಾಡಲಾಯಿತು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್