ಸ್ಟೂಡೆಂಟ್‌ ಲೈಫ್‌ ಗೋಲ್ಡನ್ ಲೈಫಾಗಿಸಲು ಯುವ ಆವೃತ್ತಿ ಓದಿ

KannadaprabhaNewsNetwork |  
Published : Jun 20, 2025, 12:34 AM IST
ರಾಮದುರ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ವಿತರಣೆ ನಡೆಯಿತು. | Kannada Prabha

ಸಾರಾಂಶ

ಸ್ಟೂಡೆಂಟ್‌ ಲೈಫ್‌ ಗೋಲ್ಡನ್ ಲೈಫ್‌ ಎನ್ನುವ ಮಾತು ನಿಜವಾಗಲು ಶಿಕ್ಷಕರ ಮಾರ್ಗದರ್ಶನದ ಜೊತೆಗೆ ಕನ್ನಡಪ್ರಭ ಪತ್ರಿಕೆಯು ಅನುಭವಿ ತಜ್ಞರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗಾಗಿ ಹೊರ ತರುತ್ತಿರುವ ಯುವ ಆವೃತ್ತಿಯನ್ನು ಪ್ರತಿನಿತ್ಯ ಅಧ್ಯಯನ ಮಾಡುವ ಮೂಲಕ ಪತ್ರಿಕೆ ಮತ್ತು ಶಿಕ್ಷಕರ ಶ್ರಮ ಸದುಪಯೋಗ ಮಾಡಿಕೊಳ್ಳಬೇಕು ಎಂದು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಕೇತ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಸ್ಟೂಡೆಂಟ್‌ ಲೈಫ್‌ ಗೋಲ್ಡನ್ ಲೈಫ್‌ ಎನ್ನುವ ಮಾತು ನಿಜವಾಗಲು ಶಿಕ್ಷಕರ ಮಾರ್ಗದರ್ಶನದ ಜೊತೆಗೆ ಕನ್ನಡಪ್ರಭ ಪತ್ರಿಕೆಯು ಅನುಭವಿ ತಜ್ಞರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗಾಗಿ ಹೊರ ತರುತ್ತಿರುವ ಯುವ ಆವೃತ್ತಿಯನ್ನು ಪ್ರತಿನಿತ್ಯ ಅಧ್ಯಯನ ಮಾಡುವ ಮೂಲಕ ಪತ್ರಿಕೆ ಮತ್ತು ಶಿಕ್ಷಕರ ಶ್ರಮ ಸದುಪಯೋಗ ಮಾಡಿಕೊಳ್ಳಬೇಕು ಎಂದು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಕೇತ ಪಟ್ಟಣ ಹೇಳಿದರು.

ಪಟ್ಟಣದ ನೇತಾಜಿ ಸುಭಾಸಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಯುವ ಆವೃತ್ತಿ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದುವುದರ ಜೊತೆಗೆ ಗುಟಕಾ, ತಂಬಾಕುಗಳಂತಹ ದುಶ್ಚಟಗಳಿಂದ ದೂರವಿದ್ದು ಭವಿಷ್ಯ ರೂಪಿಸುವತ್ತ ಗಮನಹರಿಸಬೇಕು. ತಂದೆ-ತಾಯಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕೂಲಿ ಕೆಲಸ ಮಾಡುತ್ತ ಶಾಲೆಗೆ ಕಳುಹಿಸುತ್ತಿದ್ದು, ಪಾಲಕರ, ಕಲಿತ ಶಾಲೆ ಮತ್ತು ಶಿಕ್ಷಕರ ಹೆಸರು ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ಮಾತನಾಡಿ, ಕನ್ನಡಪ್ರಭ ಯುವ ಆವೃತ್ತಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಮತ್ತು ಶೈಕ್ಷಣಿಕ ಅಭಿವೃದ್ಧಿ ಜೊತೆಗೆ ಉದ್ಯೋಗ ಮಾರ್ಗದರ್ಶಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.ಕನ್ನಡಪ್ರಭ ವರದಿಗಾರ ಈರಣ್ಣ ಬುಡ್ಡಾಗೋಳ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನ್ನಡಪ್ರಭ ಪತ್ರಿಕೆ ಮೊದಲಿನಿಂದಲೂ ನಿಷ್ಪಕ್ಷಪಾತ ಹಾಗೂ ಪ್ರಚಲಿತ ವಿದ್ಯಮಾನಗಳ ಸುದ್ದಿ ಜೊತೆಗೆ ಶೈಕ್ಷಣಿಕ ಮತ್ತು ಉದ್ಯೋಗ ಮಾರ್ಗದರ್ಶನ ಮಾಡುತ್ತಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ತಾಲೂಕಿನ ಹೆಸರನ್ನು ರಾಜ್ಯಮಟ್ಟದಲ್ಲಿ ಗುರ್ತಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಯುವ ಕಾಂಗ್ರೆಸ್ ಕಾರ್ಯಕರ್ತ ಮಲ್ಲಿಕಾರ್ಜುನ ದುರ್ಗನ್ನನವರ, ವೈಭವ ನಲವಡೆ, ಸಾಜಿದ ಮೊರಬ, ಬಸವರಾಜ ಪ್ರಧಾನಿ, ಶಿಕ್ಷಕರಾದ ಬಿ.ಎಚ್.ಗಾಣಿಗೇರ, ವಿ.ಜೆ.ಗಣಚಾರಿ, ಎಸ್.ಡಿ.ಪಟ್ಟಣ, ಎಸ್.ಎಫ್.ಭಜಂತ್ರಿ, ಸುಮಗಂಲ ಚತ್ತರಗಿ, ರೂಪಾ ರಾಠೋಡ, ವೀಣಾ ಹಿರೇಮಠ, ಎಸ್.ಎಫ್.ಗೋಕಾವಿ, ವೈ.ವಿ.ಗೋವನ್ನವರ ಸೇರಿದಂತೆ ಹಲವರಿದ್ದರು. ಮುಖ್ಯೋಪಾಧ್ಯಾಯ ಪಾಂಡುರಂಗ ಕಾಲವಾಡ ಸ್ವಾಗತಿಸಿದರು. ಸಹಶಿಕ್ಷಕ ಅಶೋಕ ಹಕಾಟಿ ವಂದಿಸಿದರು.ಪತ್ರಿಕೆಯು ಕೇವಲ ಸುದ್ದಿಗಳನ್ನು ನೀಡದೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದೆ ಮತ್ತು ದಾನಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಚಿತವಾಗಿ ನೀಡುತ್ತಿದ್ದು, ನಿರಂತರ ಅಧ್ಯಯನ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು.

-ಆರ್.ಟಿ.ಬಳಿಗಾರ, ಕ್ಷೇತ್ರ ಶಿಕ್ಷಣಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ