ದೊಡ್ಡಬಳ್ಳಾಪುರ: ವಿಜ್ಞಾನಿ ಸಿ.ವಿ.ರಾಮನ್ ಅವರು ಕೇವಲ ಮಹಾನ್ ವಿಜ್ಞಾನಿಯಷ್ಟೇ ಅಲ್ಲ, ಅತ್ಯುನ್ನತ ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೀತಿ ಬೆಳೆಸಲು ಸಹಕಾರಿ ಆಗಿದೆ. ಪುಸ್ತಕಗಳು ಜೀವನವನ್ನು ಪ್ರೇರೇಪಿಸುವ, ಶಿಕ್ಷಣ ನೀಡುವ ಮತ್ತು ಪರಿವರ್ತಿಸುವ ಶಕ್ತಿಯನ್ನು ಹೊಂದಿವೆ. ಶಾಲಾ ಕಾಲೇಜುಗಳಲ್ಲಿ ನಡೆಯುವ ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿ ಸಮಾಗಮ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ ಎಂದರು.
ಶಿಕ್ಷಕ ರಮೇಶ್ ಪೂಜಾರಿ ಮಾತನಾಡಿ, ಓದುಗರಲ್ಲಿ ಜ್ಞಾನ, ಕಲ್ಪನಾಶಕ್ತಿ ಮತ್ತು ಜೀವನದ ದೃಷ್ಟಿಕೋನವನ್ನು ವಿಸ್ತರಿಸುವ ಅದ್ಭುತ ಹವ್ಯಾಸ ಪುಸ್ತಕ ಓದು ಆಗಿದೆ. ಇದು ಮನಸ್ಸಿಗೆ ಸಂತೋಷ, ನೆಮ್ಮದಿ ಮತ್ತು ಹೊಸ ಲೋಕಗಳ ಪರಿಚಯವನ್ನು ನೀಡುತ್ತದೆ ಎಂದರು.ವಿಕಾಸ ಪ್ರಶಿಕ್ಷಣ ಕೇಂದ್ರದ ಡಾ.ಎ.ಓ.ಆವಲಮೂರ್ತಿ, ಕಾರ್ಯಕ್ರಮದ ಸಂಚಾಲಕ ವೆಂಕಟರಾಜು, ಕಜಾಪ ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಪದಾಧಿಕಾರಿಗಳಾದ ಜಿ.ಸುರೇಶ್, ಕೋದಂಡರಾಮ್, ಎಚ್.ಎನ್.ಪ್ರಕಾಶ್, ಸಿ.ಅಣ್ಣಯ್ಯ, ರಂಗಸ್ವಾಮಯ್ಯ, ಜಿ.ಸಿ.ಶಿವಕುಮಾರ್, ಸೂರ್ಯನಾರಾಯಣ್, ಗಿರೀಶ್, ಲಕ್ಷ್ಮಿಕಾಂತಮ್ಮ, ಪ್ರಸನ್ನ, ಹಾಡೋನಹಳ್ಳಿ ಗೋವಿಂದರಾಜು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರದಲ್ಲಿ ನಡೆದ ಪುಸ್ತಕ ಓದಿ ಬಹುಮಾನ ಗೆಲ್ಲಿ ಕಾರ್ಯಕ್ರಮದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.