ಓದು, ಜ್ಞಾನ,ಶಿಸ್ತು, ಸಂಸ್ಕಾರ, ಮಾನವೀಯತೆ ಉತ್ತಮ ಶಿಕ್ಷಕನ ಚಿಹ್ನೆಗಳು: ಡಾ.ಅಪ್ಪಗೆರೆ ತಿಮ್ಮರಾಜು

KannadaprabhaNewsNetwork |  
Published : Sep 24, 2025, 01:00 AM IST
22ಕೆಎಂಎನ್ ಡಿ20 | Kannada Prabha

ಸಾರಾಂಶ

ಕತ್ತಲಿನಿಂದ ಬೆಳಕಿಗೆ ತರುವ ಜಗತ್ತಿನ ಶ್ರೇಷ್ಠ ಸ್ಥಾನ ಶಿಕ್ಷಕರಾಗಿದ್ದು, ಈ ಗೌರವ ಸರ್ವಪಲ್ಲಿ ರಾಧಕೃಷ್ಣನ್ ಅವರಿಗೆ ಸಲ್ಲುತ್ತದೆ. ಸಮಾನತೆ, ಪ್ರಜ್ಞೆ, ಕರುಣೆ ಕಂಡಿದ್ದು ಬುದ್ಧನಿಂದ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬುದ್ಧನ ಸಂದೇಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಓದು, ಜ್ಞಾನ, ವಿಕಾಶ, ಕ್ರೀಯಾಶೀಲನೆ, ಶಿಸ್ತು, ಸಂಸ್ಕಾರ, ಮಾನವೀಯತೆ ಉತ್ತಮ ಶಿಕ್ಷಕನ ಚಿಹ್ನೆಗಳಾಗಿವೆ ಎಂದು ಖ್ಯಾತ ಜನಪದ ವಿದ್ವಾಂಸ ಡಾ.ಅಪ್ಪಗೆರೆ ತಿಮ್ಮರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಭಗವಾನ್ ಬುದ್ಧ ಶಿಕ್ಷಣ ಮಹಾ ವಿದ್ಯಾಲಯ ಸಭಾಂಗಣದಲ್ಲಿ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಯಿಂದ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಓದು ಎಂದರೆ ಭಾವನೆ, ಬರೆಯುವ ಬಗ್ಗೆ ತಿಳಿವಳಿಕೆ ನೀಡುವ ಚಿಹ್ನೆ, ಬರಹ ಸೌಂದರ್ಯದ ಲಕ್ಷಣಗಳಾಗಿವೆ. ಇವುಗಳನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಕತ್ತಲಿನಿಂದ ಬೆಳಕಿಗೆ ತರುವ ಜಗತ್ತಿನ ಶ್ರೇಷ್ಠ ಸ್ಥಾನ ಶಿಕ್ಷಕರಾಗಿದ್ದು, ಈ ಗೌರವ ಸರ್ವಪಲ್ಲಿ ರಾಧಕೃಷ್ಣನ್ ಅವರಿಗೆ ಸಲ್ಲುತ್ತದೆ. ಸಮಾನತೆ, ಪ್ರಜ್ಞೆ, ಕರುಣೆ ಕಂಡಿದ್ದು ಬುದ್ಧನಿಂದ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬುದ್ಧನ ಸಂದೇಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.

ಪುಸ್ತಕಗಳನ್ನು ಓದುವುದರಿಂದ ಜೀವನಕ್ಕೆ ಚೈತನ್ಯ ಹೇಳುವ ಬೆಳಕನ್ನು ನೀಡುವ ಜ್ಞಾನವನ್ನು ಕೊಡುವ ಸಮಾನತೆಯನ್ನು ಹೇಳುವುದನ್ನು ಕಲಿಸುವುದುರಿಂದ ಪ್ರ ಶಿಕ್ಷಣಾರ್ಥಿಗಳಿಗೆ ಓದು ನಿರಂತರವಾಗಿರಬೇಕೆಂದರು.

ಡಾ.ಸರ್ವಪಲ್ಲಿ ರಾಧಕೃಷ್ಣನ್‌ರವರು ರಾಷ್ಟ್ರಪತಿ, ತತ್ವಜ್ಞಾನಿ, ಶಿಕ್ಷಣ ತಜ್ಞರಾಗಿದ್ದರೂ ಕೂಡ ಅವರು ಸಮಾಜಕ್ಕೆ ನಾನೊಬ್ಬ ಓದುವ ಶಿಕ್ಷಕ ಎಂದೇ ಗುರುತಿಸಿಕೊಂಡಿದ್ದಾರೆ. ರಾಷ್ಟ್ರಪತಿ ಹುದ್ದೆಯಲ್ಲಿದ್ದಾಗ ಬರುತ್ತಿದ್ದ 10 ಸಾವಿರ ವೇತನ ತಿರಸ್ಕರಿಸಿ ಜೀವನಕ್ಕೆ ಅವಶ್ಯಕತೆಗೆ ಬೇಕಾದ 2 ಸಾವಿರ ರು. ಮಾತ್ರ ಪಡೆಯುತ್ತಿದ್ದರು. ಅವರ ಅದರ್ಶ ಶಿಕ್ಷಕರಿಗೆ ಸ್ಪೂರ್ತಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾದುದ್ದು. ಸಮಾಜಕ್ಕೆ ಒಳ್ಳೆಯ ಪ್ರಜೆಯನ್ನು ನೀಡುವ ಶಿಕ್ಷಕರಾಗಬೇಕು. ರಾಷ್ಟ್ರಿಪತಿಯಾಗಿದ್ದ ಸರ್ವಪಲ್ಲಿ ರಾಧಕೃಷ್ಣನ್ ಅವರು ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಿ ಎಂದು ಹೇಳಿರುವುದು ಶಿಕ್ಷಕರಿಗೆ ಸಿಗುವ ಗೌರವವಾಗಿದೆ ಎಂದರು.

ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಯಮದೂರು ಸಿದ್ದರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವಪಲ್ಲಿ ರಾಧಕೃಷ್ಣ ಅವರು ಅದರ್ಶ ಶಿಕ್ಷಕರಾಗಿದ್ದಾರೆ. ಶಿಕ್ಷಣದ ತತ್ವಗಳಲ್ಲಿ ದೃಢವಾದ ನಂಬಿಕೆ ಹೊಂದಿದ್ದರು ಮತ್ತು ಆಧುನಿಕ ಭಾರತೀಯ ಚಿಂತನೆ ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಾಲಸುಭ್ರಮಣ್ಯ, ಜಿ.ಶೀಲಾ, ಕಸಾಪ ತಾಲೂಕು ಅಧ್ಯಕ್ಷ ಎಲ್.ಚೇತನ್‌ಕುಮಾರ್, ಉಪನ್ಯಾಸಕರಾದ ರಾಜು, ಅನುರಾಧ, ಶಿವನಾಗೇಂದ್ರ, ಗಂಗಧಾರ್, ಸೋಮಶೇಖರ್, ಶ್ರೀನಿಧಿ ಸೇರಿದಂತೆ ಇತರರು ಇದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ