ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸಂಸ್ಕೃತಿ ಚಿಂತಕಿ ವಿನೋದಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಮಕ ಕಲೆಯು ಕಾವ್ಯದ ಭಾವ ಮತ್ತು ಅರ್ಥವನ್ನು ಜನರಿಗೆ ತಲುಪಿಸುವ ವಿಶಿಷ್ಟ ಕಲಾಪ್ರಕಾರವಾಗಿದ್ದು, ಇಂತಹ ಕಾರ್ಯಕ್ರಮಗಳು ಕನ್ನಡದ ಬಗ್ಗೆ ಅಭಿಮಾನ ಮೂಡಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾ.ವಿ.ಪ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್) ಮಾತನಾಡಿ, ಮಹಾಭಾರತದ ವಿರಾಟ ಪರ್ವವು ಧೈರ್ಯ, ತಾಳ್ಮೆ, ಕರ್ತವ್ಯಪ್ರಜ್ಞೆ ಹಾಗೂ ಜೀವನಮೌಲ್ಯಗಳನ್ನು ಸಾರುವ ಮಹತ್ವದ ಕಾವ್ಯಭಾಗವಾಗಿದೆ. ಗಮಕ ವಾಚನ ಮತ್ತು ವ್ಯಾಖ್ಯಾನದ ಮೂಲಕ ಕಾವ್ಯದ ಅಂತರಂಗವನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಭಾರತ ವಿಕಾಸ ಪರಿಷತ್ತಿನ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಗಮಕ ವಾಚನ, ಗೀತಗಾಯನ ಮತ್ತು ಕವಿಗೋಷ್ಠಿಯಂತಹ ಕಾರ್ಯಕ್ರಮಗಳು ಕನ್ನಡದ ಶ್ರೀಮಂತ ಕಲಾಪ್ರಕಾರಗಳನ್ನು ಪರಿಚಯಿಸುವುದರೊಂದಿಗೆ ಸಾಂಸ್ಕೃತಿಕ ಜಾಗೃತಿಗೂ ಸಹಕಾರಿಯಾಗುತ್ತವೆ ಎಂದರು.
ಭಾ.ವಿ.ಪ ಪ್ರಾಂತ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮಾತನಾಡಿದರು.
ಬೊಂಬೆ ನಾಡು ಗಮಕ ಪರಂಪರೆ ಸಂಸ್ಕೃತಿ ಟ್ರಸ್ಟ್‌ನ ಸಂಚಾಲಕರಾದ ಮಮತಾ ಮತ್ತು ಯೋಗಾನಂದ, ಭಾರತ ವಿಕಾಸ ಪರಿಷತ್ತಿನ ಉಪಾಧ್ಯಕ್ಷ ಕರಿಯಪ್ಪ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಗೋವಿಂದಯ್ಯ, ಕಾರ್ಯದರ್ಶಿ ಕಾಡಯ್ಯ, ತಿಪ್ರೇಗೌಡ, ಸೇರಿದಂತೆ ಹಲವರು ಇದ್ದರು.