ಕನ್ನಡಪ್ರಭ ವಾರ್ತೆ ಸಿದ್ದಾಪುರ
ತಾಲೂಕಿನ ಕ್ಯಾದಗಿ ಗ್ರಾಪಂ ವ್ಯಾಪ್ತಿಯ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಅಘನಾಶಿನಿ ನದಿ ಜೋಡಣೆ ವಿರೋಧ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಆಕ್ಷೇಪ ಪತ್ರದ ಸ್ವೀಕೃತಿ ಪ್ರತಿ ಮತ್ತು ಯುನಿಸ್ಕೋ ವಿಶ್ವ ಸಂಸ್ಥೆಯಿಂದ ಹೋರಾಟಗಾರರ ವೇದಿಕೆಗೆ ಬಂದಿರುವ ಉತ್ತರದ ಪ್ರತಿ ವಿತರಿಸಿ ಮಾತನಾಡಿದರು.
ಸಾರ್ವತ್ರಿಕವಾಗಿ ಅಘನಾಶಿನಿ ನದಿ ಜೋಡಣೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ದಾಖಲೆಯ ೨೦ ಸಾವಿರಕ್ಕೂ ಮಿಕ್ಕಿ ಆಕ್ಷೇಪ ಪತ್ರ ಉಚಿತವಾಗಿ ದಾಖಲಿಸಿರುವುದು ಮಹತ್ವ ಪೂರ್ಣ ಹೋರಾಟದ ಹೆಜ್ಜೆಯಾಗಿದೆ. ಅಲ್ಲದೇ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನದಿ ಜೋಡಣೆ ವಿರೋಧಿ ಹೋರಾಟ ವೇದಿಕೆ ವಿತರಿಸಿದಂತೆ ಆಕ್ಷೇಪ ಪತ್ರವನ್ನು ಹೋರಾಟಗಾರರ ವೇದಿಕೆಯು ಉಚಿತವಾಗಿ ಮುದ್ರಿಸಿ, ಸ್ವೀಕೃತಿ ಪ್ರತಿ ವಿತರಿಸಲಾಗಿದೆ ಎಂದರು.ಕೆ.ಟಿ. ನಾಯ್ಕ ಹೆಗ್ಗೇರಿ, ರಾಜು ನಾಯ್ಕ ಕಿರೇಕೊಡ, ಶ್ರೀಧರ್ ಹೆಗಡೆ ಕೆರೆಮನೆ, ಆರ್ .ಆರ್ . ಹೆಗಡೆ ಐನಕೈ, ರಾಮಕೃಷ್ಣ ನಾಯ್ಕ ಶಿರೂರು ಸಭೆಯಲ್ಲಿ ಮಾತನಾಡಿದರು. ಚಂದ್ರಕಾಂತ ಆರ್. ನಾಯ್ಕ ಹೆಗ್ಗೇರಿ, ಆರ್.ಟಿ. ನಾಯ್ಕ ಅರಳಿಮಕ್ಕಿ, ಕೆ.ಡಿ. ರಾಮಪ್ಪ ಕೊಂಡ್ಲಿ, ಮಾರುತಿ ಬಿಳ್ಳುಮನೆ, ಶ್ರೀನಿವಾಸ ಕಲ್ಲಾಳ , ಪ್ರಕಾಶ ಜಿ. ನಾಯ್ಕ ಕ್ಯಾದಗಿ, ಶ್ರೀಪಾದ ನಾಯ್ಕ ಶಿರೂರು, ಸಂತೋಷ ವಿ. ನಾಯ್ಕ ಕ್ಯಾದಗಿ, ರವೀಂದ್ರ ಭಟ್ಟ ಕಲ್ಲಾಳ, ರಾಘವೇಂದ್ರ ಬಿಳ್ಳುಮನೆ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.