ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಉಸ್ತುವಾರಿ ಸಚಿವರು. ಸ್ಥಳಿಯ ಶಾಸಕರು ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಿ ಭೂಮಿ ಕಳೆದುಕೊಂಡ ಪ್ರತಿ ರೈತನ ಕುಟುಂಬಕ್ಕೆ ಒಂದು ಉದ್ಯೋಗ, ಉತ್ತಮ ಹೆಚ್ಚಿನ ಬೆಲೆ, ನೀಡಿದಲ್ಲಿ ನಿಮ್ಮ ಪೋಟೋಗಳನ್ನು ಪ್ರತಿ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತೇವೆಂದರು. ಜಿಲ್ಲಾ ಉಸ್ತುವಾರಿ ಸಚಿವರು ಹಸಿರು ಶಾಲು ಹಾಕಿಕೊಂಡಿರುವವರು ಮಾತ್ರ ರೈತರು ಹಸಿರು ಶಾಲು ಹಾಕದೇ ಇರುವವರೆಲ್ಲ ರೈತರಲ್ಲವೇ, ಎಂಬ ಹೇಳಿಕೆ ಸಮಂಜಸವಾಗಿರುತ್ತದೆ. ಏಕೆಂದರೆ ಕೇವಲ ನೂರು ಎಕರೆ ಜಮೀನು ಇರುವವರು ಮಾತ್ರ ರೈತರೇ, ದಿನಕ್ಕೆ ನೂರು ಲೀಟರ್ ಹಾಲು ಉತ್ಪಾದನೆ ಮಾಡುವವರು ರೈತರೇ ಅಥವಾ ರೈತ ಶಾಲು ಹಾಕಿಕೊಂಡವರು ಮಾತ್ರ ರೈತರು ಎಂದು ಯಾವುದಾದರೂ ಕಾನೂನುನಲ್ಲಿ ದಾಖಲೆ ಇದಿಯಾ?.
ನಮ್ಮ ಸಂವಿದಾನದ ಅಡಿಯಲ್ಲಿ ಬಾಯಿಂದ ಆಹಾರ ಸೇವೆನೆ ಮಾಡುವ ಪ್ರತಿಯೊಬ್ಬ ಭಾರತೀಯನಿಗೂ ಕೂಡ ವವ್ಯಸಾಯ ಮಾಡಲಿ ಮಾಡದೇ ಇರಲಿ ರೈತನ ಬಗ್ಗೆ ಧ್ವನಿ ಎತ್ತಬಹುದು. ರೈತರ ಹೋರಾಟಗಳಲ್ಲಿ ಬಾಗಿಯಾಗಬಹುದು. ಜಂಗಮಕೋಟೆ ಹೊಬಳಿಯಲ್ಲಿ ಪಿ ಎನ್ ಎಲ್, ಕಂಪನಿಯ ಹೆಸರಿನಲ್ಲಿ ಕೆಲ ಮಧ್ಯವರ್ತಿಗಳು ಅಮಾಯಕ ರೈತರಿಗೆ ಹೆಚ್ಚಿನ ಬೆಲೆ ನೀಡುವುದಾಗಿ ನಂಬಿಸಿ ಕೇವಲ 50 ಸಾವಿರ 1 ಲಕ್ಷ ಹಣ ನೀಡಿ ಜಿಪಿಎ, ಮಾಡಿಸಿಕೊಂಡು ಮೊಸ ಮಾಡಿದ್ದಾರೆ. ಆದರೆ ಪಹಣಿಯಲ್ಲಿ ರೈತರ ಹೆಸರು ಇರುವ ಕಾರಣ ಅವರ ಅಭಿಪ್ರಾಯ ಕೇಳಿದ್ದಾರೆ, ಇದರಲ್ಲಿ ತಪ್ಪೆನಿದೆ, ನೀವು ಪಿಎಸ್ ಎಲ್ ಕಂಪನಿಯ ಪರವಾಗಿ ಮಾತನಾಡಲು ನೀವು ಆ ಅಕ್ರಮ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದೀರಾ? ಎಂದು ಕೆಐಡಿಬಿಗೆ ಜಮೀನು ನೀಡಲು ವಿರೋಧಿಸುತ್ತಿರುವ ಬಣವನ್ನು ಪ್ರಶ್ನಿಸಿದರು. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸರ್ಕಾರದ ಕಾನೂನು ಯಾವ ರೀತಿ ಇದಿಯೋ ಆ ರೀತಿ ಅವರಿಗೆ ದತ್ತವಾದ ಅಧಿಕಾರವನ್ನು ಉಪಯೋಗಿಸಿಕೊಂಡು ತ್ವರಿತ ಗತಿಯಲ್ಲಿ ಜಮೀನು ಒಪ್ಪಿಗೆ ನೀಡಿದ ರೈತರಿಗೆ ಉತ್ತಮ ಬೆಲೆ, ಮನೆಗೊಂದು ಉದ್ಯೋಗ ನೀಡಿ ಬಹು ಬೇಗ ಕೈಗಾರಿಕೆಗಳನ್ನು ಸ್ಥಾಪಿಸಿ ಈ ಭಾಗದ ನಿರುದ್ಯೋಗ ನಿವಾರಣೆ ಮಾಡಬೇಕೇಂದು ಮನವಿ ಮಾಡಿದರು.ರಾಜ್ಯ ಉಪಾದ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಎ,ಎನ್,ಮುನೇಗೌಡ, ಎನ್,ಸಿ ಸುಬ್ರಮಣಿ, ನಡುಪಿನಾಯಕನಹಳ್ಳಿ ವಾಸುದೇವ ಮೂರ್ತಿ ,ಬಸವಪಟ್ಟಣ ಆಂಜಿನಪ್ಪ, ಪ್ರಭುಗೌಡ,ಮದುರಾಮದಾಸ್, ಯಣ್ಣಂಗೂರು ಪ್ರದೀಪ್, ನರಸಿಂಹಮೂರ್ತಿ, ವೈ,ಎಸ್ ಮದು, ರವಿ,ಪ್ರಮೋದ್, ಜಂಗಮಕೊಟೆ ಮಂಜುನಾದ್, ಚೀಂಮಗಲ ಚೆನ್ನಪ್ಪ, ಎಚ್,ಎನ್, ಕದೀರೇಗೌಡ, ಹುಸೇನ್ ಸಾಬ್ ಇದ್ದರು.