ಸಮಾಜದ ಋಣ ತೀರಿಸಲು ಮುಂದಾಗಿ: ರವಿ ಹೆಗಡೆ

KannadaprabhaNewsNetwork |  
Published : Jul 13, 2026, 01:15 AM IST
ಸಿದ್ದಾಪುರ ಲಯನ್ಸ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರವಿ ಹೆಗಡೆ ಹೂವಿನಮನೆ ಮಾತನಾಡಿದರು. | Kannada Prabha

ಸಾರಾಂಶ

ನಮ್ಮ ದುಡಿಮೆಯ ಕೆಲಭಾಗವನ್ನು ಸಮಾಜಸೇವೆಗಾಗಿ ವಿನಿಯೋಗಿಸಬೇಕು. ಜವಾಬ್ದಾರಿಯುತ ಸ್ಥಾನಗಳ ಮಹತ್ವ ಅರಿತು ಸಮಾಜದ ಋಣ ತೀರಿಸಲು ಮುಂದಾಗಬೇಕು.

ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ನಮ್ಮ ದುಡಿಮೆಯ ಕೆಲಭಾಗವನ್ನು ಸಮಾಜಸೇವೆಗಾಗಿ ವಿನಿಯೋಗಿಸಬೇಕು. ಜವಾಬ್ದಾರಿಯುತ ಸ್ಥಾನಗಳ ಮಹತ್ವ ಅರಿತು ಸಮಾಜದ ಋಣ ತೀರಿಸಲು ಮುಂದಾಗಬೇಕು ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ರವಿ ಹೆಗಡೆ ಹೂವಿನಮನೆ ಹೇಳಿದರು.

ಸ್ಥಳೀಯ ಬಾಲಭವನದಲ್ಲಿ ೨೦೨೬-೨೭ನೇ ಸಾಲಿನ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಗಿರೀಶ ಕುಚ್ಚಿನಾಡ್ ಮಾತನಾಡಿ, ಸಮಾಜದಲ್ಲಿ ಅನೇಕರು ಅಶಕ್ತರಿದ್ದಾರೆ. ಅವರಿಗೆ ಆರೋಗ್ಯ, ಶಿಕ್ಷಣ, ಕಣ್ಣಿನ ಶಸ್ತ್ರಚಿಕಿತ್ಸೆ ಅಲ್ಲದೇ ಇತರ ಕಾರ್ಯದೊಂದಿಗೆ ಲಯನ್ಸ್ ಸಂಸ್ಥೆ ಶಾಶ್ವತವಾಗಿ ತನ್ನ ಸೇವಾ ಕಾರ್ಯಕೈಗೊಳ್ಳುತ್ತಿದೆ. ಜಗತ್ತಿನ ೧೫ ಲಕ್ಷದಷ್ಟು ಸದಸ್ಯರು ತಮ್ಮಿಂದಾದ ಸೇವೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದರು.

ಇದೇ ಸಂದರ್ಭ ಸಹಕಾರ ರತ್ನ, ಸಹಕಾರ ಶಿರೋಮಣಿ ಪ್ರಶಸ್ತಿ ಪಡೆದ ಲಯನ್ ಆರ್.ಎಂ. ಹೆಗಡೆ ಬಾಳೇಸರ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಉಪನಿರ್ದೇಶಕ (ಅಭಿಯೋಜನಾ ಇಲಾಖೆ) ವಿ.ಬಿ.ನಾಯ್ಕ ಹೊಸೂರು, ಶಿರಸಿ ಲಯನ್ಸ್ ಕ್ಲಬ್‌ನ ಮಾಜಿ ಪ್ರಾದೇಶಿಕ ಅಧ್ಯಕ್ಷ ಅಶೋಕ ಹೆಗಡೆ ಕುಮಟಾ, ಲಯನ್ಸ್ ಕ್ಲಬ್ಬಿನ ವಲಯ ಅಧ್ಯಕ್ಷೆ ಮಂಗಲಾ ನಾಯಕ ಅಭಿನಂದನಾ ಮಾತನಾಡಿದರು.

ನಿರ್ಗಮಿತ ಅಧ್ಯಕ್ಷ ರಾಘವೇಂದ್ರ ಭಟ್ಟ ಸ್ವಸ್ತಿಕ್, ಕಾರ್ಯದರ್ಶಿ ಆಕಾಶ ಹೆಗಡೆ, ಕೋಶಾಧ್ಯಕ್ಷ ಇಂದುಧರ ಪಾಟೀಲರನ್ನು ಗೌರವಿಸಲಾಯಿತು. ರಾಜೇಶ ಹೆಗಡೆ ನೂತನ ಸದಸ್ಯತ್ವ ಪಡೆದರು.

ನೂತನ ಅಧ್ಯಕ್ಷರಾಗಿ ವಕೀಲ ಎಂ.ಆರ್. ಪಾಟೀಲ ಹೊಸೂರು, ಕಾರ್ಯದರ್ಶಿಯಾಗಿ ಇಂದುಧರ ಪಾಟೀಲ, ಕೋಶಾಧ್ಯಕ್ಷರಾಗಿ ಶ್ಯಾಮ್ ಮಲ್ಲಪಳ್ಳಿರವರು ಅಧಿಕಾರ ಸ್ವೀಕರಿಸಿದರು. ಅರ್ಚನಾ ಹೆಗಡೆ ಪ್ರಾರ್ಥಿಸಿದರು. ರಾಘವೇಂದ್ರ ಭಟ್ಟ ಸ್ವಸ್ತಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಆಕಾಶ ಹೆಗಡೆ ಧ್ವಜವಂದನೆ ನೆರವೇರಿಸಿದರು. ಸಿ.ಎಸ್.ಗೌಡರ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಸತೀಶ ಗೌಡರ್ ನಿರ್ವಹಿಸಿದರು. ಇಂದುಧರ ಪಾಟೀಲ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾನಗರ ಪಾಲಿಕೆಯ ಆರಂಭ ಶೂರತ್ವ; ಮತ್ತೆ ಫುಟ್‌ಪಾತ್ ಅತಿಕ್ರಮಣ ಮಾಡಿದ ವ್ಯಾಪಾರಿಗಳು
ವರ್ತಮಾನದ ಅರಿವಿನಿಂದ ವ್ಯಕ್ತಿತ್ವ ವಿಕಸನ: ಯಮುನಾ ಶ್ರೀನಿಧಿ