- ಹಿಂದೂ ಸಮಾಜದ ಅಸ್ತಿತ್ವಕ್ಕೆ ಎದುರಾಗಿರುವ ಸವಾಲನ್ನು ಮೆಟ್ಟಿ ನಿಲ್ಲಲು ಸಲಹೆ - - -
ಹಿಂದೂ ಸಮಾಜವು ತನ್ನ ಅಸ್ತಿತ್ವಕ್ಕೆ ಎದುರಾದ ಸವಾಲುಗಳನ್ನು ಎದುರಿಸಲು, ಕಳೆದು ಹೋದ ಸ್ವಾಭಿಮಾನವನ್ನು ಮರು ಸ್ಥಾಪಿಸಲು ಸನ್ನದ್ಧವಾಗಬೇಕು ಎಂದು ಆರ್‌ಎಸ್‌ಎಸ್ ಅಖಿಲ ಭಾರತ ಸಹ-ಸರ ಕಾರ್ಯವಾಹರಾದ ಮುಕುಂದ್ ಜೀ ಹೇಳಿದರು.
ನಗರದ ಕೊಂಡಜ್ಜಿ ರಸ್ತೆಯ ಶ್ರೀ ದುರ್ಗಾಂಬಾ ವಸತಿ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಸಮಾವೇಶ, ''ಹಿಂದೂ ಸಮಾಜೋತ್ಸವ-ಪಂಚಜನ್ಯ'' ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘವು 100 ವರ್ಷ ಪೂರೈಸುತ್ತಿರುವ ಸಂದರ್ಭವು ಕೇವಲ ಆಚರಣೆಯಲ್ಲ, ಬದಲಿಗೆ ಹಿಂದೂ ಸಮಾಜ ಒಗ್ಗೂಡಿಸುವ ಸಂಕಲ್ಪದ ವರ್ಷವಾಗಿದೆ. ಇನ್ನಾದರೂ ಹಿಂದೂಗಳು ಕುಂಭಕರ್ಣನ ನಿದ್ರೆ ಬಿಟ್ಟು ಜಾಗೃತರಾಗಬೇಕು. ಸಮಾಜದ ಇಂದಿನ ಸ್ಥಿತಿಗೆ ಮೂರು ದೋಷಗಳೇ ಕಾರಣವಾಗಿವೆ. ಆತ್ಮವಿಸ್ಮೃತಿ, ಸ್ವಾರ್ಥ ಮನೋಭಾವ, ಅಸಂಘಟನೆಗಳೇ ಇಂತಹ ಪರಿಸ್ಥಿತಿ ತಂದೊಡ್ಡಿವೆ ಎಂದರು.ಸಾನಿಧ್ಯ ವಹಿಸಿದ್ದ ಯರಗುಂಟೆ ಶ್ರೀ ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ಮಾತನಾಡಿ, ಹಿಂದೂ ಸಂಗಮವೆಂದರೆ ಎಲ್ಲರೂ ಒಂದೆಡೆ ಸೇರುವುದು. ಈ ಸಂಗಮದಲ್ಲಿ ನಾಡು ಮತ್ತು ದೇಶದ ಅಭಿವೃದ್ಧಿಯ ಬಗ್ಗೆ ಮಾತ್ರ ಚರ್ಚೆಯಾಗಬೇಕು. ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಶಾಂತಿಪ್ರಿಯರಾಗಿ ಬಾಳಬೇಕು ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಆಲೂರು ನಿಂಗರಾಜ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಕಲ್ಯಾಣಮ್ಮ, ವೆಂಕಟೇಶ ಇತರರು ವೇದಿಕೆಯಲ್ಲಿದ್ದರು.- - -
-29ಕೆಡಿವಿಜಿ21, 22: ಕಾರ್ಯಕ್ರಮವನ್ನು ಶ್ರೀ ಪರಮೇಶ್ವರ ಸ್ವಾಮೀಜಿ, ಮುಕುಂದ್‌ಜೀ ಉದ್ಘಾಟಿಸಿದರು.