ಚಿತ್ರದುರ್ಗ: ಪಹಲ್ಗಾಂನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಭಯೋತ್ಪಾದಕರನ್ನು ಸದೆ ಬಡಿಯಲು ಮುಂದಾಗಿರುವ ಭಾರತೀಯ ಸೈನಿಕರ ಉತ್ತೇಜಿಸಿ ಮುಸ್ಲೀಮರು ಶನಿವಾರ ಇಲ್ಲಿನ ಬಡಾಮಕಾನ್‍ನ ಮುಂಭಾಗ ವಿಜಯೋತ್ಸವ ಆಚರಿಸಿದರು.
ಚಿತ್ರದುರ್ಗ: ಪಹಲ್ಗಾಂನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಭಯೋತ್ಪಾದಕರನ್ನು ಸದೆ ಬಡಿಯಲು ಮುಂದಾಗಿರುವ ಭಾರತೀಯ ಸೈನಿಕರ ಉತ್ತೇಜಿಸಿ ಮುಸ್ಲೀಮರು ಶನಿವಾರ ಇಲ್ಲಿನ ಬಡಾಮಕಾನ್‍ನ ಮುಂಭಾಗ ವಿಜಯೋತ್ಸವ ಆಚರಿಸಿದರು. ಸೈಯದ್ ಮೊಹಿದ್ದೀನ್(ಚೋಟು) ಮಾತನಾಡಿ, ಭಾರತದ ಯೋಧರಿಗೆ ಉಗ್ರರನ್ನು ಸದೆಬಡಿಯುವಂತ ಶಕ್ತಿ ಕೊಡಲಿ. ಭಾರತದಲ್ಲಿ ಹುಟ್ಟಿ ಇಲ್ಲಿನ ಅನ್ನ, ನೀರು, ಗಾಳಿ ಸೇವಿಸುತ್ತಿರುವ ನಾವುಗಳು ಇಂತಹ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದರು.
ಬೇರೆ ಧರ್ಮವನ್ನು ಪ್ರೀತಿಸುವುದು ಇಸ್ಲಾಂ ಧರ್ಮದ ಧ್ಯೇಯ. ಉಗ್ರಗಾಮಿಗಳು ಇಸ್ಲಾಂಮಿಗಳಲ್ಲ. ಮಾನವ ಕುಲಕ್ಕೆ ಕಂಟಕವಾಗಿರುವ ಉಗ್ರರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ದೇಶದ ಪ್ರಧಾನಿ ಮೋದಿ ಅವರು ಸಿಂದೂರ ಆಪರೇಷನ್‍ನಿಂದ ಹಿಂದೆ ಸರಿಯಬಾರದು. ಭಾರತವನ್ನು ಕೆಣಕಿದ ವಿರೋಧಿ ದೇಶ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು. ಧರ್ಮಗುರುಗಳಾದ ಸೈಯದ್ ಶಬ್ಬೀರ್ ಅಶ್ರಫಿ, ತಬ್ರೇಜ್, ಸೈಯದ್ ನೂರ್ ಅಹಮದ್, ಮಹಮದ್ ಯಾಸಿನ್, ಮಹ್ಮದ್ ಸಮೀ, ಸೈಯದ್ ಅಜರ್, ವಸೀಂ ಉಸ್ಮಾನ್, ಭಾಷ, ಜಬೀವುಲ್ಲಾ, ಮುಜ್ಜು, ಫಹಾದ್, ಶಂಷುದ್ದಿನ್, ಫರ್ಮಾನ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.