ಕನ್ನಡಪ್ರಭ ವಾರ್ತೆ ಹಲಗೂರು
ಕ್ಲಬ್‌ನ ಪ್ರತಿ ಸದಸ್ಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿತು ನಿರಂತರ ಸೇವಾ ಕಾರ್ಯ ಮಾಡಬೇಕು ಎಂದು ಲಯನ್ಸ್ ಪಿಎಂಜೆಎಫ್ ಕೃಷ್ಣೇಗೌಡ ಕರೆ ನೀಡಿದರು.ವಾಬೇಗೌಡ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಹಲಗೂರು ಅನಿಕೇತನ ಲಯನ್ಸ್ ಕ್ಲಬ್‌ನ ಜಗದೀಶ್ ನೇತೃತ್ವದ ನೂತನ ತಂಡದ ಪದವಿ ಸ್ವೀಕಾರ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು.
ಪದಾಧಿಕಾರಿಗಳು ಕ್ಲಬ್‌ನಲ್ಲಿ ಹಣಕಾಸಿನ ವ್ಯವಹಾರ ಮಾಡುವಾಗ ಪಾರದರ್ಶಕವಾಗಿರಬೇಕು. ವಿವಿಧ ಸಂಘ ಸಂಸ್ಥೆಗಳು ಮತ್ತು ದಾನಿಗಳು ನೀಡುವ ಚೆಕ್ ಮತ್ತು ಹಣವನ್ನು ಸೇವಾ ನಿಧಿಗೆ ಜಮೆ ಮಾಡಿ ನಂತರ ಸೇವಾ ಕಾರ್ಯಗಳಲ್ಲಿ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸದಸ್ಯರನ್ನಾಗಿ ನೋಂದಾಯಿಸಿ ಸೇವಾ ಚಟುವಟಿಕೆಗೆ ತೊಡಗಿಸುವಂತೆ ಪ್ರೇರೆಪಿಸಬೇಕೆಂದು ಸಲಹೆ ನೀಡಿದರು.ನೂತನ ಅಧ್ಯಕ್ಷ ಜಗದೀಶ್ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆ, ಆರೋಗ್ಯ ತಪಾಸಣೆ, ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಗುರಿ ಹೊಂದಲಾಗಿದೆ. ಕ್ಲಬ್ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ಲಯನ್ಸ್ ಉಪ ರಾಜ್ಯಪಾಲ ಮತಿದೇವಕುಮಾರ್, ಸಂಪುಟ ಕಾರ್ಯದರ್ಶಿ ಎಂ.ಸಿದ್ದೇಗೌಡ, ಪ್ರಾಂತೀಯ ಅಧ್ಯಕ್ಷ ಸೋಮೇಗೌಡ, ವಲಯ ಅಧ್ಯಕ್ಷ ಚಿಕ್ಕೇಗೌಡ, ಜಿಲ್ಲಾ ಸಂಯೋಜಕ ವಿ.ಹರ್ಷ, ಜಿಲ್ಲಾ ಸಹ ಕಾರ್ಯದರ್ಶಿ ಹನುಮಂತಯ್ಯ, ಅನಿಕೇತನ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷರಾದ ವೆಂಕಟೇಶ್, ಕಾರ್ಯದರ್ಶಿ ದರ್ಶನ್, ವೀರಣ್ಣಗೌಡ, ನೂತನ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಎಚ್.ಕೆ.ಮೂರ್ತಿ ಖಜಾಂಚಿ ಮೋದಿ ರವಿ, ಶ್ರೀಧರ್, ಹರೀಶ್, ಸುರೇಶ್, ಲಿಂಗರಾಜು ಸೇರಿದಂತೆ ಹಲವರು ಇದ್ದರು.ಆಗಸ್ಟ್ 13 ರಂದು ಸರ್ವ ಸದಸ್ಯರ ವಾರ್ಷಿಕ ಸಭೆ
ಮಂಡ್ಯ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಅಧ್ಯಕ್ಷ ಕೆ.ನಾಗೇಶ್ ಅಧ್ಯಕ್ಷತೆಯಲ್ಲಿ ಆಗಸ್ಟ್ 13 ರಂದು ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಯಲಿದೆ. ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷ ಶಂಭುಗೌಡ ಎಸ್. ಹಾಗೂ ರಾಜ್ಯ ಎಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು, ತಾಲೂಕು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಿರ್ದೇಶಕರು ಮತ್ತು ಯೋಜನಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಿರ್ದೇಶಕರು, ನಾಮನಿರ್ದೇಶತ ನಿರ್ದೇಶಕರು ಮತ್ತು ವೃಂದಸಂಘದ ಅಧ್ಯಕ್ಷರುಗಳು ಪದಾಧಿಕಾರಿಗಳು, ಜಿಲ್ಲೆಯ ಇಲಾಖೆ ನೌಕರರು ಭಾಗವಹಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವಿನಯ್ ಕುಮಾರ್ ತಿಳಿಸಿದ್ದಾರೆ.