ಆನಂದಪುರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಶತಮಾನಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿಯರಾದ ಶೀಲಾ ಮತ್ತು ನಾಗರತ್ನ ಅವರನ್ನು ಮತ್ತೆ ಇದೇ ಶಾಲೆಗೆ ನಿಯೋಜನೆ ಮಾಡುವಂತೆ ಒತ್ತಾಯಿಸಿ ಪೋಷಕರು ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪೋಷಕರು ಶುಕ್ರವಾರ ಶಾಲೆಯ ಕಡೆಗೆ ಧಾವಿಸಿದ್ದು, ವರ್ಗಾವಣೆಗೊಂಡ ಶಿಕ್ಷಕಿಯರನ್ನೇ ಇದೇ ಶಾಲೆಗೆ ನಿಯೋಜನೆ ಮಾಡಬೇಕು ಇಲ್ಲವಾದಲ್ಲಿ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಒತ್ತಾಯಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಶಾಲಾ ಅಭಿವೃದ್ಧಿ ಸಮಿತಿಯವರು ಸಭೆಯಲ್ಲಿ ವಿಷಯವನ್ನು ಚರ್ಚಿಸಿ ಅನುಮೋದನೆ ಮಾಡಿ, ಶಾಲೆಗೆ ಇಬ್ಬರೂ ಶಿಕ್ಷಕರನ್ನು ನಿಯೋಜನೆ ಮಾಡಿಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ರವಾನೆ ಮಾಡಿದ್ದಾರೆ.ಶಾಲಾ ಸಮಿತಿಯ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷೆ ಸುಜಾತ, ಪೋಷಕರಾದ ಪ್ರಾರ್ಥನಾ, ರಶ್ಮಿ, ಆಶಾ ,ರೇಖಾ, ಭಾಗ್ಯ, ಜಯಮ್ಮ, ಪಾರ್ವತಿ, ಪ್ರಶಾಂತ್, ನಾರಾಯಣಪ್ಪ, ವೆಂಕಟೇಶ್, ಸೇರಿದಂತೆ ಅನೇಕ ಪೋಷಕರು ಉಪಸ್ಥಿತರಿದ್ದರು.