ಕನ್ನಡಪ್ರಭ ವಾರ್ತೆ ಚವಡಾಪುರ
ಪಟ್ಟಣದ ನಿವಾಸಿ ಗುರುಶಾಂತಪ್ಪ ಗುಣಾರಿ ಮಾತನಾಡಿ, ಅಫಜಲ್ಪುರ ಪಟ್ಟಣದ 23 ವಾರ್ಡ್‌ಗಳಿಗೆ ಪುರಸಭೆಯಿಂದ ಸರಬರಾಜು ಆಗುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಶೌಚಕ್ಕೂ ಇಷ್ಟು ಗಲೀಜು ನೀರನ್ನು ಬಳಕೆ ಮಾಡುವುದಿಲ್ಲ ಅಂತ ನೀರನ್ನು ಕುಡಿಯಲು ಸರಬರಾಜು ಮಾಡುತ್ತಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳೆದುರು ಅಳಲು ತೋಡಿಕೊಂಡರು. ಅಹವಾಲು ಸ್ವಿಕಾರದ ಬಳಿಕ ಪುರಸಭೆ ನೀರು ಶುದ್ದಿಕರಣ ಘಟಕಕ್ಕೆ ಭೇಟಿ ನೀಡಿ ಸಮಸ್ಯೆ ವಿಕ್ಷಿಸಿ ಸರಿಪಡಿಸಲು ಪುರಸಭೆಯವರಿಗೆ ಸೂಚಿಸುವುದಾಗಿ ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ತಿಳಿಸಿದರು.
ಮಾಶಾಳ ಗ್ರಾ.ಪಂ ಉಪಾಧ್ಯಕ್ಷ ನಿಂಗಪ್ಪ ಪಾಟೋಳಿ ಮಾತನಾಡಿ ತಾಲೂಕಿನ ಮಣೂರ ಮತ್ತು ಮಾಶಾಳ ಗ್ರಾಮಗಳಲ್ಲಿ 8 ವರ್ಷಗಳ ಹಿಂದೆ ಬಾಬು ಜಗಜೀವನ್ ರಾಮ ಸಮುದಾಯ ಭವನಗಳನ್ನು ಕಳಪೆ ಮತ್ತು ಅಪೂರ್ಣ ಸ್ಥೀತಿಯಲ್ಲಿವೆ. ಕಾಮಗಾರಿ ಅನುದಾನ ನುಂಗಿ ಹಾಕಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಿದರು. ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳ ವಿಕ್ಷಣೆಗೆ ಕಳಿಸಿ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ಮಾತನಾಡಿ ತಾಲೂಕಿನಾದ್ಯಂತ ಎಷ್ಟು ಪಡಿತರ ವಿತರಣೆ ಅಂಗಡಿಗಳಿವೆ ಎಲ್ಲಾ ಕಡೆಗಳಲ್ಲಿ ವಾರದಲ್ಲಿ ಒಂದು ದಿನ ರಜೆ ಮತ್ತು ದಿನದ ಮದ್ಯಾಹ್ನದ ಊಟದ ಅವಧಿ ಹೊರತು ಪಡಿಸಿ ಬೆ.8ರಿಂದ ರಾತ್ರಿ 8ರ ವರೆಗೆ ಅಂಗಡಿ ತರೆದಿಟ್ಟು ಗ್ರಾಹಕರಿಗೆ ಪಡಿತರ ವಿತರಣೆ ಮಾಡಬೇಕು. ಇಲ್ಲದಿದ್ದರೆ ಅಂತಹ ಅಂಡಿಗಳ ಲೈಸನ್ಸ್ ರದ್ದುಗೊಳಿಸುವುದಲ್ಲದೆ ಅಂಗಡಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು ಸಂಬಂಧಪಟ್ಟ ಅಧಿಕಾರಿಗಳು ತಾಲೂಕಿನಾದ್ಯಂತ ಪಡಿತರ ವಿತರಣೆ ಅಂಗಡಿಗಳ ಮೇಲೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ಮಾಡಿ ಎಂದು ತಾಕೀತು ಮಾಡಿದರು.
ಅಫಜಲ್ಪುರ ಪಟ್ಟಣದ ಕರೆ ಜಾಗ ಒತ್ತುವರಿಯಾಗಿದೆ, ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್, ಡಿವೈಎಸ್‌ಪಿ ಗೀತಾ ಬೇನಹಾಳ, ಪಿಐ ರಾಜಶೇಖರ ಹಳಗೋಧಿ ಸೇರಿದಂತೆ ಅನೇಕರು ಇದ್ದರು.