ಪರಿಹಾರದ ಹಣ ಪಡೆದು ಮುಖ್ಯ ರಸ್ತೆ ಅಗಲೀಕರಣಕ್ಕೆ ಸಹಕರಿಸಿ-ಗಂಗಣ್ಣ ಎಲಿ

KannadaprabhaNewsNetwork |  
Published : Feb 04, 2026, 02:30 AM IST
ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿಯ ಗೌರವಾಧ್ಯಕ್ಷ ಗಂಗಣ್ಣ ಎಲಿ. | Kannada Prabha

ಸಾರಾಂಶ

. ಹೈಕೋರ್ಟ್‌ ತಮ್ಮ ವಾದವನ್ನು ತಿರಸ್ಕರಿಸಿದೆ, ಇನ್ನಾದರೂ ಹಠಮಾರಿ ಧೋರಣೆಯಿಂದ ಹಿಂದೆ ಸರಿದು ಸರ್ಕಾರ ಕೊಡುತ್ತಿರುವ ಪರಿಹಾರದ ಹಣ ಪಡೆದು ಅಗಲೀಕರಣಕ್ಕೆ ಸಹಕರಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮುಖ್ಯರಸ್ತೆ ಮಾಲೀಕರಲ್ಲಿ ಮನವಿ ಮಾಡಿದರು.

ಬ್ಯಾಡಗಿ: ಹೈಕೋರ್ಟ್‌ ತಮ್ಮ ವಾದವನ್ನು ತಿರಸ್ಕರಿಸಿದೆ, ಇನ್ನಾದರೂ ಹಠಮಾರಿ ಧೋರಣೆಯಿಂದ ಹಿಂದೆ ಸರಿದು ಸರ್ಕಾರ ಕೊಡುತ್ತಿರುವ ಪರಿಹಾರದ ಹಣ ಪಡೆದು ಅಗಲೀಕರಣಕ್ಕೆ ಸಹಕರಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮುಖ್ಯರಸ್ತೆ ಮಾಲೀಕರಲ್ಲಿ ಮನವಿ ಮಾಡಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಡಳಿತ ಮತ್ತು ಸಾರ್ವಜನಿಕರೆದುರು ಕೋರ್ಟ್‌ ಮೊರೆ ಹೋಗುವುದಿಲ್ಲ, ಅಗಲೀಕರಣಕ್ಕೆ ಸಹಕರಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ, ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ಜನರೆದುರು ತಾವು ಇದ್ದೂ ಸತ್ತಂತೆ ಆಗಲಿದ್ದೀರಿ, ನಿಮ್ಮ ಹಠ ನಿಮ್ಮ ಆಸ್ತಿ ಉಳಿಸಿಕೊಳ್ಳುವುದಕ್ಕಾದರೂ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ತಾವುಗಳು ತ್ಯಾಗ ಮನೋಭಾವನೆ ತೋರಬೇಕಾಗುತ್ತದೆ, ಅಷ್ಟಕ್ಕೂ ಅಗಲೀಕರಣದಿಂದ ಲಕ್ಷಾಂತರ ಜನರಿಗೆ ಅನುಕೂಲ ಆಗುವುದರ ಜೊತೆಗೆ ನಿಮ್ಮ ಆಸ್ತಿಗಳ ಮೌಲ್ಯ ಹತ್ತುಪಟ್ಟು ಹೆಚ್ಚಾಗಲಿದೆ, ಮುಖ್ಯರಸ್ತೆಗಳಲ್ಲಿನ ಜನರ ವ್ಯಾಪಾರ ದ್ವಿಗುಣಗೊಳ್ಳಲಿದೆ ಎಂದರು.ತೆರೆಮರೆ ಕಸರತ್ತು ನಿಲ್ಲಿಸಿ: ಕಳೆದ ವರ್ಷ ಪ್ರತಿಭಟನೆ ಸಂದರ್ಭದಲ್ಲಿ ತಾವೆಲ್ಲರೂ ಸಾರ್ವಜನಿಕವಾಗಿ ಅಗಲೀಕರಣಕ್ಕೆ ಬೇಷರತ್ (33 ಅಡಿ) ಒಪ್ಪಿಗೆ ನೀಡಿದ ಬಳಿಕವೂ ಕಳೆದ 6 ತಿಂಗಳಿನಿಂದ ಕೋರ್ಟ್‌ ವಿಚಾರವನ್ನು ಮುಂದಿಟ್ಟುಕೊಂಡು ತೆರೆಮರೆಯಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದು ಸರಿಯೇ..? ಇದೀಗ ಹೈಕೋರ್ಟ್‌ ಸಹ ತಮ್ಮ ಅರ್ಜಿಯನ್ನು ವಜಾಗೊಳಿಸಿದೆ, ಇನ್ನಾದರೂ ಪರಿಹಾರ ಪಡೆದು ಅಗಲೀಕರಣಕ್ಕೆ ಸಹಕಾರ ನೀಡುವಂತೆ ಎಂದರು.ಹಠಮಾರಿತನ ಕೈಬಿಡಿ: ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಕಳೆದ 15 ವರ್ಷದಿಂದ ಹೋರಾಟ ಮಾಡುತ್ತ ಬಂದಿದ್ದರೂ ಸಹ, ನಾವು ನ್ಯಾಯಾಲಯ ನೀಡುವ ಆದೇಶಕ್ಕೆ ಬದ್ಧರಾಗಿ ಕೆಲಸ ಮಾಡಿದ್ದೇವೆ, ಈಗಾಗಲೇ ಅಗಲೀಕರಣ ಪ್ರಕ್ರಿಯೆ ಒಂದು ಹಂತಕ್ಕೆ ಬಂದು ತಲುಪಿದೆ, ಅಲ್ಲದೇ ಕಳೆದ 15 ದಿನಗಳಲ್ಲಿ 100ಕ್ಕೂ ಹೆಚ್ಚು ಜನರು ಪರಿಹಾರದ ಮೊತ್ತ ಸಹ ಪಡೆದುಕೊಂಡಿದ್ದಾರೆ, ಕೆಲವೇ ಕೆಲವು ಜನರಿಂದ ಮತ್ತೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ, ನಿಮ್ಮ ಎಲ್ಲಾ ಪ್ರಯತ್ನ ಮಾಡಿದ್ದು ಆಗಿದೆ, ಇನ್ನಾದರೂ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ನಿಮ್ಮ ಹಠಮಾರಿತನವನ್ನು ಬಿಟ್ಟು ಪಟ್ಟಣದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.ಜಿಲ್ಲಾಧಿಕಾರಿಗಳೇ ಶೀಘ್ರ ಕಾಮಗಾರಿ ಆರಂಭಿಸಿ: ಶಿವಯೋಗಿ ಶಿರೂರ ಮಾತನಾಡಿ, ಒಂದು ವೇಳೆ ರಿಂಗರೋಡ್ ಅಥವಾ ಬೈಪಾಸ್, ಬೇಕಾದಲ್ಲಿ ಅಥವಾ ಪರಿಹಾರ ಕಮ್ಮಿಯಾದಲ್ಲಿ ಮತ್ತೆ ಕೋರ್ಟ್‌ ಮೊರೆ ಹೋಗಿ ಪರಿಹಾರ ಪಡೆಯಲು ಅವಕಾಶವಿದೆ, ಅದನ್ನು ಮಾಡುವುದು ಬಿಟ್ಟು ಪದೇಪದೇ ಅಗಲೀಕರಣಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ, ಜಿಲ್ಲಾಧಿಕಾರಿಗಳು ಎಲ್ಲ ಕೆಲಸಗಳನ್ನ ಬದಿಗಿಟ್ಟು ಕೂಡಲೇ ತಾವೇ ಮುಂದೇ ನಿಂತು ಅಗಲೀಕರಣ ಕಾರ್ಯಕ್ಕೆ ಮುಂದಾಗಲಿ ಎಂದರು. ಈ ವೇಳೆ ಎಂ.ಎಲ್. ಕಿರಣಕುಮಾರ ಎಂ.ಎಲ್. ಪಾಂಡುರಂಗ ಸುತಾರ, ಹರೀಶ ರಿತ್ತಿ, ಫರಿದಾಬಾನು ನದೀಮುಲ್ಲಾ ಗುತ್ತೆಮ್ಮ ಮಾಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ