ಅಹಂಕಾರ ಕಳೆಯಲು ಹನುಮಾನ ಚಾಲೀಸಾ ಪಠಿಸಿ

KannadaprabhaNewsNetwork |  
Published : Mar 30, 2026, 03:45 AM IST
ತಾಳಿಕೋಟೆಯಲ್ಲಿ ಹನುಮಾನ ಚಾಲಿಸ ಸಮೀತಿ ವತಿಯಿಂದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾದ ಹನುಮಾನ ಭಾವಚಿತ್ರದ ಶೋಭಾಯಾತ್ರೆಯನ್ನು ಕೆಸರಟ್ಟಿ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಭಾರತೀಯ ಸಂಸ್ಕೃತಿ ಎಂಬುದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಧರ್ಮದಿಂದ ಮಾತ್ರ ಎಂಬುದು ಒಗ್ಗಟ್ಟಿದ್ದರೆ ಮಾತ್ರ ಸಾಧ್ಯವೆಂದು ಕೆಸರಟ್ಟಿಯ ಶ್ರೀ ಶಂಕರಲಿಂಗ ಮಠದ ಬಾಲಶಿವಯೋಗಿ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಭಾರತೀಯ ಸಂಸ್ಕೃತಿ ಎಂಬುದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಧರ್ಮದಿಂದ ಮಾತ್ರ ಎಂಬುದು ಒಗ್ಗಟ್ಟಿದ್ದರೆ ಮಾತ್ರ ಸಾಧ್ಯವೆಂದು ಕೆಸರಟ್ಟಿಯ ಶ್ರೀ ಶಂಕರಲಿಂಗ ಮಠದ ಬಾಲಶಿವಯೋಗಿ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಹೇಳಿದರು.

ಸ್ಥಳೀಯ ಹನುಮಾನ್ ಚಾಲೀಸ ಪಾರಾಯಣ ಸಮೀತಿಯಿಂದ ಹನುಮಾನ ಚಾಲಿಸ ವೃತದ ಪ್ರಥಮ ವಾರ್ಷಿಕೋತ್ಸವ ಕುರಿತು ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು, ಹಿಂದೂ ಸಂಸ್ಕೃತಿ ಸಂರಕ್ಷಿಸಿದರೆ ನಮ್ಮ ದೇಶ ಸಂರಕ್ಷಣೆಯಾಗಲಿದೆ. ಕಾಲಮಾನ ಬದಲಾಗಬಹುದು ಆದರೆ ಇಂದಿನ ದಿನಮಾನದಲ್ಲಿ ಮನಸ್ಸು ಬದಲಾಗುತ್ತಿವೆ. ಅಹಂಕಾರ ಮದ ಮತ್ಸರ ಎಂಬ ಭಾವನೆಗಳು ಹೋಗಬೇಕಾದರೆ ಹನುಮಾನ ಚಾಲಸ ಎಂಬ ಮಂತ್ರ ಪಠಣವನ್ನು ಮಾಡಬೇಕು, ಹಾಡುಗಳನ್ನು ಹಾಡುವದು ಚರಿತ್ರೆಯನ್ನು ಅಳವಡಿಸಿಕೊಳ್ಳುವ ಕಾರ್ಯ ಮಾಡಿಕೊಳ್ಳಬೇಕೆಂದರು.

ಸಾನಿಧ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಸಿದ್ದಲಿಂಗದೇವರು ಮಾತನಾಡಿ, ಹಣದಿಂದ ಧರ್ಮಕ್ಕೆ ಮೀಸಲಿಡುವ ಕಾರ್ಯವಾಗಬಾರದು, ಜಿಪುಣತನಕ್ಕೆ ಮೀಸಲಿದ್ದರೆ ಧರ್ಮ ಜಿಪುಣವಾಗುತ್ತಿದೆ. ಭಕ್ತಿಭಾವದಿಂದ ನಡೆದ ಜಿಪುಣನೊಬ್ಬನಿಗೆ ದೇವನು ಪ್ರತ್ಯಕ್ಷನಾಗಿ ನೀನು ಕಾಶಿಗೆ ಬಂದಿರುವದು ಅಗತ್ಯವಿರಲಿಲ್ಲ. ನಿಮ್ಮ ಊರಿನಲ್ಲಿಯೇ ಒಂದು ದೇಗುಲವಿದೆ ಅಲ್ಲಿಯೇ ಭಕ್ತಿಬಾವದಿಂದ ನಡೆದುಕೊಂಡಿದ್ದರೆ ನಾನೇ ಅಲ್ಲಿಗೆ ಬರುತ್ತಿದ್ದೆನಲ್ಲ ಎಂದು ಹೇಳಿದ. ಆ ಮಾತಿನಿಂದ ಆ ಭಕ್ತ ಸುಧಾರಣೆಯಾಗಿದ್ದರ ಕುರಿತು ಹೇಳಿದರು. ಹನುಮಂತ ಸಾಮಾನ್ಯನಲ್ಲ ಸಮುದ್ರ ದೇವನಿಗೆ ನಮಿಸಿ ದಾರಿ ಕೇಳಿದಾಗ ಕ್ಷಮಿಸಿ ದಾರಿ ಕೂಡ ಸಮುದ್ರದೇವ ಆತನಿಗೆ ನೀಡಿದ್ದಾನೆ. ಸೀತಾಮಾತೆಯನ್ನು ಆಕೆಯ ಮುಖ ನೋಡದೇ ಶ್ರೀರಾಮನ ಭಂಟನೆಂದು ಉಂಗುರವನ್ನು ನೀಡಿ ಪರಿಚಯಿಸಿಕೊಂಡ ಆ ಹನುಮಂತನಲ್ಲಿ ಇದ್ದ ಮಾತೆಯ ಬಾವನೆ ಕುರಿತು ಎತ್ತಿ ತೋರಿಸಿದನು. ತಾಯಿಯ ಭಾವನೆಯನ್ನು ಸೀತಾಮಾತೆಗೆ ತೋರಿಸಿ ತನ್ನ ಭಕ್ತಿಯನ್ನು ಸಮರ್ಪಿಸಿದ್ದರ ಕುರಿತು ಹೇಳಿದರು.

ಇದೇ ಸಮಯದಲ್ಲಿ ಸಮಾಜ ಸೇವಕರಾದ ಕೃಷ್ಣ ಗುಳೇದ, ದೇವೇಂದ್ರ ಬಡಿಗೇರ, ಸಂಜು ಕದಂ, ಸಂಬಾಜಿ ವಾಡಕರ, ಶ್ರೀಮತಿ ಬೋರಮ್ಮ ಕುಂಬಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಬಜಾರ ಹನುಮಾನ ಮಂದಿರದಿಂದ ಹನುಮಾನ ಭಾವಚಿತ್ರದ ಶೋಭಾಯಾತ್ರೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಹಾಯ್ದು ಶ್ರೀ ವಿಠ್ಠಲ ಮಂದಿರಕ್ಕೆ ಆಗಮಿಸಿತು. ನಿಂಗೋಜಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯ ಮೇಲೆ ವೆಂಕಟೇಶ ಗ್ರಾಮಪುರೋಹಿತ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಸಂತ ಜೋಷಿ ಹನುಮಾನ ಚಾಲಿಸಾ ಮಂತ್ರವನ್ನು ಪಠಿಸಿದರು.

ಈ ಕಾರ್ಯಕ್ರಮದಲ್ಲಿ ಜಯಸಿಂಗ ಮೂಲಿಮನಿ, ಪ್ರಶಾಂತ ಜನಾದ್ರಿ, ರಾಜಣ್ಣ ಸೊಂಡೂರ, ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಹಿಪ್ಪರಗಿ, ಪ್ರಕಾಶ ಉಬಾಳೆ, ಬಾಬು ಹಂಚಾಟೆ, ರಘು ಹಜೇರಿ, ಶ್ಯಾಮ ಹಂಚಾಟೆ, ಭೀಮರಾವ ಕುಲಕರ್ಣಿ, ಸಂದೀಪ ಶೆಟ್ಟಿ, ಎಲ್.ಎಸ್. ದಾಯಪುಲೆ ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಮಂಡಳದ ಪದಾಧಿಕಾರಿಗಳು, ಸದಸ್ಯರು ಹಾಗೂ ಹನುಮಾನ ಚಾಲಸ ಸಮಿತಿಯ ಸದಸ್ಯರು ಇದ್ದರು. ದೀಪಲಕ್ಷ್ಮೀ ಮಹೀಂದ್ರಕರ ಪ್ರಾರ್ಥಿಸಿದರು. ಶಿಕ್ಷಕ ಸಂಗಮೆಶ ಪಾಲ್ಕಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಪ್ರಶಾಂತ ಜನಾದ್ರಿ ಪರಿಚಯಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ವಿಶೇಷ ಕೊಡುಗೆ
ಸದನದಲ್ಲಿ ಐಪಿಎಲ್‌ ಟಿಕೆಟ್‌ ಚರ್ಚೆ ಅನಗತ್ಯ