12ನೇ ಶತಮಾನದಲ್ಲಿ ಬಸವಾದಿ ಶಿವಶರಣರು, ವಚನಕಾರರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿರುವ ತತ್ವಗಳಿಗೆ ಕಾನೂನಿನ ಪ್ರಬಲವಾದ ಮಾನ್ಯತೆ ದೊರಕುವುದು ಇಂದಿನ ಅಗತ್ಯವಾಗಿದೆ.
ಶ್ರೀಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಗದಗ
12ನೇ ಶತಮಾನದಲ್ಲಿ ಬಸವಾದಿ ಶಿವಶರಣರು, ವಚನಕಾರರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿರುವ ತತ್ವಗಳಿಗೆ ಕಾನೂನಿನ ಪ್ರಬಲವಾದ ಮಾನ್ಯತೆ ದೊರಕುವುದು ಇಂದಿನ ಅಗತ್ಯವಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ನಗರದ ನಿಜಸುಖಿ ಸಮುದಾಯ ಭವನದಲ್ಲಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ವತಿಯಿಂದ ಜರುಗಿದ ಶ್ರೀಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಈ ವೇಳೆ ಬಸವಪ್ರಿಯ ಪ್ರಶಸ್ತಿಯನ್ನು ವೃತ್ತಿಯಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ವೃತ್ತಿಪರ ಕಾರ್ಮಿಕರನ್ನು ಗುರುತಿಸಿ 350 ಕಾರ್ಮಿಕ ಕಾರ್ಡಗಳನ್ನು ಸಂಘದ ಅಧ್ಯಕ್ಷ ಮೋಹನ ಚಂದಪ್ಪನವರ ನೇತೃತ್ವದಲ್ಲಿ ವಿತರಿಸಲಾಯಿತು. 100 ಹೊಲಿಗೆ ಯಂತ್ರಗಳನ್ನು ಮಹಿಳೆಯರಿಗೆ ವಿತರಿಸಲಾಯಿತು. ಅದೇ ರೀತಿ ವೃತ್ತಿಪರ ಕೆಲಸ ಮಾಡುವವರನ್ನು ಗುರುತಿಸಿ ಕಾಯಕ ಕಿಟ್ ವಿತರಿಸಲಾಯಿತು. ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ, ಗೌರವಿಸಲಾಯಿತು. ಎ.ಪಿ. ಪ್ರಭು ಸಂಪಾದಿಸಿದ ನಿಜಸುಖಿ ಹಡಪದ ಅಪ್ಪಣ್ಣ ವಚನ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಹಾಗೇ ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಜ.ಡಾ. ತೋಂಟದಾರ್ಯ ಸಿದ್ದರಾಮ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಮೋಹನ ಚಂದಪ್ಪನವರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಮಲ್ಲಿಕಾರ್ಜುನ ಚಂದಪ್ಪನವರ, ಸಮಾಜದ ಮುಖಂಡರಾದ ಪುಟ್ಟರಾಜ ಹಾಳಕೇರಿ, ಜಗದೀಶ ಹಡಪದ, ಕಲ್ಲಪ್ಪ ಹಡಪದ, ಬಿ.ಕೆ. ಹಡಪದ, ಬಸವರಾಜ ಮುಧೋಳ, ಪ್ರಭು ಹಾಳಕೇರಿ, ಪ್ರವೀಣ ಹಡಪದ, ಕಲ್ಲೇಶಪ್ಪ ಕುಡಗುಂಟಿ ಸೇರಿ ಸಮಾಜದ ಹಿರಿಯರು, ಮಹಿಳೆಯರು, ಯುವಕರು ಇದ್ದರು. ಮಂಜುನಾಥ ಚಂದಪ್ಪನವರ ಸ್ವಾಗತಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಕಲ್ಲೇಶಪ್ಪ ಕುಡಗುಂಟಿ ವಂದಿಸಿದರು. ನಂತರ ಸಂಜೆ ವಿವಿಧ ರಸಮಂಜರಿ ಕಾರ್ಯಕ್ರಮಗಳು ಜರುಗಿದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.