ಕನ್ನಡಪ್ರಭ ವಾರ್ತೆ ಜಮಖಂಡಿ
ಪೌರಾಯುಕ್ತರು ಸದಸ್ಯರ ಗಮನಕ್ಕೆ ತರದೇ ಶವಯಾತ್ರೆ ವಾಹನ ಖರೀದಿ ಟೆಂಡರ್ ಕರೆದಿದ್ದಾರೆ. ಆದರೆ, ಪೌರಾಯುಕ್ತರು ಸದಸ್ಯರ ಸಭೆ ಕರೆದು ಚರ್ಚೆ ನಂತರ ಟೆಂಡರ್ ಕರೆಯಬೇಕು ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು. ರಹಿಮತನಗರದಲ್ಲಿ ₹12 ಲಕ್ಷದಲ್ಲಿ ನಿರ್ಮಿಸಿರುವ ಸಮುದಾಯ ಭವನ ಸಂಪೂರ್ಣ ಕಳಪೆಯಾಗಿದೆ. ನಗರಸಭೆ ಅಧಿಕಾರಿಗಳು ಪರಿಶೀಲನೆ ನಂತರ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು ಎಂಬ ಆಗ್ರಹಿಸಿದರು.
ಏಕ ನಿವೇಶನ ಸಂಬಂಧ ಜಟಾಪಟಿ:ಏಕ ನಿವೇಶನ ವಿಷಯ ಪ್ರಸ್ತಾಪಗೊಂಡ ನಂತರ ನಗರಸಭೆ ಪೌರಾಯುಕ್ತ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯಿತು. ಏಕ ನಿವೇಶನಕ್ಕೆ ಕನಿಷ್ಠ ₹160 ಏರಿಕೆ ಮಾಡಬೇಕೆಂದು ಪೌರಾಯುಕ್ತರು ಒತ್ತಾಯಿಸಿದಾಗ ಸದಸ್ಯ ಸುನೀಲ ಶಿಂಧೆ ಜನರಿಗೆ ಹೊರೆಯಾಗಲಿದ್ದು, ಈಗಿರುವ ₹25 ಬದಲಾಗಿ ₹50ಕ್ಕೆ ಹೆಚ್ಚಿಸಬೇಕೆಂದು ಪಟ್ಟು ಹಿಡಿದರು. ನಂತರ ಪೌರಾಯುಕ್ತರು ಏಕನಿವೇಶನ ₹160 ಗಳಿಗೆ ಮಾಡಬೇಕಾಗುತ್ತದೆ. ಏಕೆಂದರೆ ನಾವು ಎಲ್ಲ ರೀತಿ ಸೌಲಭ್ಯ ನೀಡಬೇಕಾಗುತ್ತದೆ ಎಂಬುವುದನ್ನು ಸದಸ್ಯರು ಗಮನಿಸಬೇಕೆಂದು ಹೇಳಿದಾಗ ಮತ್ತೆ ಗದ್ದಲದ ವಾತಾವರಣ ನಿರ್ಮಾಣಗೊಂಡಿತು.
------
ನಾನೇನು ಕಳ್ಳತನ ಮಾಡಿ ಹುದ್ದೆಗೆ ಬಂದಿಲ್ಲ
-ಜ್ಯೋತಿ ಗಿರೀಶ, ಪೌರಾಯುಕ್ತರು ಜಮಖಂಡಿ.
ಬೇಡ ಎಂದರೇ ಬರೋದಿಲ್ಲ
-ಮಲ್ಲವ್ವ ಪಾಯಗೊಂಡ, ಸದಸ್ಯರು ಜಮಖಂಡಿ.
ಅಭಿವೃದ್ದಿಯಲ್ಲಿ ರಾಜಕೀಯ ಬೇಡ
ಮತಕ್ಷೇತ್ರದ ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಚುನಾವಣೆ ಸಂದರ್ಭದಕಲ್ಲಿ ಪಕ್ಷದ ಭರಾಟೆ ನಡೆಯಲಿ. ಚುನಾಯಿತಗೊಂಡು ಅಧಿಕಾರಿ ಲಭಿಸಿದಾಗ ಯಾವುದೇ ರಾಜಕೀಯ ಮಾಡುವುದು ಬೇಡ. ನಗರ ಮತ್ತು ಗ್ರಾಮೀಣಪ್ರದೇಶದ ಅಭಿವೃದ್ಧಿಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ಭೇದ ಮರೆತು ಶ್ರಮಿಸೋಣ. ಪ್ರತಿಯೊಬ್ಬರಿಗೂ ಸರಕಾರದ ಸೌಲಭ್ಯಗಳನ್ನು ತಲುಪಿಸುವುದು ನಮ್ಮ ಕರ್ತವ್ಯವಾಗಬೇಕು. ಪಕ್ಷಾತೀತವಾಗಿ ಸಹಕಾರ ನೀಡಿದರೇ ನಗರದ ಅಭಿವೃದ್ಧಿಗಾಗಿ ಅನುದಾನ ತರಲು ಸಿದ್ಧನಿದ್ದೇನೆ.-ಜಗದೀಶ ಗುಡಗುಂಟಿ, ಶಾಸಕರು ಜಮಖಂಡಿ.
----