ಬೆಳೆ ವಿಮೆ ಕಂಪನಿಗೆ ಈಗಲು ಕಾಲ ಮಿಂಚಿಲ್ಲ, ಒಂದು ವಾರದಲ್ಲಿ ಈ ತಾರತಮ್ಯ ಸರಿಪಡಿಸಬೇಕೆಂದು ಒತ್ತಾಯಿಸಿದರು.
ನರಗುಂದ: ಕಡಲೆ ಬೆಳೆಯ ವಿಮೆ ಪರಿಹಾರದಲ್ಲಿ ರೈತರಿಗೆ ಬೆಳೆ ವಿಮೆ ಕಂಪನಿ ತಾರತ್ಯಮ ಮಾಡಿದೆ ರೈತ ಸೇನೆ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಆರೋಪಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ 4004ನೇ ದಿನದ ಮಹದಾಯಿ ಹಾಗೂ ಕಳಸಾ-ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಅವರು, ತಾಲೂಕಿನ ರೈತರು 2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಗಳಾದ ಕಡಲೆ, ಗೋವಿನ ಜೋಳ, ಸೂರ್ಯಕಾಂತಿ, ಗೋಧಿ ಬೆಳೆಗಳ ಬಿತ್ತನೆ ಮಾಡಿ ತಾಲೂಕಿನ ರೈತರು ವಿಮೆ ಭರಣಾ ಮಾಡಿದ್ದರು. ಸದ್ಯ ಬೆಳೆ ವಿಮೆ ಕಂಪನಿ ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಕಡಲೆ ಬೆಳೆ ವಿಮೆ ಹಾನಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ, ಈ ವಿಮೆ ಪರಿಹಾರ ವಿತರಣಿಯಲ್ಲಿ ರೈತರಿಗೆ ಬಹಳ ತಾರತ್ಯಮ ಮಾಡಿದೆ ಎಂದು ಗಂಭೀರವಾದ ಆರೋಪ ಮಾಡಿದರು.
ಬೆಳೆ ವಿಮೆ ಕಂಪನಿಗೆ ಈಗಲು ಕಾಲ ಮಿಂಚಿಲ್ಲ, ಒಂದು ವಾರದಲ್ಲಿ ಈ ತಾರತಮ್ಯ ಸರಿಪಡಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ವೀರಭಸಪ್ಪ ಹೂಗಾರ, ಪರಶುರಾಮ ಜಂಬಗಿ, ಸಿ.ಎಸ್. ಪಾಟೀಲ, ಹನಮಂತ ಸರನಾಯ್ಕರ, ಸುಭಾಸ ಗಿರಿಯಣ್ಣವರ, ರಾಘವೇಂದ್ರ ಗುಜಮಾಗಡಿ, ಶಿವಪ್ಪ ಸಾತಣ್ಣವರ, ಫಕೀರಪ್ಪ ಅಣ್ಣಿಗೇರಿ, ಯಲ್ಲಪ್ಪ ಚಲವಣ್ಣವರ, ಅರ್ಜುನ ಮಾನೆ, ಅನಸವ್ವ ಶಿಂಧೆ, ನಾಗರತ್ನ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.