(ಮಿಡಲ್‌) ರಾಜ್ಯ ಹೆದ್ದಾರಿ ಗುಂಡಿ ಮುಚ್ಚಲು ಕೆಂಪು ಜೇಡಿ ಮಣ್ಣು ಲೇಪನ

KannadaprabhaNewsNetwork | Published : Nov 1, 2024 12:09 AM

ಸಾರಾಂಶ

ಶಿವಮೊಗ್ಗ-ಬೈಂದೂರು ರಾಜ್ಯ ಹೆದ್ದಾರಿಯ ಹೊಂಡ ಮುಚ್ಚಲು ಕೆಂಪು ಜೇಡಿ ಮಣ್ಣಿನ ಲೇಪನದ ದೃಶ್ಯ.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಉದ್ದೇಶದಿಂದ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಆಳು ಉದ್ದದ ಹೊಂಡವನ್ನು ಮುಚ್ಚಲು ಲೋಕೋಪಯೋಗಿ ಇಲಾಖೆ ಜೇಡಿ ಕೆಂಪು ಮಣ್ಣು ಹಾಕುತ್ತಿದ್ದಾರೆ ರಿಪ್ಪನ್‍ಪೇಟೆ ಗ್ರಾಪಂ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಆರೋಪಿಸಿದ್ದಾರೆ.

ಶಿವಮೊಗ್ಗ-ಬೈಂದೂರು ರಾಜ್ಯಹೆದ್ದಾರಿ ರಿಪ್ಪನ್‍ಪೇಟೆ-ಹೊಸನಗರ ಮಾರ್ಗದ ಕೋಡೂರು ಕೊಪ್ಪರಗುಂಡಿ ಮತ್ತು ಆರಸಾಳು ಸೂಡೂರು ಚಿನ್ಮನೆ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯಲ್ಲಿ ಅಳು ಉದ್ದದ ಗುಂಡಿ ಬಿದ್ದ ಕಾರಣ ಪ್ರಯಾಣಿಕರು ವಾಹನಗಳಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಗುಂಡಿ ಮುಚ್ಚಲು ‘ಕೋಲ್ಡ್ ಟಾರ್’ ಹಾಕುವ ಬದಲು ಕೆಂಪು ಜೇಡಿ ಮಣ್ಣಿನ ಲೇಪನ ಮಾಡುವ ಮೂಲಕ ಕಣ್ಣು ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ನೆಪದಲ್ಲಿ ಆಧಿಕಾರದ ಗದ್ದುಗೆ ಏರಿ ಈಗ ಅದನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲಾಗದೇ ಅಭಿವೃದ್ಧಿಗಾಗಿ ಮೀಸಲಾಗಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಿ ಅಭಿವೃದ್ಧಿಯೂ ಇಲ್ಲದೆ ರೈತ ನಾಗರೀಕರನ್ನು ದಿಕ್ಕು ತಪ್ಪಿಸುವ ಹುನ್ನಾರದಲ್ಲಿ ತೊಡಗಿಕೊಂಡಿರುವ ಸರ್ಕಾರದ ಬಗ್ಗೆ ಜನ ಸಾಮಾನ್ಯರಲ್ಲಿ ತೀವ್ರ ಆಸಮದಾನಕ್ಕೆ ಕಾರಣವಾಗಿದೆ.

ಸರ್ಕಾರ ರಚನೆಗೊಂಡ ದಿನದಿಂದ ಹಲವು ಅರೋಪಗಳಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಆಡಳಿತದಿಂದ ಜನ ಸಾಮಾನ್ಯರಲ್ಲಿ ಅಸಮದಾನ ಕಾಣಿಸಿಕೊಂಡಿದ್ದು, ಈಗ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು ಮತ್ತು ವಾಹನ ಚಾಲಕರು ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ವಾಲ್ಮಿಕಿ ನಿಗಮ ಮತ್ತು ಮೈಸೂರು ಮುಡಾ ಹಗರಣದೊಂದಿಗೆ ಈಗ ಲೋಕೋಪಯೋಗಿ ಇಲಾಖೆಯವರು ಹೊಂಡ ಗುಂಡಿಯನ್ನು ಕೆಂಪು ಜೇಡಿ ಮಣ್ಣಿನಲ್ಲಿ ಮುಚ್ಚುತ್ತಾ ಬೇಸಿಗೆಯಲ್ಲಿ ದೋಳು ತುಂಬಿ ಎಷ್ಟು ಜನರನ್ನು ಬಲಿ ತಗೆದುಕೊಳ್ಳಬೇಕೋ ಎಂಬ ಬಗ್ಗೆ ಅಡಿಕೊಳ್ಳುವಂತಾಗಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

Share this article