ಕೇರಳ ದುರಂತದ ನಿರಾಶ್ರಿತರು ಸುರಕ್ಷಿತವಾಗಿ ಚಾಮರಾಜನಗರ, ಗುಂಡ್ಲುಪೇಟೆಗೆ ವಾಪಸ್‌

KannadaprabhaNewsNetwork | Published : Aug 2, 2024 12:46 AM

ಸಾರಾಂಶ

ಕೇರಳ ರಾಜ್ಯದ ಮೆಪ್ಪಾಡಿಯಲ್ಲಿ ಕೇರಳ ಸರ್ಕಾರ ತೆರೆದಿದ್ದ ಕಾಳಜಿ ಕೇಂದ್ರದಲ್ಲಿದ್ದ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ ತಲಾ ೬ ಮಂದಿ ನಿರಾಶ್ರಿತರನ್ನು ಸುರಕ್ಷಿತವಾಗಿ ತಾಲೂಕು ಆಡಳಿತ ಕರೆತಂದು ಬಿಟ್ಟಿದೆ.

ಗುಂಡ್ಲುಪೇಟೆ: ಕೇರಳ ರಾಜ್ಯದ ಮೆಪ್ಪಾಡಿಯಲ್ಲಿ ಕೇರಳ ಸರ್ಕಾರ ತೆರೆದಿದ್ದ ಕಾಳಜಿ ಕೇಂದ್ರದಲ್ಲಿದ್ದ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ ತಲಾ ೬ ಮಂದಿ ನಿರಾಶ್ರಿತರನ್ನು ಸುರಕ್ಷಿತವಾಗಿ ತಾಲೂಕು ಆಡಳಿತ ಕರೆತಂದು ಬಿಟ್ಟಿದೆ.

ಟೆಂಪೋ ಟ್ರಾವಲ್ಲರ್‌ ವಾಹನದಲ್ಲಿ ಕೇರಳದ ಮೆಪ್ಪಾಡಿಯಿಂದ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನಾಗಶೆಟ್ಟಿ, ಗೌರಮ್ಮ ಹಾಗೂ ದಿವ್ಯಳ ಮನೆಗೆ ಗುರುವಾರ ಸಂಜೆ ಬಿಡಲಾಗಿದೆ. ಚಾಮರಾಜನಗರ ನಗರದ ಜಯಶ್ರೀ, ಮಂಜುಳ, ಸಿದ್ದರಾಜು ಅವರ ಮನೆಗೆ ಸುರಕ್ಷಿತವಾಗಿ ಕಳಹಿಸಲಾಗಿದೆ ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಮಾಹಿತಿ ನೀಡಿದ್ದಾರೆ.

೪ ಮಂದಿ ಬರಲಿಲ್ಲ: ಚಾಮರಾಜನಗರದ ಜಯಶ್ರೀ, ಮಂಜುಳ, ಸಿದ್ದರಾಜು ಜೊತೆಗಿದ್ದ ಇನ್ನೂ ನಾಲ್ಕು ಮಂದಿ ಕೇರಳದ ಮೆಪ್ಪಾಡಿ ಕಾಳಜಿ ಕೇಂದ್ರದಲ್ಲಿಯೇ ಉಳಿದು ಕೊಂಡಿದ್ದಾರೆ. ಕರೆದರೂ ನಾಲ್ಕು ಮಂದಿ ಬರಲಿಲ್ಲ ಎಂದು ತಿಳಿಸಿದ್ದಾರೆ. ಭೂ ಕುಸಿತ ದುರಂತ: ರಾಜ್ಯದಿಂದ ಆರೋಗ್ಯ ನೆರವುಚಾಮರಾಜನಗರ: ಕೇರಳದ ವಯನಾಡು ಭೂ ಕುಸಿತ ದುರಂತದಲ್ಲಿ ರಾಜ್ಯದಿಂದ ಆರೋಗ್ಯ ನೆರವು ಸಿಕ್ಕಿದ್ದು ಚಾಮರಾಜನಗರ ಮತ್ತು ಮೈಸೂರು ವೈದ್ಯರು ಕೇರಳದಲ್ಲಿ ತುರ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಕೇರಳ ವಯನಾಡು ಗುಡ್ಡ ಕುಸಿತ ಸಂಬಂಧ ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದಿಂದ 13 ಮಂದಿ ವೈದ್ಯರ ತಂಡವನ್ನು ನಿಯೋಜನೆ ಮಾಡಲಾಗಿದ್ದು ವೈದ್ಯರು ವಿವಿಧ ಕಾಳಜಿ ಕೇಂದ್ರಗಳಿಗೆ ತೆರಳಿ ಸೇವೆ ಸಲ್ಲಿಸುತ್ತಿದ್ದಾರೆ. ಗುಂಡ್ಲುಪೇಟೆ ಟಿಎಚ್‍ಒ ಡಾ.ಅಲೀಂ ಪಾಷಾ ನೇತೃತ್ವದಲ್ಲಿ ಚಾಮರಾಜನಗರದಿಂದ ಡಾ.ಮಹೇಶ್, ಡಾ.ತ್ರಿವೇಣಿ, ಡಾ.ಶ್ರೀಧರ್, ಡಾ.ಟೀನಾ, ಡಾ.ರಾಜು, ಡಾ.ಸಂದೀಪ್, ಮಹದೇವಸ್ವಾಮಿ, ಬಸವೇಗೌಡ ಹಾಗೂ ಮೈಸೂರು ಜಿಲ್ಲೆಯಿಂದ ಡಾ.ನಾಗೇಶ್ವರರಾವ್, ಡಾ.ಶ್ರೀನಿವಾಸ್, ಡಾ.ಶೇಷಾದ್ರಿ, ಉಮೇಶ್ ಬಾಬು ಸೇರಿದಂತೆ ಒಟ್ಟ 13 ಮಂದಿಯನ್ನು ತುರ್ತು ಸೇವೆಗೆ ನಿಯೋಜನೆ ಮಾಡಲಾಗಿದೆ.

Share this article