ನಿರಾಶ್ರಿತರಿಗೆ ವಾತ್ಸಲ್ಯ ತುಂಬುವ ಕೆಲಸವಾಗಬೇಕು: ಮಲ್ಲಿಕಾರ್ಜುನ್

KannadaprabhaNewsNetwork |  
Published : Mar 13, 2026, 01:45 AM IST
12ಕೆಎಂಎನ್ ಡಿ25 | Kannada Prabha

ಸಾರಾಂಶ

ಒಂದು ಕಾಲದಲ್ಲಿ ಗ್ರಾಮೀಣ ಹೆಣ್ಣು ಮಕ್ಕಳು, ಮಹಿಳೆಯರಿಗೆ ಸ್ವಾವಲಂಬನೆ ಬದುಕು, ಗುಡಿಕೈಗಾರಿಕೆ ಅರಿವು ಇರಲಿಲ್. ಸಂಸ್ಥೆ ಹಳ್ಳಿಗಾಡಿನ ಜನರ ಬದುಕು ಹಸನಾಗಲು ಗುಡಿ ಕೈಗಾರಿಕೆ, ಆರ್ಥಿಕ ವ್ಯವಹಾರಗಳನ್ನು ತಮ್ಮ ಸಂಸ್ಥೆಯಲ್ಲ್ಲಿ ಸದಸ್ಯರನ್ನಾಗಿಸಿಕೊಂಡು ತಿಳಿಸಿ ಮುಖ್ಯವಾಹಿನಿಗೆ ತರುವಂತಹ ಕೆಲಸ ಮಾಡಿದೆ.

ಕಿಕ್ಕೇರಿ:

ನಿರಾಶ್ರಿತರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಸ್ಥೆ ಮೊದಲ ಆದ್ಯತೆಯಲ್ಲಿ ಮಾಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ್ ಹೇಳಿದರು.

ಅಂಚೆಬೀರನಹಳ್ಳಿಯ ಪಾರ್ವತಮ್ಮ ದೇವರಾಜಯ್ಯ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿ, ಶ್ರೀಕ್ಷೇತ್ರ ಆರೋಗ್ಯ, ಶಿಕ್ಷಣ, ಧಾರ್ಮಿಕ ದಾಸೋಹದ ಜೊತೆಗೆ ಆಶ್ರಯ ಯೋಜನೆಯನ್ನುತಂದಿದೆ. ನಿರಾಶ್ರಿತರು ಭಯಪಡದೆ ನಿರಾತಂಕವಾಗಿ ಬದುಕಲು ಮುಂದಾಗಿ ಎಂದರು.

ಒಂದು ಕಾಲದಲ್ಲಿ ಗ್ರಾಮೀಣ ಹೆಣ್ಣು ಮಕ್ಕಳು, ಮಹಿಳೆಯರಿಗೆ ಸ್ವಾವಲಂಬನೆ ಬದುಕು, ಗುಡಿಕೈಗಾರಿಕೆ ಅರಿವು ಇರಲಿಲ್. ಸಂಸ್ಥೆ ಹಳ್ಳಿಗಾಡಿನ ಜನರ ಬದುಕು ಹಸನಾಗಲು ಗುಡಿ ಕೈಗಾರಿಕೆ, ಆರ್ಥಿಕ ವ್ಯವಹಾರಗಳನ್ನು ತಮ್ಮ ಸಂಸ್ಥೆಯಲ್ಲ್ಲಿ ಸದಸ್ಯರನ್ನಾಗಿಸಿಕೊಂಡು ತಿಳಿಸಿ ಮುಖ್ಯವಾಹಿನಿಗೆ ತರುವಂತಹ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಜಿಲ್ಲಾ ನಿರ್ದೇಶಕ ಯೋಗೀಶ್ ಮಾತನಾಡಿ, ಕಳೆದ ಐದು ವರ್ಷಳಿಂದ ಈ ವಾತ್ಸಲ್ಯ ಕಾರ್ಯಕ್ರಮ ಆರಂಭಗೊಂಡು ಅಸಹಾಯಕರಿಗೆ ಮನೆ ಕಟ್ಟಿಕೊಡುವ, ಮಾಶಾಸನ ನೀಡುವ, ಮನೆ ದುರಸ್ತಿ ಮಾಡುವ, ಶೌಚಾಲಯ ನಿರ್ಮಾಣ, ದೈನಂದಿನ ಬಟ್ಟೆ ಕಿಟ್, ವಾತ್ಸಲ್ಯ ಕಿಟ್ ನೀಡುತ್ತಾ ಬಂದಿದೆ ಎಂದರು.

ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ಮಾಶಾಸನ ನೀಡಿದೆ. ನಿರಾಶ್ರಿತರಿಗೆ ಸೋರುವ ಮನೆಗಳನ್ನು ದುರಸ್ಥಿ ಮಾಡಲಾಗುವುದು ಎಂದು ಆತ್ಮಸ್ಥೈರ್ಯ ತುಂಬಿದರು.

ತಾಲೂ ಕು ಯೋಜನಾಧಿಕಾರಿ ಮೂಕಾಂಬಿಕಾ, ಗ್ರಾಪಂ ಮಾಜಿ ಸದಸ್ಯಯೋಗೇಶ್, ನಂಜೇಶ್, ಆನೆಗೊಳ ಶ್ರೀನಿವಾಸ್, ನಿವೃತ್ತ ಶಿಕ್ಷಕ ನಂಜೇಗೌಡ, ಶಂಕರ್, ಜನಜಾಗೃತಿ ವೇದಿಕೆ ಸದಸ್ಯ ನಳಿನಿ, ಸುನೀತಾ, ಮಂಜು, ಶಿವರಾಮು, ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ, ಸೇವಾ ಪ್ರತಿನಿಧಿ ಸುಮಾ, ಲತಾ, ಮಂಜುಳಾ, ಪವಿತ್ರಾ, ಜಯಶೀಳಾ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವಿನಮಾರನಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ಪ್ರತಿಭಟನೆ
ಚಿಕ್ಕಮರಳಿಯಲ್ಲಿ ಶ್ರೀಕಾಳಿಕಾಂಬ ಕಮಠೇಶ್ವರಿ ಅಮ್ಮನವರ ಉತ್ಸವ