ಕನ್ನಡಪ್ರಭ ವಾರ್ತೆ ಬೀದರ್
ಆದರೆ, ಇವರು ಮತ್ತೆ ವೈದ್ಯ ವೃತ್ತಿ ಮುಂದುವರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಸದರಿ ಇಬ್ಬರಿಗೂ ತಲಾ 2.50 ಲಕ್ಷ ರು. ಭಾರಿ ದಂಡ ವಿಧಿಸುವುದರ ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಬೀದರ್ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಭಾಂಗಣದಲ್ಲಿ ನಡೆದ ಕೆ.ಪಿ.ಎಂ.ಇ. ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ಆರ್ಯುವೇದ ಬದಲು ಅಲೋಪತಿ ವೃತ್ತಿ ಡಾ.ಹರೀಶ ವಿಶ್ವಕರ್ಮ ಅವರು ಆಯುರ್ವೇದ ವೈದ್ಯಕೀಯ ಪದವಿ ಪಡೆದು, ಕಮಠಾಣ ಗ್ರಾಮದ ಪ್ರಗತಿ ಕ್ಲಿನಿಕ್‌ನಲ್ಲಿ ಅಲೋಪತಿ ವೈದ್ಯ ವೃತ್ತಿ ನಡೆಸುತ್ತಿರುವುದು ಕೆ.ಪಿ.ಎಂ.ಇ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ 50 ಸಾವಿರ ರು. ದಂಡ ವಿಧಿಸಿ, ಅಲೋಪತಿ ಪ್ರಾಕ್ಟೀಸ್ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಸರ್ಕಾರಿ ನೌಕರನಿಂದ ನಿಯಮ ಉಲ್ಲಂಘನೆ, ಕಮಲನಗರ ತಾಲ್ಲೂಕಿನ ಚಾಂದೋರಿಯ ಪ್ರೇಮಕುಮಾರ ಅವರು ಸರ್ಕಾರಿ ಶುಶ್ರೂಷಾಧಿಕಾರಿಯಾಗಿ ಪ್ರಾಥ ಮಿಕ ಆರೋಗ್ಯ ಕೇಂದ್ರ, ಮುಧೋಳ (ಬಿ) ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅನಧಿಕೃತವಾಗಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದುದು ದಾಳಿ ವೇಳೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಇವರನ್ನು ಕಳೆದ ಜನವರಿ 31ರಂದು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದರು. ಎರಡನೇ ಬಾರಿ ದಾಳಿ ಹಾಗೂ ಕ್ರಮ ಅಮಾನತಿನಲ್ಲಿದ್ದರೂ ಸಹ ಪ್ರೇಮಕುಮಾರ ಅವರು ಖಾಸಗಿ ವೈದ್ಯ ವೃತ್ತಿ ಮುಂದುವರಿಸಿದ ಕಾರಣ, ಅ.5 ರಂದು ಎರಡನೇ ಬಾರಿ ದಾಳಿ ನಡೆಸಿ ಕ್ಲಿನಿಕ್ ಅನ್ನು ಸೀಜ್ ಮಾಡಲಾಗಿದೆ. ಪ್ರೇಮಕುಮಾರ ಈತನಿಗೆ ದೊರೆಯುವ ಜೀವನಾಂಶದ ಭತ್ಯೆಯನ್ನು ತಡೆಹಿಡಿಯುವಂತೆ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಿಗೆ ಶಿಫಾರಸ್ಸು ಮಾಡಲು ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.