ಪಿಎಂ ಫಸಲ್ ಬಿಮಾ (ವಿಮಾ) ಯೋಜನೆಗೆ ನೋಂದಣಿ

KannadaprabhaNewsNetwork |  
Published : Jun 19, 2026, 03:00 AM IST
(ಫೋಟೊ18ಬಿಕೆಟಿ1,ಜಿಲ್ಲಾಧಿಕಾರಿ ಸಂಗಪ್ಪ ಅವರು  ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್ ಬಿಮಾ ಯೋಜನೆ ಅನುಷ್ಠಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಯೋಜನೆ ಪ್ರಚಾರದ ಕರಪತ್ರಗಳನ್ನು ಬಿಡುಗಡೆ  ಮಾಡಿದರು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅರ್ಹ ರೈತರ ನೋಂದಣಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅರ್ಹ ರೈತರ ನೋಂದಣಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್ ಬಿಮಾ ಯೋಜನೆ ಅನುಷ್ಠಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಮಟ್ಟದಲ್ಲಿ ರೈತರಿಗೆ ಯೋಜನೆಯ ಕುರಿತು ಜಾಗೃತಿ ಮೂಡಿಸಿ, ನೋಂದಣಿಗೆ ಕ್ರಮವಹಿಸಬೇಕು ಎಂದರು.

ಹವಾಮಾನ ವೈಪರಿತ್ಯ, ಅತಿವೃಷ್ಟಿ, ಅನಾವೃಷ್ಟಿ, ಗಾಳಿ ಮಳೆ, ಪ್ರವಾಹ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಗೊಳಗಾದ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ದೊರೆಯಲು ಬೆಳೆ ಕಟಾವು ಪ್ರಯೋಗಗಳನ್ನು ಪಾರದರ್ಶಕವಾಗಿ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಗೆ ಆಯ್ಕೆಯಾದ ಎಸ್.ಬಿ.ಐ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಪ್ರತಿ ತಾಲೂಕು ಕಚೇರಿಗೆ ಸರಿಯಾಗಿ ಕೆಲಸ ಮಾಡುವ ಪ್ರತಿನಿಧಿಗಳನ್ನು ನಿಯೋಜನೆ ಮಾಡಬೇಕು ಎಂದರು. ಈ ಯೋಜನೆ ಸಾಲ ಪಡೆದ ರೈತರಿಗೆ ಕಡ್ಡಾಯವಾಗಿದ್ದು, ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ಬೆಳೆವಾರು ವಿಮಾ ಕಂತು ಪಾವತಿ ಕುರಿತು ಮಾಹಿತಿ ನೀಡಿದರು. ಸೋಯಾ ಅವರೆ, ಜೋಳ (ನೀರಾವರಿ), ಉದ್ದು, ಹೆಸರು (ಮಳೆ ಆಶ್ರಿತ) ಬೆಳೆಗೆ ವಿಮಾ ಕಂತು ಪಾವತಿಗೆ ಜುಲೈ 15 ಕೊನೆಯ ದಿನವಾದರೆ, ಅರಿಶಿಣ, ಸೂರ್ಯಕಾಂತಿ, ಸಜ್ಜೆ, ಮುಸುಕಿನ ಜೋಳ, ಜೋಳ, ತೊಗರಿ, ಶೇಂಗಾ, ಎಳ್ಳು (ಮ.ಆ), ಕೆಂಪು ಮೆಣಸಿನಕಾಯಿ, ಮುಸುಕಿನ ಜೋಳ, ಸಜ್ಜೆ, ತೊಗರಿ, ಶೇಂಗಾ (ನೀರಾವರಿ) ಬೆಳೆಗಳಿಗೆ ಜುಲೈ 31 ಹಾಗೂ ಸೂರ್ಯಕಾಂತಿ, ಈರುಳ್ಳಿ (ನೀರಾವರಿ), ಈರುಳ್ಳಿ, ಕೆಂಪು ಮೆಣಸಿನಕಾಯಿ (ಮ.ಆ) ಬೆಳೆಗಳಿಗೆ ವಿಮೆ ಕಂತು ಪಾವತಿಗೆ ಆಗಸ್ಟ್‌ 14 ಆಗಿರುತ್ತದೆ ಎಂದು ತಿಳಿಸಿದರು.

ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಪಿಎಂ ಫಸಲ್ ಬಿಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ ವಿಮಾ ಕಂತುಗಳನ್ನು ಪಾವತಿಸಿ ನೋಂದಾಯಿಸಿ ಕೊಳ್ಳಬಹುದಾಗಿದೆ. ಬೆಳೆ ವಿಮೆ ನೋಂದಣಿಗೆ ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡಿರಬೇಕು ಎಂದರು. ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಒಂದು ವೇಳೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಡಿ ಭಾಗವಹಿಸದೇ ಇದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಈ ಯೋಜನೆಯಿಂದ ಕೈಬಿಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯೋಜನೆ ಪ್ರಚಾರದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ವಿರೇಶ ಹಿರೇಮಠ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗೌರಮ್ಮ ಸುಂಕದ, ಜಿಲ್ಲಾ ಅಗ್ರಣೀಯ ಬ್ಯಾಂಕ್ನ ವ್ಯವಸ್ಥಾಪಕ ರಾಜಕುಮಾರ ಯರಗಲ್ಲ, ಬಾಗಲಕೋಟೆ ವಿಭಾಗದ ಕೃಷಿ ಉಪನಿರ್ದೇಶಕ ಕೆ.ಎಸ್.ಅಗಸನಾಳ, ಜಮಖಂಡಿ ವಿಭಾಗದ ಕೃಷಿ ಉಪ ನಿರ್ದೇಶಕಿ ಮಂಜುಳಾ ಬಸವರೆಡ್ಡಿ, ಬಿಡಿಸಿಸಿ ಬ್ಯಾಂಕ್ನ ಅಧಿಕಾರಿ ಜಿ.ಆರ್.ಕುಂದರಗಿ, ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ಉಮೇಶ ಕಾಂತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಬೆಳೆವಾರು ವಿಮೆ ಮೊತ್ತ, ಕಂತುಗಳ ವಿವರ

ಬೆಳೆಗಳುವಿಮೆ ಕಂತು ಪಾವತಿಗೆ ಕೊನೆ ದಿನವಿಮೆಯ ಮೊತ್ತ (ಪ್ರತಿ ಹೆಕ್ಟರ್)ರೈತರ ಪಾಲುರೈತರು ಕಟ್ಟಬೇಕಾದ ಮೊತ್ತ (2.20 ಗುಂಟಾಗೆ)

ಉದ್ದು (ಮ.ಆ) 15-07-2026 38800-00 2% 784-00

ಹೆಸರು (ಮ.ಆ) 15-07-2026 39700-00 2% 803-00

ಶೇಂಗಾ (ನೀರಾವರಿ)31-07-2026 77800-00 2% 1573-00

ಶೇಂಗಾ (ಮ.ಆ) 31-07-2026 65400-00 2% 1322-00

ಮುಸುಕಿನ ಜೋಳ (ನೀರಾವರಿ)31-07-2026 76200-00 2% 1541-37

ಮುಸುಕಿನ ಜೋಳ (ಮ.ಆ)31-07-2026 67500-00 2% 1365-39

ಈರುಳ್ಳಿ (ನೀರಾವರಿ) 14-08-2026 93900-00 2% 4748-52

ಈರುಳ್ಳಿ (ಮ.ಆ)14-08-2026 85600-00 5% 4328-79

ಸಜ್ಜೆ (ನೀರಾವರಿ)31-07-2026 43300-00 2% 875-87

ಸಜ್ಜೆ (ಮ.ಆ)31-07-2026 34800-00 2% 703-93

ತೊಗರಿ (ನೀರಾವರಿ)31-07-2026 43300-00 2% 875-88

ತೊಗರಿ (ಮ.ಆ)31-07-2026 57600-00 2% 1165-13

ಕೆಂಪು ಮೆಣಸಿನಕಾಯಿ (ನೀರಾವರಿ)31-07-2026 124500-00 5% 6295-97

ಕೆಂಪು ಮೆಣಸಿನಕಾಯಿ (ಮ.ಆ)14-08-2026 90800-00 5% 4591-76

ಎಳ್ಳು (ಮ.ಆ)31-07-2026 31900-00 2% 645-27

ಜೋಳ (ನೀರಾವರಿ)15-07-2026 52600-00 2% 1063-99

ಜೋಳ (ಮ.ಆ)31-07-2026 44400-00 2% 898-12

ಸೋಯಾ ಅವರೆ (ನೀರಾವರಿ) 15-07-2026 51200-00 2% 1035-67

ಸೂರ್ಯಕಾಂತಿ (ನೀರಾವರಿ)14-08-2026 57900-00 2% 1171-20

ಸೂರ್ಯಕಾಂತಿ (ಮ.ಆ) 31-07-2026 48200-00 2% 974-99

ಅರಿಶಿಣ 31-07-2026 164200-00 5% 8303-59

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠ
ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಠಾಣೆಗೆ ದೂರು