ಕೋಮು ದ್ವೇಷ ಬಿತ್ತಿ ಜನರ ಭಾವನೆ ಒಡೆಯುವ ಬಿಜೆಪಿ ತಿರಸ್ಕರಿಸಿ-ಶಾಸಕ ಶಿವಣ್ಣನವರ

KannadaprabhaNewsNetwork | Published : Apr 17, 2024 1:27 AM

ಸಾರಾಂಶ

ಕೋಮು ದ್ವೇಷ ಬಿತ್ತಿ ಜನರ ಭಾವನೆ ಒಡೆಯುವ ಬಿಜೆಪಿಯನ್ನು ತಿರಸ್ಕರಿಸಿ ಸರ್ವರನ್ನು ಒಂದಾಗಿ ಕಾಣುವ ಕಾಂಗ್ರೆಸ್ ಬೆಂಬಲಿಸಬೇಕು. ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ನಮ್ಮ ಕೈ ಬಲಪಡಿಸಬೇಕೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬ್ಯಾಡಗಿ: ಕೋಮು ದ್ವೇಷ ಬಿತ್ತಿ ಜನರ ಭಾವನೆ ಒಡೆಯುವ ಬಿಜೆಪಿಯನ್ನು ತಿರಸ್ಕರಿಸಿ ಸರ್ವರನ್ನು ಒಂದಾಗಿ ಕಾಣುವ ಕಾಂಗ್ರೆಸ್ ಬೆಂಬಲಿಸಬೇಕು. ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ನಮ್ಮ ಕೈ ಬಲಪಡಿಸಬೇಕೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲೂಕಿನ ಸೂಡಂಬಿ ಗ್ರಾಮದಲ್ಲಿ ಜರುಗಿದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡಿ ರೈತ ವಿರೋಧಿ ನಿಲುವನ್ನು ಪ್ರದರ್ಶಿಸಿದೆ. ಆದರೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಬಂದಾಗಿನಿಂದಲೂ ಜನಪರ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದೆ. ಹತ್ತು ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ಮನೋಭಾವನೆಯನ್ನು ಮನೆ ಮನೆಗೂ ತಿಳಿಸುವ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಆರ್ಥಿಕ ಹೊರೆ ಇಳಿಸಿದ ಕಾಂಗ್ರೆಸ್ ಪಕ್ಷದ ಋಣ ತೀರಿಸುವ ಅವಕಾಶ ಬಂದಿದೆ. ನಮ್ಮ ಪಕ್ಷ ಸಮರ್ಥ ಅಭ್ಯರ್ಥಿಯನ್ನಾಗಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಆಯ್ಕೆ ಮಾಡಿದೆ. ಅದಕ್ಕಾಗಿ ಪ್ರತಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸೋಣ ಎಂದರು.ಜಿಪಂ ಮಾಜಿ ಸದಸ್ಯ ಅಬ್ದುಲ್ ಮುನಾಫ್ ಯಲಿಗಾರ, ಮುಖಂಡರಾದ ದಾನಪ್ಪಗೌಡ ತೋಟದ, ಶಿವನಗೌಡ ಪಾಟೀಲ, ರವಿ ಪೂಜಾರ, ವೀರನಗೌಡ ಪಾಟೀಲ, ಹಿರೇಹಳ್ಳಿ ಗ್ರಾಮದ ಭಾವಲಿಂಗಯ್ಯ ಹಿರೇಮಠ, ಗಣೇಶಪ್ಪ ಚಿಕ್ಕಳ್ಳಿ, ಚಿಕ್ಕಬಾಸೂರಿನ ರುದ್ರಪ್ಪ ಹೊಂಕಣ, ಶಿವಾನಂದ ಸಾಲಿ, ನಿಜಾಮುದ್ದಿನ್ ಮುಲ್ಲಾ, ಸೂಡಂಬಿ ಗ್ರಾಮದ ಮಾರುತಿ ಕೆಂಪಗೊಂಡರ, ಪ್ರಭುಗೌಡ ಪಾಟೀಲ, ಬಸವಂತಪ್ಪ ಅಜ್ಜಪ್ಪನವರ, ಪರಮೇಶಿ ಚಿಕ್ಕಳ್ಳಿ, ವಿ.ಸಿ. ಪಾಟೀಲ, ಹರೀಶ ದೊಡ್ಡಮನಿ, ನಿಂಗರಾಜ ಬಜ್ಜಿ ಸೇರಿದಂತೆ ಇತರರು ಇದ್ದರು. ಜಾತಿ, ಧರ್ಮ ಭೇದ ಮರೆತು ಸರ್ವರಿಗೂ ಗ್ಯಾರಂಟಿ ಯೋಜನೆ ಒದಗಿಸಿದ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುವ ಅವಕಾಶ ಬಂದಿದೆ. ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ, ಗಳಗಂಟಿ ಎಂದು ನಿಂದಿಸಿದವರನ್ನು ಪ್ರಶ್ನಿಸುವ ಕಾಲ ಬಂದಿದೆ. ತಮ್ಮ ಸೇವೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ನನಗೆ ಆಶೀರ್ವದಿಸಬೇಕು ಎಂದು ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

Share this article