ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಐತಿಹಾಸಿಕ ಗೋರ್ಟಾ (ಬಿ) ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಗ್ರಾಮವನ್ನು ಆದರ್ಶ ಗ್ರಾಮ ಮಾಡುವುದಾಗಿ ಹೇಳಿದ ಸಂಸದರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಗೋರ್ಟಾ (ಬಿ) ಗ್ರಾಮ ಐತಿಹಾಸಿಕ ಜಲಿಯನ್ ವಾಲಾಬಾಗ್ ಇದ್ದಂತೆ. ಸ್ವಾತಂತ್ರ್ಯಲ ಸಂಗ್ರಾಮಕ್ಕೆ ಈ ಗ್ರಾಮ ನೀಡಿರುವ ಕೊಡುಗೆ ಅಪಾರವಾದದ್ದು, ಈ ಗ್ರಾಮದ ಜನರ ತ್ಯಾಗ ಬಲಿದಾನ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ. ನಮ್ಮ ತಂದೆ ಶತಾಯುಷಿ ಭೀಮಣ್ಣ ಖಂಡ್ರೆ ಅವರ ತಾಯಿ ಅಂದರೆ ತಮ್ಮ ಅಜ್ಜಿ ಪಾರ್ವತಮ್ಮನವರು ಇದೇ ಗ್ರಾಮದವರು. ಇಂದು ನಿಮ್ಮೂರಿನ ಮರಿ ಮಗ ಚುನಾವಣೆಗೆ ಸ್ಪರ್ಧಿಸಿದ್ದು, ಮತ ನೀಡಿ ಎಂದು ಮನವಿ ಮಾಡಿದರು.ನಮ್ಮ ತಂದೆ ಭೀಮಣ್ಣ ಖಂಡ್ರೆ ಅವರು ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾವು 2017ರಲ್ಲಿ ಸಚಿವರಾಗಿದ್ದಾಗ ಬಸವಕಲ್ಯಾಣದಲ್ಲಿ ಅತ್ಯಾಧುನಿಕ ಅನುಭವ ಮಂಟಪ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಬಳಿಗೆ ಬೀದರ್ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಿ ಸಿದ್ದರಾಮಯ್ಯ ಅವರ ಮನವೊಲಿಸಿ, ಬಜೆಟ್‌ನಲ್ಲಿ ಆಧುನಿಕ ಅನುಭವ ಮಂಪಟದ ಘೋಷಣೆ ಮಾಡಿಸಿದ್ದೆ ಎಂದು ಸ್ಮರಿಸಿದರು.
ನಂತರ ಗೋರ್ಟಾ (ಬಿ) ಗ್ರಾಮದಲ್ಲಿ ನಡೆದಿರುವ 3 ದಿನಗಳ ಪೂಜ್ಯ ಪ್ರಭುದೇವರ ಚಿನ್ಮಯಾನುಗ್ರಹ ದೀಕ್ಷೆ, ಜಗನ್ಮಾತೆ ಅಕ್ಕನ ಜಯಂತ್ಯುತ್ಸವ ಹಾಗೂ ವಿಶ್ವಗುರು ಬಸವಣ್ಣನವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾದರು.