ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದಲ್ಲಿ ಸೋಮವಾರ ಜೀರ್ಣೋದ್ಧಾರಗೊಂಡ ನೂತನ ಶ್ರೀ ಧರಿಲಿಂಗೇಶ್ವರ ದೇವಾಲಯ, ಪ್ರವೇಶೋತ್ಸವ, ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ. ಕಳಸಾರೋಹಣ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾಜದಲ್ಲಿ ಮತ್ತೊಬ್ಬರ ಧರ್ಮಗಳನ್ನು ಗೌರವಿಸಬೇಕು. ಇದರ ಜತೆಯಲ್ಲಿಯೇ ನಮ್ಮ ಧರ್ಮಯನ್ನು ಕೂಡ ಗಟ್ಟಿಯಾಗಿ ಉಳಿಸಿಕೊಂಡು ಹೋಗಬೇಕು, ಕ್ರಾಂತಿ ಯೋಗಿ ಬಸವಣ್ಣ ಹೇಳಿದ ರೀತಿಯಲ್ಲಿ ಮೊದಲು ಕಾಯಕ ಪ್ರಧಾನ ಸಮಾಜ ಹಾಗೂ ಸಮಸಮಾಜದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ವಸ್ಥ ಸಮಾಜವನ್ನು ಕಾಣಬಹುದು ಎಂದು ಹೇಳಿದರು.ಪ್ರಸ್ತುತ ದಿನಗಳಲ್ಲಿ ನಗರ ಜೀವನ, ಹೊರದೇಶಗಳ ಶಿಕ್ಷಣಗಳಿಗೆ ಮಾರುಹೋಗಿ, ಕುಟುಂಬ ವ್ಯಸ್ಥೆಯೇ ಬದಲಾಗಿದ್ದು, ಯಾವುದೇ ರೀತಿಯಲ್ಲಿ ಕಂಪ್ಯೂಟರ್‌ನಿಂದ ನಾವು ತಮ್ಮ ಹಸಿವನ್ನು ಇಂಗಿಸುವ ಅಕ್ಕಿ, ರಾಗಿ ಜೋಳ ಪಡೆಯಲಾಗುವುದಿಲ್ಲ ಇವುಗಳನ್ನು ನಾವು ನಂಬಿರುವ ಭೂಮಿ ತಾಯಿಯನ್ನು ಉಳಿಮೆ ಮಾಡಿ ಅದರಲ್ಲಿ ಕಾಯಕದ ಮೂಲಕ ಮಾತ್ರವೇ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯ ಎಂದರು.
ಸಾಮಾನ್ಯವಾಗಿ ಎಲ್ಲಿ ಯಾವುದೇ ಗ್ರಾಮ, ಊರುಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ಅಲ್ಲಿ ಪುರಷರಿಗಿಂತ ಮಹಿಳೆಯರೇ ಹೆಚ್ಚು ಭಾಗವಹಿಸಿರುತ್ತಾರೆ ಇದರಿಂದಾಗಿಯೇ ನಮ್ಮ ಸಮಾಜದಲ್ಲಿ, ಧರ್ಮ, ಶಾಂತಿ, ಸೌಹಾರ್ದತೆ ಸಮನ್ವಯತೆಗಳು ಉಳಿದುಕೊಂಡು ಬರುತ್ತಿವೆ ಎಂದು ಹೇಳಿದರು.
ಮುಖಂಡ ಶಾಂತರಾಜ್ ಪಾಟೀಲ್ ಬಲಮುರಿ ಉಪನ್ಯಾಸ ನೀಡಿ, ಮನುಷ್ಯನಿಗೆ ಅನ್ನ, ಆಹಾರದಷ್ಟೇ ಬಹುಮುಖ್ಯವಾದದ್ದು ಧರ್ಮಾಚರಣೆಯಾಗಿದೆ ಎಂದರು .
ಗಾಯಕ ತಿಮ್ಮಪ್ಪ ಕಡದಕಟ್ಟೆ ರಚಿಸಿದ ಧರಿಲಿಂಗೇಶ್ವರ, ಬಸವೇಶ್ವರರ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ನಂತರ ದಾನಿಗಳು, ಗ್ರಾಮದ ಮುಖಂಡರನ್ನು ಸನ್ಮಾನಿಸಲಾಯಿತು.