ಕನ್ನಡಪ್ರಭ ವಾರ್ತೆ ತುರುವೇಕೆರೆ
ಅರ್ಚಕರ ಸಂಘದವರು ಹೊರತಂದಿರುವ ದಿನದರ್ಶಿಯಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ವಿವರ ಇದೆ. ತಾಲೂಕಿನಲ್ಲಿರುವ ಎಲ್ಲಾ ಮುಜರಾಯಿ ಇಲಾಖಾ ದೇವಾಲಯಗಳಲ್ಲಿ ಕಾಲಕಾಲಕ್ಕೆ ಪೂಜಾ ಪುನಸ್ಕಾರಗಳು ನಡೆಯುತ್ತಿರುವುದು ತಾಲೂಕು ಸುಭಿಕ್ಷವಾಗಿ ಇರಲೂ ಕಾರಣವಾಗಿದೆ. ಈ ದಿನದರ್ಶಿಯಲ್ಲಿ ರಾಜ್ಯಾದ್ಯಂತ ಇರುವ ಬಹುಪಾಲು ದೇವಾಲಯಗಳಲ್ಲಿ ನಡೆಯುವ ಎಲ್ಲಾ ರಥೋತ್ಸವದ ವಿವರಗಳು ಅಡಕವಾಗಿದೆ. ಅರ್ಚಕರು ದೇವಾಲಯಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಂಡರೆ ಅಲ್ಲೂ ದೇವರನ್ನು ಕಾಣಬಹುದು ಎಂದರು. ಸಂಘದ ಅಧ್ಯಕ್ಷ ಒಬ್ಬೇನಾಗಸಂದ್ರದ ವಿ.ಎಚ್.ಸೋಮಶೇಖರ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 480 ಮುಜರಾಯಿ ದೇವಾಲಯಗಳು ಇವೆ. ಸುಮಾರು 1500 ಅರ್ಚಕರು ಮತ್ತು ನೌಕರ ವರ್ಗವಿದೆ. ಅರ್ಚರಿಗೆ ಬರಬೇಕಾದ ತತ್ಸಿಕ್ ಹಣ ಬಿಡುಗಡೆ ವೇಳೆ ಇಲ್ಲದ ತಕರಾರು ಮಾಡಲಾಗುತ್ತಿತ್ತು. ಆದರೆ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಹಮದ್ ರವರು ಬಂದ ನಂತರ ಯಾವುದೇ ತೊಂದರೆ ಆಗದಂತೆ ತತ್ಸಿಕ್ ಹಣವನ್ನು ನೇರವಾಗಿ ಅವರರವರ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ತುಂಬಾ ಅನುಕೂಲವಾದ ಸಂಗತಿಯಾಗಿದೆ ಎಂದು ಅವರು ಹೇಳಿದರು. ಈ ವೇಳೆ ಸಂಘದ ಗೌರವಾಧ್ಯಕ್ಷರಾದ ರಾಮೇಗೌಡ, ಉಪಾಧ್ಯಕ್ಷ ಎಚ್. ಎನ್.ಹೊನ್ನಪ್ಪ, ಎಂ.ಆರ್.ರಾಮಚಂದ್ರಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಆರ್.ರಂಗನಾಥ, ಸಹ ಕಾರ್ಯದರ್ಶಿ ಸಿ.ಬಿ.ನೀಲಕಂಠಯ್ಯ, ನಿರ್ದೇಶಕರಾದ ನಂದೀಶಯ್ಯ, ಸೋಮಶೇಖರ್, ನರಸಿಂಹಮೂರ್ತಿ, ರಂಗಸ್ವಾಮಿ, ನಿಂಗಪ್ಪ, ವಿಜಯಕುಮಾರ್, ರಾಜಕುಮಾರ್, ಎ.ಪಿ.ವೆಂಟೇಶ್, ನಾರಾಯಣ ಮೂರ್ತಿ, ಆರ್.ಸೋಮಶೇಖರ ಆರಾಧ್ಯ, ಕುಮಾರ್, ಚಂದ್ರಶೇಖರ್, ನಾಮಿನಿ ನಿರ್ದೇಶಕರಾದ ಜಿ.ಚಂದ್ರಶೇಖರ್, ಲಕ್ಷ್ಮೀನಾರಾಯಣ, ಎಂ.ಆರ್.ಸ್ವಾಮಿ ಇದ್ದರು.