17ರಂದು ವಚನ ಸ್ಪಂದನ ಕೃತಿ ಬಿಡುಗಡೆ: ಕೊಟ್ರಪ್ಪ

KannadaprabhaNewsNetwork | Published : Nov 15, 2024 12:33 AM

ಸಾರಾಂಶ

ನಿವೃತ್ತ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರು ರಚಿಸಿದ ವಚನ ಸ್ಪಂದನ ಕೃತಿ ಬಿಡುಗಡೆ ಸಮಾರಂಭವನ್ನು ನ.17ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಎನ್.ಜಿ.ನಾಗನಗೌಡರಿಂದ ಸಮಾರಂಭ ಉದ್ಘಾಟನೆ, ಪ್ರೊ. ಸಿ.ವಿ. ಪಾಟೀಲ್ ಅಧ್ಯಕ್ಷತೆ - - - ಕನ್ನಡಪ್ರಭ ವಾರ್ತೆ ಹರಿಹರ ನಿವೃತ್ತ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರು ರಚಿಸಿದ ವಚನ ಸ್ಪಂದನ ಕೃತಿ ಬಿಡುಗಡೆ ಸಮಾರಂಭವನ್ನು ನ.17ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು, ಪರಸ್ಪರ ಬಳಗ, ಕರ್ನಾಟಕ ಜಾನಪದ ಪರಿಷತ್ತು ಮತ್ತು ಸಾಹಿತ್ಯ ಸಂಗಮ ಹರಿಹರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಎಸ್.ಜೆ.ವಿ.ಪಿ. ಶಿಕ್ಷಣ ಮಹಾವಿದ್ಯಾಲಯದ ಪ್ರೊ. ಜಿ.ಎಂ.ಬಸವರಾಜ ಸಭಾಂಗಣದಲ್ಲಿ ನಡೆಯುವ ವಚನ ಸ್ಪಂದನ ಕೃತಿ ಬಿಡುಗಡೆ ಸಮಾರಂಭವನ್ನು ಹೊಳೆಸಿರಿಗೆರೆ ಸೇವಾ ಧುರೀಣ ಎನ್.ಜಿ.ನಾಗನಗೌಡ ಉದ್ಘಾಟನೆ ಮಾಡುವರು. 13ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಪ್ರೊ. ಸಿ.ವಿ. ಪಾಟೀಲ್ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಡಾ. ಕೆ.ಎಂ.ವೀರೇಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಾಹಿತ್ಯ ವಿಮರ್ಶಕರಾದ ಪ್ರೊ. ಲಿಂಗರಾಜ ಕಮ್ಮಾರ್ ಪುಸ್ತಕ ಕುರಿತು ಮಾತನಾಡುವರು. ಹಿರಿಯ ಸಾಹಿತಿ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ವಿಶ್ರಾಂತ ಪ್ರಾಚಾರ್ಯ ಡಾ. ಎಸ್.ಎಚ್. ಪ್ಯಾಟಿ, ಹಿರಿಯ ಸಾಹಿತಿ ಜೆ.ಕಲೀಂ ಬಾಷ, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಎಸ್.ಎಚ್. ಹೂಗಾರ್, ಹಿರಿಯ ಕ್ರೀಡಾಪಟು ಎಚ್. ನಿಜಗುಣ ಭಾಗವಹಿಸಲಿದ್ದಾರೆ. ಹರಿಹರದ ಕಲಾವಿದ ಕತ್ತಿಗೆ ಪರಮೇಶ್ವರಪ್ಪ ಸಂಗೀತ ಸೇವೆ ನೀಡಲಿದ್ದಾರೆ ಎಂದ ಅವರು, ತಾಲೂಕು ಕ.ಸಾ.ಪ. ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಕ್ರೀಡಾಪಟು ಎಚ್. ನಿಜಗುಣ, ತಾಲೂಕು ಕ.ಜಾ.ಪ. ಅಧ್ಯಕ್ಷ ಬಿ.ಬಿ. ರೇವಣ ನಾಯ್ಕ, ಕ.ಸಾ.ಪ. ಸದಸ್ಯ ರಿಯಾಜ್ ಅಹ್ಮದ್, ಸಾಹಿತ್ಯ ಸಂಗಮ ಅಧ್ಯಕ್ಷ ವಿ.ಬಿ. ಕೊಟ್ರೇಶಪ್ಪ ಇದ್ದರು.

- - - -14ಎಚ್‍ಆರ್‍ಆರ್04:

ಹರಿಹರದಲ್ಲಿ ಎಚ್.ಕೆ. ಕೊಟ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article