ಶೀಘ್ರದಲ್ಲೇ ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ

KannadaprabhaNewsNetwork |  
Published : Nov 02, 2025, 02:30 AM IST
1ಎಚ್ಎಸ್ಎನ್8 :  | Kannada Prabha

ಸಾರಾಂಶ

ಈ ಬಾರಿಯ ಭಾರೀ ಮಳೆಯಿಂದ ರಾಜ್ಯದಾದ್ಯಂತ ಸುಮಾರು ೧೪ ಲಕ್ಷ ೫೦ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಶೀಘ್ರದಲ್ಲೆ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಾದ್ಯಂತ ೧೮ ಲಕ್ಷಕ್ಕೂ ಹೆಚ್ಚು ರೈತರ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು, ಹಾನಿಗೊಳಗಾದ ಪ್ರದೇಶದಲ್ಲಿ ಶೀಘ್ರ ಪರಿಹಾರ ನೀಡುವ ಕಾರ್ಯ ಚುರುಕುಗೊಂಡಿದೆ. ಅಲ್ಲದೆ, ಮೂಲಸೌಕರ್ಯ ಮತ್ತು ಆಸ್ತಿ-ಪಾಸ್ತಿ ಸೇರಿ ೩೪೫೦ ಕೋಟಿ ರು. ಹಾನಿಯಾಗಿದ್ದು, ಕೇಂದ್ರ ಸರ್ಕಾರದಿಂದ ೧೫೪೫ ಕೋಟಿ ರು. ಪರಿಹಾರ ಕೇಳಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಈ ಬಾರಿಯ ಭಾರೀ ಮಳೆಯಿಂದ ರಾಜ್ಯದಾದ್ಯಂತ ಸುಮಾರು ೧೪ ಲಕ್ಷ ೫೦ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಶೀಘ್ರದಲ್ಲೆ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಯೂತ್ ಹಾಸ್ಟೆಲ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ೨೭೯೮ ಕೋಟಿ ರು. ಬೆಳೆ ಪರಿಹಾರ ಅಂದಾಜಿಸಿದ್ದು, ೨೦೦ ಕೋಟಿಗೂ ಹೆಚ್ಚು ಪರಿಹಾರ ಈಗಾಗಲೇ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಉಳಿದ ರೈತರಿಗೂ ಶೀಘ್ರದಲ್ಲೇ ಪರಿಹಾರ ಹಣ ನೇರವಾಗಿ ವರ್ಗಾಯಿಸಲಾಗುವುದು. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ೮೫೫ ಮಿ.ಮೀ ಮಳೆ ಬರುವ ವಾಡಿಕೆ ಇದ್ದರೂ ಈ ಬಾರಿ ೮೮೨ ಮಿ.ಮೀ. ಮಳೆ ಸುರಿದು ಶೇ.೪ರಷ್ಟು ಹೆಚ್ಚಾಗಿದೆ ಎಂದು ವಿವರಿಸಿದರು. ಕೆಲ ಪ್ರದೇಶಗಳಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಹಿಂಗಾರಿನಲ್ಲಿ ೧೩೭ ಮಿ.ಮೀ. ಮಳೆಯಾಗಿದೆ ಎಂದರು. ರಾಜ್ಯಾದ್ಯಂತ ೧೮ ಲಕ್ಷಕ್ಕೂ ಹೆಚ್ಚು ರೈತರ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು, ಹಾನಿಗೊಳಗಾದ ಪ್ರದೇಶದಲ್ಲಿ ಶೀಘ್ರ ಪರಿಹಾರ ನೀಡುವ ಕಾರ್ಯ ಚುರುಕುಗೊಂಡಿದೆ. ಅಲ್ಲದೆ, ಮೂಲಸೌಕರ್ಯ ಮತ್ತು ಆಸ್ತಿ-ಪಾಸ್ತಿ ಸೇರಿ ೩೪೫೦ ಕೋಟಿ ರು. ಹಾನಿಯಾಗಿದ್ದು, ಕೇಂದ್ರ ಸರ್ಕಾರದಿಂದ ೧೫೪೫ ಕೋಟಿ ರು. ಪರಿಹಾರ ಕೇಳಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಂದರು.ಕಂದಾಯ ಇಲಾಖೆಯ ಬಗ್ಗೆ ಮಾತನಾಡಿದ ಸಚಿವರು, ಅನೇಕ ವರ್ಷಗಳಿಂದ ಬಾಕಿ ಉಳಿದ ಭೂ ವ್ಯಾಜ್ಯಗಳನ್ನು ಆಂದೋಲನದ ಮಾದರಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ತಹಸೀಲ್ದಾರ್‌ ನ್ಯಾಯಾಲಯದಲ್ಲಿ ಬಾಕಿ ಇದ್ದ ೧೦೭೭೪ ಪ್ರಕರಣಗಳನ್ನು ೬೯೪ಕ್ಕೆ ಇಳಿಸಿದ್ದೇವೆ. ಎಸಿ ಕೋರ್ಟ್‌ಗಳಲ್ಲಿ ೫೯೩೩೯ ಬಾಕಿ ಪ್ರಕರಣಗಳನ್ನು ೧೨೬೩೧ಕ್ಕೆ ಇಳಿಸಲಾಗಿದೆ. ಐದು ವರ್ಷಕ್ಕಿಂತ ಹೆಚ್ಚು ಬಾಕಿ ಇದ್ದ ೩೨೭೨೭ ಪ್ರಕರಣಗಳಲ್ಲಿ ಇದೀಗ ೪೦೩೧ ಮಾತ್ರ ಉಳಿದಿವೆ. ೨೦ ಹೆಚ್ಚುವರಿ ಎಸಿಗಳನ್ನು ನೇಮಕ ಮಾಡಲಾಗಿದೆ. ಹಾಸನ ಎಸಿ ಕೋರ್ಟ್‌ನಲ್ಲಿ ೯೦೬ ಪ್ರಕರಣ ಬಾಕಿ ಇದ್ದಲ್ಲಿ ಈಗ ೧೧೨ ಮಾತ್ರ ಉಳಿದಿವೆ. ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿ ೭೩೨ ಬಾಕಿ ಪ್ರಕರಣಗಳಲ್ಲಿ ೧೯೪ ಮಾತ್ರ ಇವೆ ಎಂದು ಸಚಿವರು ವಿವರಿಸಿದರು.ಹಾಸನಾಂಬೆ ಜಾತ್ರೆ ಯಶಸ್ವಿ:

ಈ ಬಾರಿಯ ಹಾಸನಾಂಬೆ ಉತ್ಸವ ಎಲ್ಲರ ಸಹಕಾರದಿಂದ ಸುಗಮವಾಗಿ ನಡೆದಿದ್ದು, ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದೆ. “ದೇವಿ ಜನರೊಡನೆ ವಾಪಾಸ್ ಸಿಕ್ಕಂತಾಗಿದೆ " ಎಂಬ ಭಾವನೆ ಜನರಲ್ಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಎಲ್ಲರ ಸಹಕಾರದಲ್ಲಿ ಈ ಉತ್ಸವ ಯಶಸ್ವಿಯಾಗಿದೆ. ಎಲ್ಲರಿಗೂ ಧನ್ಯವಾದ ತಿಳಿಸಲಾಗುವುದು ಎಂದು ಹೇಳಿದರು.

ಪಾಲಿಕೆ ಅನುದಾನ ಕುರಿತು ಸ್ಪಷ್ಟನೆ:

ಹಾಸನ ಮಹಾನಗರ ಪಾಲಿಕೆ ಅನುದಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಗರ ಸಂಸ್ಥೆ ಉನ್ನತೀಕರಣವಾದ ಬಳಿಕ ಮೂರು ವರ್ಷಗಳವರೆಗೆ ಹೆಚ್ಚುವರಿ ಹುದ್ದೆ ಅಥವಾ ಅನುದಾನ ನೀಡಲು ಅವಕಾಶವಿಲ್ಲ. ಮೂರು ವರ್ಷಗಳ ನಂತರ ಹೆಚ್ಚಿನ ಅನುದಾನ ಹಾಗೂ ಸಿಬ್ಬಂದಿ ನೀಡಲಾಗುವುದು ಎಂದರು. ಇನ್ನು ನಾನು ರಾಜಕೀಯದ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಇದರಿಂದ ಯಾವ ಪ್ರಯೋಜನವಿಲ್ಲ. ಜನರಿಗೆ ಅನುಕೂಲವಾಗುವ ಕುರಿತು ಹೆಚ್ಚು ಮಾತನಾಡುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜೀತಾ, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ ಇತರರು ಉಪಸ್ಥಿತರಿದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ