ಧರ್ಮ, ದೇಶಪ್ರೇಮಿ ಮಹಾರಾಣಾ ಪ್ರತಾಪಸಿಂಹ

KannadaprabhaNewsNetwork | Published : Oct 28, 2024 1:18 AM

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಧರ್ಮದ ಮೇಲೆ ನಂಬಿಕೆ ಮತ್ತು ದೇಶ ಪ್ರೇಮ ಹೊಂದಿದ್ದ ಮಹಾರಾಣಾಪ್ರತಾಪಸಿಂಹರದ್ದು ದೇಶದ ಇತಿಹಾಸವನ್ನು ಕಾಪಾಡುತ್ತ ಮುನ್ನಡೆದಿದ್ದರು. ಅವರು ಯಾವುದೇ ಸ್ವಹಿತಾಸ್ಕತಿಯನ್ನು ಇಟ್ಟುಕೊಂಡಿರಲಿಲ್ಲ ಎಂದು ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಧರ್ಮದ ಮೇಲೆ ನಂಬಿಕೆ ಮತ್ತು ದೇಶ ಪ್ರೇಮ ಹೊಂದಿದ್ದ ಮಹಾರಾಣಾಪ್ರತಾಪಸಿಂಹರದ್ದು ದೇಶದ ಇತಿಹಾಸವನ್ನು ಕಾಪಾಡುತ್ತ ಮುನ್ನಡೆದಿದ್ದರು. ಅವರು ಯಾವುದೇ ಸ್ವಹಿತಾಸ್ಕತಿಯನ್ನು ಇಟ್ಟುಕೊಂಡಿರಲಿಲ್ಲ ಎಂದು ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.ಸ್ಥಳೀಯ ಬಸ್ ನಿಲ್ದಾಣದ ಬಳಿ ಮಹಾರಾಣಾಪ್ರತಾಪಸಿಂಹ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ನೂತನ ವೃತ್ತ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ದೇಶಕ್ಕಾಗಿ ಧರ್ಮಕ್ಕಾಗಿ ಮುನ್ನಡೆದಿದ್ದ ರಾಣಾಪ್ರತಾಪಸಿಂಹ ಅವರಂತೆ ತಾಳಿಕೋಟೆಯ ರಜಪೂತ ಸಮಾಜದವರೂ ಸಹ ಜೀವ ಕೊಟ್ಟೇವು ರಕ್ತ ಕೊಟ್ಟೇವು ಧರ್ಮ ಎಂಬುದ್ದನ್ನು ರಕ್ಷಣೆ ಮಾಡುತ್ತಾ ಸಾಗುವಂತಹ ಮನೋಭಾವನೆ ಅವರಲ್ಲಿದೆ ಎಂದು ಬಣ್ಣಿಸಿದರು. ರಾಣಾಪ್ರತಾಪರಲ್ಲಿ ಮಾನವೀಯ ಧರ್ಮವೆಂಬುದು ಇತ್ತು. ಧರ್ಮಕ್ಕಾಗಿ ದುಡಿಯೋಣವೆಂಬುದು ರಜಪೂತ ಸಮಾಜದವರಲ್ಲಿದೆ. ಮಹಾ ರಾಣಾಪ್ರತಾಪಸಿಂಹ ಅವರ ದೇಶಾಭಿಮಾನ ರೂಡಿಸಿಕೊಂಡಿರುವ ತಾಳಿಕೋಟೆಯ ಜನತೆಯೂ ಯಾವುದೇ ಬೇಧ ಭಾವವಿಲ್ಲದೇ ಭೂಮಿಪೂಜೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲ ಅಹ್ಮದ ಖಾಜಿ ಮಾತನಾಡಿ, ೧೫೪೦ರಲ್ಲಿ ಜನ್ಮ ತಾಳಿದ ಮಹಾರಾಣಾಪ್ರತಾಪಸಿಂಹ ಅವರು ೫೬ ವರ್ಷಗಳಲ್ಲಿ ಭಾರತಕ್ಕೆ ಯೋಧ ದಾನ ನೀಡಿದ್ದಾರೆ. ರಜಪೂತ ಸಮಾಜ ಒಳಿತಿಗಾಗಿ ಭಲವರ್ದನೆಗಾಗಿ ಪ್ರತಾಪಸಿಂಹ ಅವರು ಆಳ್ವಿಕೆ ಮಾಡಿದ್ದಾರೆ. ಹಿಂದಿನ ರಾಜರಲ್ಲಿ ರಾಣಾಪ್ರತಾಪ ಸಿಂಹ ಅವರು, ಛತ್ರಪತಿ ಶಿವಾಜಿ ಮಹಾರಾಜರು ಅಂತಹ ಎಲ್ಲ ರಾಜರುಗಳು ನೀಡಿದ ಸಂದೇಶಗಳಲ್ಲಿ ಯಾವುದು ಬೇಧ ಭಾವವಿಲ್ಲ ಎಂದು ತಿಳಿಸಿದರು.ಕೈಲಾಸ ಪೇಠದ ಶ್ರೀ ಬಸವಪ್ರಭು ದೇವರು ಮಾತನಾಡಿ, ಮಹಾರಾಣಾ ಪ್ರತಾಪಸಿಂಹ ಅವರ ಮೂರ್ತಿ ಪ್ರತಿಷ್ಠಾಪನೆಗಾಗಿ ಭೂಮಿ ಪೂಜೆ ನೆರವೇರಿಸಿರುವದು ಸಂತಸ ತಂದಿದ್ದು, ಇತಿಹಾಸ ಕಾಪಾಡಲು ಎಲ್ಲರೂ ಮುಂದಾಗಬೇಕೆಂದರು.ಸಮಾಜದ ಯುವ ಮುಖಂಡ ವಿಜಯಸಿಂಗ್ ಹಜೇರಿ ಮಾತನಾಡಿ, ಮಹಾರಾಣಾ ಪ್ರತಾಪಸಿಂಹ ಅವರಲ್ಲಿದ್ದ ಸ್ವಾಭಿಮಾನದ ಕುರಿತು ವಿವರಿಸಿದರು.

ಖಾಕಂಡಕಿ ಗುರುದೇವಾಶ್ರಮದ ಶಿವಯೋಗೇಶ್ವರ ಸ್ವಾಮಿಜಿ ಮಾತನಾಡಿ, ಪಟ್ಟಣದ ಜನತೆ ಒಗ್ಗೂಡಿ ಆತ್ಮೀಯತೆ ಭಾವನೆಯೊಂದಿಗೆ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮದ ಯಶಸ್ವಿಯಾಗಿದೆ ಎಂದು ಹೇಳಿದರು.

ಶಿಕ್ಷಕ ಅಶೋಕ ಹಂಚಲಿ ಮಾತನಾಡಿದರು. ವೇದಿಕೆಯ ಮೇಲೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಪಿಎಸ್‌ಐ ರಾಮನಗೌಡ ಸಂಕನಾಳ, ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಭರತಸಿಂಗ್ ಹಜೇರಿ, ಮಾನಸಿಂಗ್ ಕೊಕಟನೂರ, ರಘುರಾಮಸಿಂಗ್ ಹಜೇರಿ, ಅರುಣ ದಡೇದ, ಪ್ರಕಾಶ ಹಜೇರಿ, ಬಾಬು ಹಜೇರಿ, ಅಮೀತ್‌ಸಿಂಗ್ ಮನಗೂಳಿ, ಸುರೇಶ ಹಜೇರಿ, ಜೈಸಿಂಗ್ ಮೂಲಿಮನಿ, ವಿಠ್ಠಲಸಿಂಗ್ ಬೇಕಿನಾಳ, ಗೋವಿಂದಸಿಂಗ್ ಮೂಲಿಮನಿ, ಶಿರಸಕುಮಾರಸಿಂಗ್ ಹಜೇರಿ, ರಥನಸಿಂಗ್ ಕೊಕಟನೂರ, ಉಮರಸಿಂಗ್ ಗೌಡಗೇರಿ, ಸಂಜಯಸಿಂಗ್ ಹಜೇರಿ, ಸೌರಭ ವಿಜಾಪೂರ, ಪ್ರದೀಪ ವಿಜಾಪೂರ, ಕೇಸರಿಸಿಂಗ್ ಹಜೇರಿ, ಸುನೀಲ್ ಭಯಾಸ್, ದೀಲಿಪಸಿಂಗ್ ಹಜೇರಿ, ರಾಮಸಿಂಗ್ ವಿಜಾಪೂರ, ಉಮರಸಿಂಗ್ ಹಜೇರಿ, ಹಾಗೂ ಸರ್ವ ಸಮಾಜದ ಮುಖಂಡರು ಭಾಗವಹಿಸಿದ್ದರು. ಅವರು ವಂದೇ ಮಾತರಂ ಗೀತೆ ಹಾಡಿ ಕಾರ್ಯಕ್ರಮ ಮಂಗಲಗೊಳಿಸಿದರು.

Share this article