ಯುವಜನತೆಗೆ ಧಾರ್ಮಿಕ ಶಿಕ್ಷಣದ ಅಗತ್ಯವಿದೆ - ಕೇಮಾರು ಶ್ರೀ

KannadaprabhaNewsNetwork |  
Published : Jan 26, 2026, 04:30 AM IST
ಉಡುಪಿಯ ಸಂತೆಕಟ್ಟೆಯ ಗೋಪಾಲಪುರದ ಶಿರೂರು ಮಠದ ವಠಾರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಇಂದಿನ ಯುವಜನತೆ ಜೀವನ ಪದ್ದತಿಯಲ್ಲಿ ಆಧುನಿಕತೆ ಅತಿಯಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರಂತ, ಆದ್ದರಿಂದ ಯುವಕರಿಗೆ ಧಾರ್ಮಿಕ ಶಿಕ್ಷಣದ ತುರ್ತು ಅವಶ್ಯಕತೆ ಇದೆ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಠ್ಠಲದಾಸ ಸ್ವಾಮೀಜಿ ತಿಳಿಸಿದರು.

ಉಡುಪಿ: ಇಂದಿನ ಯುವಜನತೆ ಜೀವನ ಪದ್ದತಿಯಲ್ಲಿ ಆಧುನಿಕತೆ ಅತಿಯಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರಂತ, ಆದ್ದರಿಂದ ಯುವಕರಿಗೆ ಧಾರ್ಮಿಕ ಶಿಕ್ಷಣದ ತುರ್ತು ಅವಶ್ಯಕತೆ ಇದೆ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಠ್ಠಲದಾಸ ಸ್ವಾಮೀಜಿ ತಿಳಿಸಿದರು.

ಅವರು ಶನಿವಾರ ಇಲ್ಲಿನ ಸಂತೆಕಟ್ಟೆಯ ಗೋಪಾಲಪುರದ ಶಿರೂರು ಮಠದ ವಠಾರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ಹಿಂದೂ ಸಂಘಟನೆಗಳ ಪ್ರಮುಖರಾದ ಶಂಕರ್ ಶೆಟ್ಟಿ ಪುತ್ತೂರು, ವಿನೋದ್ ಕುಮಾರ್, ಹಿಂದೂ ಸಂಗಮ ಉಡುಪಿ ನಗರ ಸಂಯೋಜಕ ಮುರುಳಿ ಪೆರಂಪಳ್ಳಿ ಉಪಸ್ಥಿತರಿದ್ದರು. ಸುಜಿತ್ ಶೆಟ್ಟಿ ಕೆಳಾರ್ಕಳಬೆಟ್ಟು ಪ್ರಾಸ್ತಾವಿಕ ಮಾತನಾಡಿದರು. ಶಿವಪ್ರಸಾದ್ ಮಲೆಬೆಟ್ಟು ದಿಕ್ಸೂಚಿ ಭಾಷಣ ಮಾಡಿದರು. ಕಿಶೋರ್ ಸ್ವಾಗತಿಸಿ, ಸಂದೇಶ್ ಶೆಟ್ಟಿ ವಂದಿಸಿದರು. ಅಕ್ಷಯ್ ಹೆಗ್ಡೆ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಮೇಘನ ಮತ್ತು ಮಂಜರಿ ಚಂದ್ರ ಇವರ ತಂಡದಿಂದ ನೃತ್ಯ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ತೂರು ಬಸಿಲಿಕಾದಲ್ಲಿ ಸಂತ ಲಾರೆನ್ಸ್ ವಾರ್ಷಿಕ ಮಹೋತ್ಸವ ಆರಂಭ
ಮೋಡಿ ಮಾಡಿದ ‘ಕುಡ್ಲ ಶ್ವಾನ’ ಪ್ರದರ್ಶನ