ಕುಕನೂರು: ಬಡವರ, ನೊಂದವರ ಮೊಗದಲ್ಲಿ ಲಿಂ.ಶಿವಸಂಗಮೇಶ್ವರ ಸ್ವಾಮೀಜಿ ಮಂದಹಾಸ ಮೂಡಿಸಿದ್ದಾರೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಎರಡುವರೆ ವರ್ಷದಿಂದ ಆರೋಗ್ಯದಲ್ಲಿ ತೊಂದರೆ ಆದ ಕಾರಣ ತೊಂದರೆ ಅನುಭವಿಸುವಂತ್ತಾಯಿತು. ಅವರು ತಮ್ಮ ಜೀವನವನ್ನು ಗಂಧದ ಕೊರಡಿನಂತೆ ತೆವೆದರು. ತಮ್ಮ ಆರೋಗ್ಯ ಸಹ ಲೆಕ್ಕಿಸದೆ ಭಕ್ತರ ಕಲ್ಯಾಣ ಕಾರ್ಯಕ್ಕೆ ಸದಾ ತೆರಳುತ್ತಿದ್ದರು. ಸಮಾಜಕ್ಕೆ ಸರ್ವಸ್ವ ಧಾರೆ ಎಳೆದಿದ್ದರು. ಹಿಂದಿನ ಹಲವು ವರ್ಷಗಳ ಹಿಂದೆ ಪಂಚಪೀಠಾಧಿಪತಿಗಳನ್ನು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕರೆಯಿಸಿದ್ದರು. ದಾಸೋಹದಲ್ಲಿ ಬಂದ ಭಕ್ತರಿಗೆ ಹಲವಾರು ವರ್ಷಗಳ ಹಿಂದೇಯೇ ತುಪ್ಪದ ಊಟ ಮಾಡಿಸಿದ್ದರು. ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಸ್ಥಳೀಯ ರಾಜಕಾರಣಿಗಳು ಸಹ ಲಿಂಗದೀಕ್ಷೆ ಕೊಟ್ಟು ಮಾರ್ಗದರ್ಶನ ಮಾಡಿ ಧರ್ಮ ಬೋಧನೆ ಸಹ ಬೆದವಟ್ಟಿ ಶ್ರೀಗಳು ಮಾಡಿದ್ದಾರೆ ಎಂದರು.
ಯಲಬುರ್ಗಾ ಹಿರೇಮಠದ ಶ್ರೀಸಿದ್ದರಾಮೇಶ್ವರ ಸ್ವಾಮೀಜಿ, ಕುಕನೂರಿನ ಅನ್ನದಾನಿಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ, ಮಂಗಳೂರು ಅರಳೆಲೆ ಮಠದ ಶ್ರೀಗಳು, ಚಳಗೇರಿ ಮಠದ ಶ್ರೀಗಳು ಸೇರಿದಂತೆ ಗಣ್ಯರು, ಪ್ರಮುಖರು, ಗ್ರಾಮಸ್ಥರು ಅಪಾರ ಭಕ್ತರಿದ್ದರು.ಬೆಳಗ್ಗೆ ಶ್ರೀಗಳ ಗದ್ದುಗೆಗೆ ಶ್ರೀಶೈಲ ಜಗದ್ಗುರುಗಳಿಂದ ಪೂಜೆ ಸಲ್ಲಿತು. ಹೂವಿನಿಂದ ಗದ್ದುಗೆ ಅಲಂಕಾರ ಮಾಡಲಾಗಿತ್ತು. ಅಪಾರ ಪ್ರಮಾಣದ ಭಕ್ತರು ಆಗಮಿಸಿದ್ದರು. ಅನ್ನಸಂತರ್ಪಣೆ ಜರುಗಿತು.