ಕುಷ್ಟಗಿ: ಕೃಷಿ ಕುಟುಂಬದಲ್ಲಿ ಜನಿಸಿ ಸಹಕಾರ, ಸಾಹಿತ್ಯ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಶೇಖರಗೌಡ ಮಾಲಿಪಾಟೀಲ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಾಲಿಪಾಟೀಲರ ಷಷ್ಠಿ ಪೂರ್ತಿ ಯಶಸ್ವಿ ಆಗಿದೆ, ಇನ್ನೂ ಮುಂದಿನ ಜೀವನ ಉಜ್ವಲಗೊಳ್ಳಲಿ ಎಂದು ಹಾರೈಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ. ಯಾರಿಗೂ ಕೇಡನ್ನು ಬಯಸದ ಶೇಖರಗೌಡ ಶರಣರ ತತ್ವಗಳನ್ನು ಅಳವಡಿಸಿಕೊಂಡು ಬದುಕನ್ನು ಸಾಗಿಸಿದ್ದಾರೆ. ಶಿಕ್ಷಣ ರಾಜಕೀಯ ಸಾಹಿತ್ಯ ಸಹಕಾರ ಕೃಷಿ ಎಲ್ಲೆಡೆಯು ಸಾಧನೆ ಮಾಡಿದ್ದಾರೆ. ಎಲ್ಲರನ್ನು ಒಳಗೊಳ್ಳುವ ಗುಣ ಹೊಂದಿದ್ದಾರೆ ಅವರು ಮಾಡಿಕೊಟ್ಟ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪುಗಳು ಎಂದೆಂದಿಗೂ ಅಜರಾಮರ. ಇವರು ಒಂದು ಪಕ್ಷದಲ್ಲೂ ಗುರುತಿಸಿಕೊಂಡರು ಸಹಿತ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಎಲ್ಲಿಯೂ ಪಕ್ಷದ ಹೆಸರನ್ನು ಬಳಕೆ ಮಾಡಿಲ್ಲ ಇವರು ಉತ್ತಮ ನಾಯಕತ್ವ ಗುಣ ಉಳ್ಳವರು ಎಂದರು.ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಮಾತನಾಡಿ, ಶೇಖರಗೌಡರ ಜತೆಯಲ್ಲಿ ಸುಮಾರು 20 ವರ್ಷಗಳ ಕಾಲ ಒಡನಾಡಿಯಾಗಿದ್ದು, ಇಬ್ಬರು ಒಟ್ಟಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಮಾಡಿದ್ದೇವೆ. 14 ಜಿಲ್ಲೆಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡಿದ್ದು ಹಸಿರು ಹೊನ್ನು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗಿತ್ತು ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ರೋಣ ಶಾಸಕ ಜಿ.ಎಸ್.ಪಾಟೀಲ, ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ, ವಿಪ ಸದಸ್ಯ ಶರಣಗೌಡ ಬಯ್ಯಾಪುರ, ಮಾಜಿ ಶಾಸಕ ಕೆ ಶರಣಪ್ಪ, ಬಸವರಾಜ ದಡೆಸಗೂರು, ವಿಶ್ವನಾಥ ಪಾಟೀಲ, ಶಿವಶಂಕರಗೌಡ ಕಡೂರು, ಎಚ್.ಮಾರಪ್ಪ, ಬಸವಂತರಾಯ ಕುರಿ, ಶ್ಯಾಮರಾವ್ ಕುಲಕರ್ಣಿ, ಮಾಲತಿ ನಾಯಕ, ವೆಂಕನಗೌಡ ಹಿರೇಗೌಡ್ರು, ನಿರುಪಾದಿ ಮಕಾಶಿ, ಮಿನಾಕ್ಷಿ ಎಚ್, ಅಮರೇಶ ಯಥಗಲ್, ಎಂ.ಡಿ. ಪೂಜಾರ ಸೇರಿದಂತೆ ಅನೇಕರು ಇದ್ದರು.