ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಪಂ ಆವರಣದಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹನೀಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರವನ್ನು ನಾವು ಲಘುವಾಗಿ ತೆಗೆದುಕೊಂಡಿದ್ದೇವೆ ಅದರ ಮಹತ್ವ ಗೊತ್ತಾಗುವುದಿಲ್ಲ. ಮುಂದಿನ ಪೀಳಿಗೆಗೆ ಕೂಡ ಸ್ವಾತಂತ್ರ್ಯ ಅಂದರೆ ಏನು. ಅದನ್ನು ಪಡೆಯಲು ಪ್ರಾಣತೆತ್ತ ಮಹಾಪುರುಷರ ಕತೆಗಳನ್ನು ತಿಳಿಸಬೇಕಿದೆ. ಅಂದಾಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗಲಿದೆ ಎಂದು ಹೇಳಿದರು.
ಸಂವಿಧಾನದ ಮುನ್ನುಡಿಯಲ್ಲಿ ತಿಳಿಸಿದ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಇವುಗಳನ್ನು ಎಲ್ಲರೂ ಅರ್ಥಮಾಡಿಕೊಂಡು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಗ್ರಾಮೀಣ ಅಭಿವೃದ್ಧಿಯಲ್ಲಿ ಜಿಪಂ ಪಾತ್ರ ಬಹಳ ಪ್ರಮುಖವಾಗಿದೆ. ಬಡತನ ನಿರ್ಮೂಲನೆ, ಶಿಕ್ಷಣ ಮತ್ತು ಆರೋಗ್ಯ ಮುಂತಾದ ವ್ಯವಸ್ಥೆಗಳನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಎಲ್ಲರೂ ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದಲ್ಲಿ ಮಾತ್ರ ನಮ್ಮ ಪೂರ್ವಜರು ಕಂಡ ಕನಸು ನನಸಾಗುತ್ತದೆ ಎಂದವರು ಹೇಳಿದರು.ಜಿಪಂಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಶಿಕ್ಷಣಾಧಿಕಾರಿ ಬಿಸಿಊಟ ಯೋಜನೆ ಲಕ್ಷ್ಮಣ ಯಕ್ಕುಂಡಿ, ಲೆಕ್ಕಾಧಿಕಾರಿ ಗಂಗಾ ಹಿರೇಮಠ, ಸಹಾಯಕ ಕಾರ್ಯದರ್ಶಿ ರಾಹುಲ ಕಾಂಬಳೆ, ಕಚೇರಿ ಅಧೀಕ್ಷಕ ಬಸವರಾಜ ಮುರಘಾಮಠ, ಸಹಾಯಕ ನಿರ್ದೇಶಕಿ ಜಯಶ್ರೀ ನಂದೆಣ್ಣವರ ಹಾಗೂ ಜಿಪಂ ಸಿಬ್ಬಂದಿ ಇದ್ದರು.