ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಾನಪದ ಲೋಕದಲ್ಲಿ ಧ್ವಜಾರೋಹಣ ನೆರವೇರಿ ಮಾತನಾಡಿದರು. ಸ್ವಾತಂತ್ರ್ಯ ಪಡೆದ ಭಾರತ ತಾಂತ್ರಿಕವಾಗಿ ಅಭಿವೃದ್ಧಿ ಪಥದತ್ತ ಸಾಗಿದೆ. ಈಗ ಭಾರತ ವಿಶ್ವದಲ್ಲೇ ಅತ್ಯಂತ ಅಗ್ರಸ್ಥಾನದಲ್ಲಿದೆ. ಇಂತಹ ಸಂದರ್ಭದಲ್ಲಿ ಪರಸ್ವರ ಕಿತ್ತಾಟಗಳನ್ನು ಬಿಟ್ಟು ಎಲ್ಲ ರಂಗದಲ್ಲೂ ಪ್ರಗತಿ ಸಾಧಿಸಬೇಕಿದೆ. ಅಂತಹ ಕಾರ್ಯದಲ್ಲಿ ನಮ್ಮಂತಹ ಸಂಸ್ಥೆಯು ಇಂತಹ ಮಹತ್ಕಾರ್ಯವನ್ನು ಸಾಧಿಸಬೇಕಿದೆ. ಎಲ್ಲರೂ ಈ ನಿಟ್ಟಿನಲ್ಲಿ ದುಡಿಯಬೇಕಿದೆ ಎಂದು ತಿಳಿಸಿದರು.
ಕೆ.ಎಲ್ .ನಾಗೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ಕ್ಯೂರೇಟರ್ ಡಾ. ರವಿ, ರಂಗ ಸಹಾಯಕರಾದ ಪ್ರದೀಪ್, ಸಂಶೋಧನ ಕೇಂದ್ರದ ಸಂಚಾಲಕರಾದ ಡಾ.ಸಂದೀಪ್, ಜಾನಪದ ಲೋಕದ ಸಿಬ್ಬಂದಿಗಳು, ಹಾವೇರಿಯ ಜಾನಪದ ಪ್ರತಿಮೆಗಳ ತಯಾರಿಕಾ ಕಲಾವಿದರು ಉಪಸ್ಥಿತರಿದ್ದರು.