ಪುಟ್ಟರಾಜ ಗವಾಯಿಗಳ ಸ್ಮರಿಸಿದರೆ ಜನ್ಮ ಸಾರ್ಥಕ: ಶ್ರೀಗಳು

KannadaprabhaNewsNetwork |  
Published : Sep 22, 2026, 02:30 AM IST
ಡಾ. ಪಂ. ಪುಟ್ಟರಾಜ ಕವಿ ಶಿವಯೋಗಿಗಳವರ 16ನೇ ಪುಣ್ಯಸ್ಮರಣೋತ್ಸವ, ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ ಹಾಗೂ ಸ್ವರ ನಮನ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಲಿಂ.ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರು ತಮ್ಮ ಇಡೀ ಬದುಕನ್ನು ಪರೋಪಕಾರ ಮತ್ತು ಸಮಾಜಸೇವೆಗಾಗಿ ಮೀಸಲಿಟ್ಟಿದ್ದರಿಂದ ಅವರ ಸಮರ್ಪಿತ ಬದುಕನ್ನು ನಾವೆಲ್ಲರೂ ಸ್ಮರಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಲಿಂ.ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರು ತಮ್ಮ ಇಡೀ ಬದುಕನ್ನು ಪರೋಪಕಾರ ಮತ್ತು ಸಮಾಜಸೇವೆಗಾಗಿ ಮೀಸಲಿಟ್ಟಿದ್ದರಿಂದ ಅವರ ಸಮರ್ಪಿತ ಬದುಕನ್ನು ನಾವೆಲ್ಲರೂ ಸ್ಮರಿಸುವಂತಾಗಿದೆ ಎಂದು ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ಗಾನಯೋಗಿ ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಶಿವಯೋಗಿಗಳವರ 16ನೇ ಪುಣ್ಯಸ್ಮರಣೋತ್ಸವ, ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ ಹಾಗೂ ಸ್ವರ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಪಂ. ಪುಟ್ಟರಾಜರ ಗವಾಯಿಗಳವರನ್ನು ಸ್ಮರಿಸಿದರೆ ಜನ್ಮ ಸಾರ್ಥಕವಾಗುತ್ತದೆ. ಅವರು ಶಿವನೊಂದಿಗೆ ಅನುಸಂಧಾನ ಮಾಡಿ ಶಿವಯೋಗಿಗಳಾಗಿದ್ದಾರೆ. ಶಿವನು ಬೇರೆಯಲ್ಲ ಶಿವಯೋಗಿ ಬೇರೆಯಲ್ಲ, ಲೋಕದ ಜನರ ಕಷ್ಟಗಳನ್ನು ಪರಿಹರಿಸಲು ಶಿವನ ರೂಪದಲ್ಲಿ ಶಿವಯೋಗಿಯಾಗಿ ಪುಟ್ಟರಾಜ ಗವಾಯಿಗಳು ನಮಗೆ ಕಾಣುತ್ತಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ವಾಸಣ್ಣ ಕುರುಡಗಿ ಮಾತನಾಡಿ, ಮಠಮಾನ್ಯಗಳು ಹೇಗಿರಬೇಕು ಎನ್ನುವದಕ್ಕೆ ವಿರೇಶ್ವರ ಪುಣ್ಯಾಶ್ರಮ ಮಾದರಿಯಾಗಿದೆ ಎಂದರು.

ಬಿ.ಶ್ರೀರಾಮುಲುವರ ಆಪ್ತ ಸಹಾಯಕ ಎಸ್.ಎಚ್. ಶಿವನಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಅಧ್ಯಕ್ಷ ಶಿವಲಿಂಗಯ್ಯಸ್ವಾಮಿ ಹಿರೇಮಠ ಸಿದ್ದಾಪುರ ಮಾತನಾಡಿದರು.

ಈ ವೇಳೆ ಲಿಂ. ರಾಜಶೇಖರಯ್ಯನವರು ಹಾಗೂ ಲಿಂ.ನೀಲಾಂಬಿಕಾ ನವಲಿಹಿರೇಮಠ ಕೊಪ್ಪಳ ಅವರ ಸ್ಮರಣಾರ್ಥ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮುಧೋಳದ ಪಂ. ದೇವೇಂದ್ರಕುಮಾರ ಪತ್ತಾರ, ಬಿ.ಶ್ರೀರಾಮುಲು ಅವರ ಮಾತೋಶ್ರೀ ದಿ. ಹೊನ್ನೂರಮ್ಮ ಅವರ ಸ್ಮರಣಾರ್ಥ ವಾದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗದುಗಿನ ಪಂ. ಶರಣಕುಮಾರ ಗುತ್ತರಗಿ ಹಾಗೂ ಜ್ಯೋತಿಷ್ಯವಾಗ್ನಿ ಪಂ.ಲಿಂ. ಚನ್ನವೀರಶಾಸ್ತ್ರಿ ಹಿಡ್ಕಿಮಠ ಅವರ ಸ್ಮರಣಾರ್ಥ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಡ್ನಿಯ ರಾಚಯ್ಯ ಹಿರೇಮಠ ಅವರಿಗೆ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಮಾಜ ಸೇವಕರಾದ ರವಿಕಾಂತ ಅಂಗಡಿ, ಸದಾಶಿವಯ್ಯಸ್ವಾಮಿ ಮದರಿಮಠ, ವಸಂತ ಪಡಗದ, ಪಂಚಾಕ್ಷರಿ ಹಿಡ್ಕಿಮಠ, ಕಿರಣ ಭೂಮಾ, ಚನ್ನಯ್ಯಸ್ವಾಮಿ ಹಿರೇಮಠ ಸೇರಿ ಮುಂತಾದವರು ಇದ್ದರು. ಸದಾನಂದ ಶಾಸ್ತ್ರಿಗಳು ಹರ್ತಿ ಹಿರೇಮಠ ನಿರೂಪಿಸಿದರು. ನಂತರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಿಷ್ಯ ಪ್ರಶಿಷ್ಯವರಿಂದ ಅಹೋರಾತ್ರಿ ಸ್ವರ-ನಮನ ಕಾರ್ಯಕ್ರಮ ಜರುಗಿತು. ಇದಕ್ಕೂ ಮುನ್ನ ಬೆಳಗ್ಗೆ ಶಿವಯೋಗಿ ಡಾ. ಪಂ. ಪುಟ್ಟರಾಜ ಗುರುವರ್ಯರರ ಭಾವಚಿತ್ರದ ಮೆರವಣಿಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದಿಂದ ಕುಂಭ ಹಾಗೂ ಕಳಸ ಕನ್ನಡಿಯೊಂದಿಗೆ ವಿವಿಧ ಕಲಾತಂಡಗಳೊಂದಿಗೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌಲ್ಯಯುತ ಶಿಕ್ಷಣದ ಅನುಷ್ಠಾನ ಬಹಳ ಮುಖ್ಯ: ಮುಪ್ಪಿನ ಬಸವಲಿಂಗ ಶ್ರೀ
ದಲಿತ ಕುಟುಂಬದ ಮನೆ ಧ್ವಂಸಗೊಳಿಸಿದ ಆರೋಪಿಗಳ ಬಂಧಿಸಲು ಆಗ್ರಹ