ಲಕ್ಷ್ಮೇಶ್ವರ: ಗುರುವಿನ ಹಾಗೂ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಅಕ್ಷರದ ಬೆಳಕಿನ ಮೂಲಕ ದಾರಿ ತೋರಿದ ಗುರುವನ್ನು ಸ್ಮರಣೆ ಮಾಡುವುದು ಅಗತ್ಯವಾಗಿದೆ ಎಂದು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ರಾಜಯೋಗಿನಿ ನಾಗಲಾಂಬಿಕೆ ತಿಳಿಸಿದರು.
ಗುರು ಮತ್ತು ತಾಯಿಯು ಋಣ ತೀರಿಸಲಾಗದ ಋಣವಾಗಿದೆ. ನಮಗೆ ಜನ್ಮ ನೀಡಿ ನಮ್ಮ ಏಳಿಗೆಗೆ ಪ್ರತಿಕ್ಷಣವೂ ಒಳಿತನ್ನು ಬಯಸುವ ತಾಯಿ ಹಾಗೂ ನಮ್ಮೆಲ್ಲರ ಕುಲ ಗೋತ್ರ ಎಣಿಸದೆ, ಮೇಲು- ಕೀಳು ನೋಡದೆ ನಾವು ಏರುವ ಎತ್ತರಕ್ಕೆ ಏಣಿಯಾಗಿ ನಿಂತು ಅರಿವಿನ ಅಕ್ಷರ ಬಿತ್ತಿ ಜ್ಞಾನದ ಬೆಳಕು ನೀಡಿ ಶುಭ ಹಾರೈಸುವ ಗುರುವು ನಮ್ಮ ಬಾಳಿಗೆ ಬೆಳಕು ನೀಡುವ ಕಾರ್ಯ ಮಾಡಿದ್ದಾರೆ ಎಂದರು.ಈ ವೇಳೆ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್. ಹರ್ಲಾಪೂರ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂ.ಡಿ. ಸೋಮನಕಟ್ಟಿ ಮಾತನಾಡಿದರು. ಸಮಾರಂಭದಲ್ಲಿ ಗುರುರಾಜ ಹವಳದ, ಚಂದ್ರು ನೇಕಾರ, ಎಂ.ಡಿ. ವಾರದ, ಅಶೋಕ ಸೊರಟೂರ ಹಾಗೂ ಶಿಕ್ಷಕ ಎಸ್.ಜಿ. ಶೇಳಕೆ, ಡಾ. ಆರ್.ಜಿ. ಚಿಕ್ಕಮಠ, ಎಂ.ಎಚ್. ಸಾಳೇರ, ಎಂ.ಡಿ. ತಳ್ಳಳ್ಳಿ, ಎ.ಸಿ. ಮಣಿ, ಎಸ್.ಎಂ. ಕೊರಡೂರ, ಎಸ್.ಎಫ್. ಪೂಜಾರ, ಎಸ್.ಎಂ. ಕಡೇಮನಿ ಹಾಗೂ ನಿವೃತ್ತ ಸೈನಿಕ ರಮೇಶ ಹುಲಸೋಗಿ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಗುರು ಗಂಧರ್ವ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿದರು. ಶಿಕ್ಷಕ ಪರಶುರಾಮ ಕೊರವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಿ.ಪಿ. ನಾವಿ ಕಾರ್ಯಕ್ರಮ ನಿರ್ವಹಿಸಿದರು.