ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಚಾಮರಾಜನಗರ: ಕರ್ನಾಟಕ ಏಕೀಕರಣಕ್ಕೆ ಹೋರಾಟ ನಡೆಸಿದವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 22ನೇ ದಿನದ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ಮಹೋತ್ಸವದ ಬಗ್ಗೆ ಮಾತನಾಡಿದರು
ಕರ್ನಾಟಕ ಏಕೀಕರಣದ ಹೋರಾಟಕ್ಕೆ ತನ್ನದೇ ಆದ ಇತಿಹಾಸವಿದೆ. ಸಾವಿರಾರು ಕನ್ನಡಾಭಿಮಾನಿಗಳು, ಸಾಹಿತಿಗಳು, ಕಲಾವಿದರು ಸೇರಿ ಹೋರಾಟ ಮಾಡುವ ಮೂಲಕ ಕರುನಾಡನ್ನು ಕಟ್ಟಲು ನೆರವಾಗಿದ್ದಾರೆ ಎಂದು ಹೇಳಿದರು.ಕನ್ನಡಪರ ಸಂಘಟನೆಗಳ ಹೋರಾಟದ ಫಲದಿಂದಾಗಿ ಕನ್ನಡ ಗಟ್ಟಿಯಾಗಿ ಉಳಿದಿದೆ. ಕನ್ನಡ ಭಾಷೆ ಒಂದು ವಿಶಿಷ್ಟ ಭಾಷೆಯಾಗಿ ಮಾತನಾಡಲು ಬೇರೆ ಭಾಷೆ ರೀತಿ ತ್ರಾಸವಾಗಲ್ಲ. ಕನ್ನಡ ಭಾಷೆ ಸುಲಿದ ಬಾಳೆಹಣ್ಣಿನಂತೆ. ಕನ್ನಡ ಭಾಷೆಯೂ ನನಗೊಂದು ಹೆಮ್ಮೆಯ ಜೀವನ ತಂದುಕೊಟ್ಟಿದೆ. ಕನ್ನಡ ಭಾಷೆಗೆ ಎಂದೆಂದಿಗೂ ಚಿರಋಣಿಯಾಗಿರತ್ತೇನೆ ಎಂದರು.
ಸನ್ಮಾನ:ಕೆ ಆರ್‌ಐಡಿಎಲ್ ಕಾರ್ಯಪಾಲಕ ಅಭಿಯಂತರಾದ ಚಿಕ್ಕಲಿಂಗಯ್ಯ, ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಜಂಟಿಕೃಷಿ ನಿರ್ದೇಶಕ ಎಸ್.ಎಸ್. ಆಬಿದ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಮುನಿರಾಜು ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಮಹಾಸಭಾದ ಶ್ರೀನಿವಾಸಗೌಡ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ, ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್, ಶಾ.ಮುರಳಿ, ತಮಿಳು ಸಂಘದ ಜಗದೀಶ್, ಚಾ.ವೆಂ.ರಾಜ್ ಗೋಪಾಲ್, ನಿಜಧ್ವನಿಗೋವಿಂದರಾಜು, ಬಸವರಾಜನಾಯಕ, ರಾಚಪ್ಪ, ಮಂಜು. ಮಹೇಶ್‌ಗೌಡ, ರವಿಚಂದ್ರ ಪ್ರಸಾದ್ ಕಹಳೆ, ಶಿವಲಿಂಗಮೂರ್ತಿ, ನಂಜುಂಡಶೆಟ್ಟಿ, ವೀರಭದ್ರ, ಲಿಂಗರಾಜು, ತಾಂಡವಮೂರ್ತಿ, ಇತರರು ಹಾಜರಿದ್ದರು.