ಗಾಂಧಿನಗರದ ವಾರ್ಡ್ ನಂ.16 ರ ಊಲವಾಡಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್‌ಗಳನ್ನು ಹಾಗೂ ಚರಂಡಿಗಳ ಮೇಲೆ ನಿರ್ಮಾಣ ಮಾಡಿಕೊಂಡಿದ್ದ ಶೌಚಾಲಯ, ಮನೆಯ ಕಾಂಪೌಂಡ್‌ಗಳು, ಪೆಟ್ಟಿಗೆ ಅಂಗಡಿಗಳನ್ನು ಇತ್ಯಾದಿಗಳನ್ನು ನಿರ್ಮಾಣ ಮಾಡಿಕೊಂಡಿದ್ದರು.
ಚಿಂತಾಮಣಿ: ಗಾಂಧಿನಗರದ ವಾರ್ಡ್ ನಂ.16 ರ ಊಲವಾಡಿ ರಸ್ತೆಯ ಎರಡು ಬದಿಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ಖುದ್ದು ನಗರಸಭೆಯ ಪೌರಾಯುಕ್ತ ಜಿ.ಎನ್.ಛಲಪತಿ ನೇತೃತ್ವದಲ್ಲಿ ಜೆಸಿಬಿಗಳ ಸಹಾಯದಿಂದ ತೆರವುಗೊಳಿಸಲಾಯಿತು. ಈ ವೇಳೆ ಪೌರಾಯುಕ್ತರು ಮಾತನಾಡಿ, ಲಾಟರಿ ಮೂಲಕ ಪ್ರತಿ ವಾರಕ್ಕೆ ಒಂದು ವಾರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಹಿಂದೆ ಕನ್ನಂಪಲ್ಲಿ, ಇಂದು ಗಾಂಧಿನಗರವನ್ನು ಆಯ್ಕೆ ಮಾಡಿಕೊಂಡಿದ್ದು ಅದರಂತೆ ಲಾಟರಿ ಮೂಲಕ ಆಯ್ಕೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಅಕ್ರಮವಾಗಿ ನಿರ್ಮಾಣಗೊಂಡ ಶೆಡ್, ಕಟ್ಟಡಗಳನ್ನು ತೆರವುಗೊಳಿಸುವುದು ಹಾಗೂ ಯುಜಿಡಿ, ಕುಡಿಯುವ ನೀರಿನ ಸಮಸ್ಯೆ, ಕಂದಾಯ ಸೇರಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸವನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತಿದೆಯೆಂದರು.
ಗಾಂಧಿನಗರದ ವಾರ್ಡ್ ನಂ.16 ರ ಊಲವಾಡಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್‌ಗಳನ್ನು ಹಾಗೂ ಚರಂಡಿಗಳ ಮೇಲೆ ನಿರ್ಮಾಣ ಮಾಡಿಕೊಂಡಿದ್ದ ಶೌಚಾಲಯ, ಮನೆಯ ಕಾಂಪೌಂಡ್‌ಗಳು, ಪೆಟ್ಟಿಗೆ ಅಂಗಡಿಗಳನ್ನು ಇತ್ಯಾದಿಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಈ ಹಿಂದೆ ೩ ತಿಂಗಳ ಕಾಲಾವಕಾಶ ನೀಡಿದ್ದು, ತೆರವುಗೊಳಿಸದ ಹಿನ್ನೆಲೆ ಖುದ್ದು ನಗರಸಭೆ ಸಿಬ್ಬಂದಿಯೊಂದಿಗೆ ಬಂದು ತೆರವುಗೊಳಿಸಲಾಯಿತು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.