ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಲಾಭಾಂಶದಲ್ಲಿ ಸರ್ಕಾರಕ್ಕೆ ಡಿವಿಡೆಂಡ್ ₹77.17 ಕೋಟಿ ರು.ವನ್ನು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಅಲ್ಲದೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ₹5 ಕೋಟಿ ನೀಡಿದ್ದೇವೆ. ಕಳೆದ ವರ್ಷಕ್ಕಿಂತ ಈ ವರ್ಷ ಎರಡರಷ್ಟು ಲಾಭವಾಗಿದೆ. ನಾನು ಕೆಆರ್ ಇ ಡಿ ಎಲ್ ಅಧ್ಯಕ್ಷನಾಗಿ 2 ವರ್ಷ ಪೂರೈಸಿದ್ದು ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ. ಕಳೆದ ವರ್ಷ ಸೋಲಾರ್ ಉತ್ಪಾದನೆ ಕಾರ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆಯಲಾಗಿತ್ತು. ಈ ವರ್ಷವೂ ಸಹ ಇಂಧನ ಸಚಿವ ಜಾರ್ಜ್ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡಿದ್ದು ಉತ್ತಮ ನಿರ್ವಹಣೆಗಾಗಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪತ್ರ ಪಡೆದಿದ್ದೇವೆ ಎಂದರು.
ಕೇಂದ್ರದ ಸರ್ಕಾರದ ಶೇ.30 ರಷ್ಟು ಸಹಾಯ ಧನ, ರಾಜ್ಯ ಸರ್ಕಾರದ ಶೇ. 50 ರಷ್ಟು ಸಹಾಯ ಧನ ಸೇರಿ ಶೇ. 80 ರಷ್ಠು ಸಹಾಯಧನದೊಂದಿಗೆ 40 ಸಾವಿರ ಜನರಿಗೆ ಸೋಲಾರ್ ಪಂಪ್ ಸೆಟ್ ನೀಡುವ ಯೋಜನೆ ಪ್ರಾರಂಭವಾಗಿದೆ. ಇಂಧನ ಇಲಾಖೆಯಲ್ಲಿ ಸಚಿವ ಜಾರ್ಜ್ ಅನೇಕ ಬದಲಾವಣೆ ತರುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಪಾವಗಡ ದಲ್ಲಿ ದೊಡ್ಡ ಮಟ್ಟದ ಸೋಲಾರ್ ಪ್ಲಾಂಟ್ ಮಾಡಲಾಗಿತ್ತು. ಈ ಬಾರಿ 250 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸೋಲಾರ್ ಪ್ಲಾಂಟ್ ಪ್ರಾರಂಭಿಸಲಾಗುತ್ತಿದೆ. 11 ಸಾವಿರ ಮೆಗಾವೆಟ್ ಸಾಮಾರ್ಥ್ಯದ ವಿದ್ಯುತ್ ಶೇಖರಣ್ ಘಟಕ ಸಹ ಪ್ರಾರಂಭಿಸ ಲಾಗುತ್ತದೆ ಎಂದರು.ಅಲ್ಲದೆ 2 ಸಾವಿರ ಮೆಗಾವೆಟ್ ವಿದ್ಯುತ್ ಉತ್ಪಾನೆ ಸೋಲಾರ್ ಪ್ಲಾಂಟ್ ಗೆ ಕೆ ಇ ಆರ್ ಸಿ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲಿ 27 ಸಬ್ ಸ್ಟೇಷನ್ ನಿರ್ಮಿಸಲಾಗುತ್ತದೆ. 2030ರ ಸುಮಾರಿಗೆ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕಾಗಲಿದೆ ಎಂದು ಸರ್ವೆ ಕಾರ್ಯ ಮಾಡಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತಿ ನಿತ್ಯ ರಾಜ್ಯಕ್ಕೆ 50 ಗಿಗೀ ವ್ಯಾಟ್ ವಿದ್ಯುತ್ ಬೇಕಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಬಿಳಾಲು ಮನೆ ಉಪೇಂದ್ರ, ಮನು, ಪ್ರಶಾಂತಶೆಟ್ಟಿ, ಜುಬೇದ, ಎಂ.ಆರ್.ರವಿಶಂಕರ್ ಇದ್ದರು.