ರಾಜ್ಯದ ಸಿಡಿ ಷಡ್ಯಂತ್ರಕ್ಕೆ ರೇಣುಕಾಚಾರ್ಯ ಮೊದಲ ಗುರು!

KannadaprabhaNewsNetwork |  
Published : Oct 27, 2026, 01:30 AM IST
26ಕೆಡಿವಿಜಿ6-ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ. | Kannada Prabha

ಸಾರಾಂಶ

Renukacharya is the first guru for the CD conspiracy of the state!

-ನಮ್ಮ ನಾಯಕರಿಗೆ ಸಿಡಿ ಇದೆಯೆಂದು ಬ್ಲ್ಯಾಕ್‌ಮೇಲ್ ಮಾಡಿ, ಮಂತ್ರಿ ಆದವನು । ರೇಣುಕಾಚಾರ್ಯ ವಿರುದ್ಧ ಶಾಸಕ ಹರೀಶ್ ವಾಗ್ದಾಳಿಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯದಲ್ಲಿ ಸಿಡಿ ಷಡ್ಯಂತ್ರ ಏನು ನಡೆಯುತ್ತಿದೆಯೋ ಅದರಲ್ಲಿ ಇವನು ಮೊದಲನೇ ಗುರು ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸ್ವಪಕ್ಷದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಆರೋಪಿಸುವ ಮೂಲಕ ಇಬ್ಬರ ಮಧ್ಯೆದ ವಾಕ್ಸಮರ ತಾರಕಕ್ಕೇರಿದೆ!

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಪಿ.ಹರೀಶ, ಸಿಡಿ ಷಡ್ಯಂತ್ರ ಏನು ನಡೆಯುತ್ತಿದೆಯೆಲ್ಲಾ ಅದರಲ್ಲಿ ರೇಣುಕಾಚಾರ್ಯ ಮೊದಲನೇ ಗುರು. ನಮ್ಮ ಪಕ್ಷದ ನಾಯಕರ ಸಿಡಿ ಇದೆಯೆಂದು ಬ್ಲ್ಯಾಕ್ ಮೇಲ್ ಮಾಡಿ, ಮಂತ್ರಿ ಆದವನು ಎಂದರು. 2008ರಲ್ಲಿ ಇವನನ್ನು ಮಂತ್ರಿ ಮಾಡುವಾಗ ಇದು ಕೆಟ್ಟ ಹುಳು ಅಂತಾ ಸ್ನೇಹಿತರು ಹೇಳಿದ್ದರು. ಈ ಕೆಟ್ಟ ಹುಳವನ್ನು ಮಂತ್ರಿ ಮಂಡಲದಲ್ಲಿ ಸೇರಿಸಿದ್ದೇ ನಾನು. ಬ್ಲ್ಯಾಕ್ ಮೇಲ್ ಮಾಡಿದ್ದರಿಂದಲೇ ನೀನು ಮಾಡಬಾರದನ್ನು ಮಾಡಿದರೂ ಪಕ್ಷದಲ್ಲಿ ಇನ್ನೂ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ಅವನು ಹಣ ಕೊಟ್ಟಿದ್ದಲ್ಲ. ಬೇರೆಯವರು ಕೊಡು ಅಂತಾ ಕೊಟ್ಟರೆ, ಅದನ್ನು ಕೊಡುವ ಸಂಸ್ಕೃತಿಯೂ ಇಲ್ಲ. ಅದೊಂದು ಕೆಟ್ಟ ಹುಳು ಎಂದು ಅವರು ತಿರುಗೇಟು ನೀಡಿದರು. ನಮ್ಮ ತಾಯಿಯವರದು ಶ್ರೀಮಂತರ ಕುಟುಂಬ. ನಮ್ಮ ತಾಯಿ ನಮಗೆ ಊಟ ಹಾಕಿದ್ದಾರೆ. ನಾನು ಯಾವತ್ತೂ ಲೋ ಪ್ರೊಫೈಲ್‌ನಲ್ಲೇ ಜೀವನ ಮಾಡಿದವನು. 3 ದಶಕದಿಂದಲೂ ಬೆಂಗಳೂರಿನ ಜಯನಗರದ ಸನ್ಮಾನ ಹೊಟೆಲ್‌ನಲ್ಲೇ ಇರುತ್ತಾ ಬಂದಿದ್ದೇನೆ. ನಾವು ನಾಡಗೌಡರು. ನಮ್ಮ ಅಜ್ಜ ಮೈಸೂರು ರಾಜ್ಯದ ಅಸೆಂಬ್ಲಿ ಸದಸ್ಯರಾಗಿದ್ದವರು. ಇವನಿಗೇನು ಗೊತ್ತು ಅದೆಲ್ಲಾ ಎಂದು ರೇಣುಕಾಚಾರ್ಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯದಲ್ಲಿ ನಿನ್ನ ಕೊನೆಯ ದಿನಗಳು ಶುರುವಾಗಿವೆ. ಯಡಿಯೂರಪ್ಪ ತಂದೆ ಇದ್ದಂಗೆ ಅಂತೆಲ್ಲಾ ಹೇಳಿದ್ದಾನೆ. ಈ ಹಿಂದೆ ಅಪ್ಪ, ಮಕ್ಕಳದ್ದು ಬಯಲಿಗೆ ತರುತ್ತೇನೆಂದಿದ್ದನಲ್ಲ? ನನ್ನ ಆಸ್ತಿ, ವ್ಯವಹಾರ ಎಲ್ಲವನ್ನೂ ಚೆಕ್ ಮೂಲಕವೇ ವ್ಯವಹರಿಸಿದ್ದೇನೆ. ನಾನು ಎಲ್ಲವನ್ನೂ ಚೆಕ್ ಮೂಲಕವೇ ವ್ಯವಹರಿಸುವವನು. ಆತ ಅಲ್ಲ, ಅವನ ಅಪ್ಪ ಬಂದರೂ ಯಾವುದೇ ಕಳ್ಳ ವ್ಯವಹಾರ ಸಿಗುವುದಿಲ್ಲ ಎಂದು ಅವರು ಹೇಳಿದರು.

ಬಿಜೆಪಿಯಲ್ಲಿರುವ ಕೆಟ್ಟ ಹುಳುಗಳು ಹೋಗಬೇಕು. ಇಂತಹ ದುಷ್ಟರು, ಮ್ಯಾಚ್ ಫಿಕ್ಸಿಂಗ್ ನಾಯಕರನ್ನು ತಗೊಂಡು ಏನು ಮಾಡಬೇಕು? ಕಾಂಗ್ರೆಸ್ ಇರಲಿ, ಬಿಜೆಪಿಯಾಗಿರಲಿ, ನೀಚರು ಕೊನೆಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲರಿಗೂ, ಎಲ್ಲದರ ಮಾಹಿತಿ ಇರುತ್ತದೆ. ರಾಜ್ಯ ನಾಯಕರ ಸಿಡಿ ಇಟ್ಟುಕೊಂಡು, ಈಗ ಬ್ಲ್ಯಾಕ್ ಮೇಲ್ ಮಾಡುತ್ತಾನೆ. ರಾಜ್ಯದಲ್ಲಿ ಇವತ್ತೇನು ಸಿಡಿ ಷಡ್ಯಂತ್ರವೇನು ನಡೆಯುತ್ತಿದೆಯೆಲ್ಲಾ ಅದರ ಮೊದಲನೇ ಗುರು ಈತ ಎಂದು ಅವರು ಬಿ.ಪಿ.ಹರೀಶ ಮಾಜಿ ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದರು. ........................................ಶಿವಗಂಗಾ ಪತ್ರಕ್ಕೆ ಹರೀಶ ಸಮರ್ಥನೆದಾವಣಗೆರೆ ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್ ದಂಧೆ ಜೋರಾಗಿರುವ ಬಗ್ಗೆ ಐಜಿಪಿ, ಎಸ್ಪಿ ವರ್ಗಾವಣೆಗೆ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸಮರ್ಥಿಸಿಕೊಂಡಿದ್ದಾರೆ.

ಶಾಸಕ ಬಸವರಾಜ ಶಿವಗಂಗಾ ಹೇಳಿದ್ದು ನೂರಕ್ಕೆ ನೂರು ಸತ್ಯವಿದೆ. ನಾವು ಎಷ್ಟೇ ಹೇಳಿದರೂ ಪೊಲೀಸ್ ಇಲಾಖೆ ಮೇಲಾಧಿಕಾರಿಗಳು ಗಮನವನ್ನೇ ಹರಿಸುತ್ತಿಲ್ಲ. ಪೊಲೀಸರು, ನೀವು ಕೂಡಿಕೊಂಡೇ ಮಾಡುತ್ತಿದ್ದೀರಲ್ಲಾ ಅಂತಾ ಎಷ್ಟೋ ಜನ ನಮಗೆ ಕರೆ ಮಾಡುತ್ತಿದ್ದಾರೆ ಎಂದು ಅವರು ದೂರಿದರು. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಬಸವರಾಜ ಶಿವಗಂಗಾ ಹೇಳಿಕೆಯನ್ನು ನೂರಕ್ಕೆ ನೂರರಷ್ಟು ಸಮರ್ಥಿಸಿಕೊಳ್ಳುತ್ತೇನೆ. ಇಂತಹ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಿತ್ತು. ಜಿಲ್ಲಾ ಸಚಿವರು ಮಾಡಬೇಕಾದ ಕೆಲಸವನ್ನು ಶಾಸಕ ಬಸವರಾಜ ಶಿವಗಂಗಾ ಮಾಡುತ್ತಿದ್ದಾರೆ ಎಂದು ಬಿ.ಪಿ.ಹರೀಶ ಪ್ರತಿಕ್ರಿಯಿಸಿದರು. ....................ಕ್ಯಾಪ್ಷನ್26ಕೆಡಿವಿಜಿ6-ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು-ನಾಳೆ ಸಿಜಿಕೆ ರಂಗನಮನ ಕಾರ್ಯಕ್ರಮ
ಮತ್ತೆ ಬೆಳ್ಳೂರು ಶಿವರಾಂ ಬಣಕ್ಕೆ ಬ್ರಾಹ್ಮಣಸಭಾ ಅಧಿಕಾರ