ಜಗತ್ತಿಗೆ ವಿಶ್ವ ಬಂಧುತ್ವ ಸಾರಿದ ರೇಣುಕಾಚಾರ್ಯರು

KannadaprabhaNewsNetwork | Published : Mar 13, 2025 12:48 AM

ಸಾರಾಂಶ

ಮಾನವ ಗುಣಗಳನ್ನು ದಹಿಸಿ ಆತನನನ್ನು ಮಹಾದೇವನನ್ನಾಗಿಸುವ, ಜೀವಿ ಶಿವನಾಗುವ, ಮಾನವ ಮಹಾದೇವನಾಗುವ, ಅಂಗ ಲಿಂಗವಾಗುವ ಅದ್ಭುತ ಸಿದ್ಧಾಂತ ಜಗತ್ತಿಗೆ ಭೋಧಿಸಿದವರು ರೇಣುಕಾಚಾರ್ಯರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎಲ್ಲರಲ್ಲಿಯೂ ಸಮಾನತೆಯಿಂದ ಕಾಣುವ ಸಮನ್ವಯ ತತ್ವದ ಮೂಲಕ ಜಗತ್ತಿಗೆ ವಿಶ್ವ ಬಂಧುತ್ವ ಸಾರಿದವರು ಆದಿ ರೇಣುಕಾಚಾರ್ಯರು ಎಂದು ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾದ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಬೀಳೂರು ಅಜ್ಜನ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ತಾಲೂಕು ಜಂಗಮರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಕ್ಕನ ಬಳಗದ ಸಹಯೋಗದಲ್ಲಿ ಬುಧವಾರ ನಡೆದ ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ನಿಮಿತ್ತ ಭಾವಚಿತ್ರದ ಮೆರವಣಿಗೆಯಲ್ಲಿ ಭಾಗವಹಿಸಿ ಮತನಾಡಿದರು.

ಮಾನವ ಗುಣಗಳನ್ನು ದಹಿಸಿ ಆತನನನ್ನು ಮಹಾದೇವನನ್ನಾಗಿಸುವ, ಜೀವಿ ಶಿವನಾಗುವ, ಮಾನವ ಮಹಾದೇವನಾಗುವ, ಅಂಗ ಲಿಂಗವಾಗುವ ಅದ್ಭುತ ಸಿದ್ಧಾಂತ ಜಗತ್ತಿಗೆ ಭೋಧಿಸಿದವರು ರೇಣುಕಾಚಾರ್ಯರು. ಅವರು ಸಮಾನತೆಯ ಸಮನ್ವಯ ತತ್ವದ ಮೂಲಕ ಮಾನವ ಕಲ್ಯಾಣಕ್ಕಾಗಿ ವೀರಶೈವ ಧರ್ಮ ನೆಲೆಗೊಳಿಸಿದರು. ವಿಶ್ವ ಬಂಧುತ್ವ ಮಾನವಿಯ ಮೌಲ್ಯಗಳು, ಜೀವನ ಸಿದ್ಧಾಂತಗಳು, ಸುಖ-ಶಾಂತಿ ಬದುಕಿಗೆ ಮೂಲ ಸೆಲೆಯಾಗಿವೆ ಎಂದರು.

ಬಿಲ್ಕೆರೂರಿನ ಬಿಲ್ವಾಶ್ರಮದ ಸಿದ್ದಲಿಂಗಶಿವಾಚಾರ್ಯರು ಮೆರವಣಿಗೆಗೆ ಚಲಾನೆ ನೀಡಿ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನು ಸಮನಾಗಿ ಕಾಣುವ ಈ ವೀರಶೈವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಜನರ ಶಾಂತ ಬದುಕಿಗೆ ರೇಣುಕಾಚಾರ್ಯರ ಚಿಂತನೆಗಳೆ ದಾರಿದೀಪಗಳಾಗಿವೆ ಎಂದರು.

ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಜಿ.ಎನ್.ಪಾಟೀಲ, ತಾಲೂಕು ಜಂಗಮರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿರೇಶ ಚೌಕಿಮಠ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೇನ್ನವರ, ರಾಜು ಕೆಂಗಾಪುರ, ಬಾಬಿ ನಿಡಗುಂದಿ, ರಾಮಣ್ಣ ಜುಮನಾಳ, ಚಂದ್ರಶೇಖರ ಶೆಟ್ಟರ, ಬಸವರಾಜ ಹಿರೇಗೌಡರ, ಪ್ರಕಾಶ ರೇವಡಿಗಾರ, ಶರಣಪ್ಪ ಗುಳೆದ, ಸಂಗಣ್ಣ ಕಲಾದಗಿ, ಬಸವರಾಜ ಹಿರೇಮಠ, ಎಂ.ಎನ್.ಪುರಾಣಿಕಮಠ, ಮುರಗಯ್ಯ ನಿಂಬಲಗುಂದಿ, ಫ್ರಭಯ್ಯ ಸರಗಣಾಚಾರಿ, ಕುಮಾರ ಹಿರೇಮಠ, ಎಸ್.ಎನ್.ಬೂಸನೂರಮಠ, ಸಂಗಯ್ಯ ಸರಗಣಾಚಾರಿ, ವಿ.ಆರ್.ಹಿರೇಮಠ, ಬಸವರಾಜ ಪರ್ವತಿಮಠ, ಮುತ್ತಣ್ಣ ಬೇಣ್ಣೂರ, ಯಲ್ಲಪ್ಪ ಬೆಂಡಿಗೇರಿ, ಯಲ್ಲಪ್ಪ ನಾರಾಯಣಿ, ಬಸವರಾಜ ಮುಕುಪಿ ಸೇರಿದಂತೆ ಅನೇಕರ ಭಾಗವಹಿಸಿದ್ದರು.

ಅದ್ಧೂರಿ ಮೆರವಣಿಗೆ:

ಸಕಲ ವಾಧ್ಯ ವೈಭವದೊಂದಿಗೆ ಬೀಳೂರು ಅಜ್ಜನ ಗುಡಿಯಿಂದ ಪ್ರಾರಂಭವಾದ ರೇಣುಕಾಚಾರ್ಯರ ಭಾವಚಿತ್ರದ ಮರವಣಿಗೆ ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ರಸ್ತೆ, ವಲ್ಲಬಾಯಿ ಚೌಕ, ಅಡತ ಬಜಾರದಿಂದ ಟೀಕಿನಮಠ ಮುಖಾಂತರ ಮರಳಿ ಬೀಳೂರ ಅಜ್ಜನ ಗುಡಿ ಸಮಾರೊಪಗೊಂಡಿತು.

Share this article