ಮಾನವ ಧರ್ಮದ ಹಿರಿಮೆ ಸಾರಿದ ರೇಣುಕಾಚಾರ್ಯರು

KannadaprabhaNewsNetwork |  
Published : Mar 13, 2025, 12:47 AM IST
12ಕೆಪಿಎಲ್2:ಕೊಪ್ಪಳದಶ್ರೀ ರೇಣುಕಾಚಾರ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು.  | Kannada Prabha

ಸಾರಾಂಶ

ಜಗತ್ತಿಗೆ ಮಾನವಿತೆಯ ಮಾರ್ಗದಲ್ಲಿ ನಡೆಯಲು ಹೇಳಿದ ವೀರಶೈವ ಧರ್ಮದ ಮಹಾನ್ ಶರಣ ಜಗದ್ಗುರು ರೇಣುಕಾಚಾರ್ಯರು. ಜಾತಿ-ಭೇದವಿಲ್ಲದೇ ಎಲ್ಲರನ್ನು ಪ್ರೀತಿಸಿ, ಅವರಿಗೆ ಮಹನಿಯರ ತತ್ವಾದರ್ಶ ಮತ್ತು ಧಾರ್ಮಿಕ ಶಿಕ್ಷಣ ನೀಡಬೇಕು.

ಕೊಪ್ಪಳ:

ರೇಣುಕಾಚಾರ್ಯರು ಮಾನವ ಧರ್ಮದ ಹಿರಿಮೆ ಸಾರಿದವರು. ಮಾನವ ಕುಲಕ್ಕೆ ಮಾನವಿತೆಯ ಸಂದೇಶ ನೀಡಿದ ಮೊದಲಿಗರು ಎಂದು ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್ ಹೇಳಿದರು.

ನಗರದ ಶ್ರೀರೇಣುಕಾಚಾರ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಗತ್ತಿಗೆ ಮಾನವಿತೆಯ ಮಾರ್ಗದಲ್ಲಿ ನಡೆಯಲು ಹೇಳಿದ ವೀರಶೈವ ಧರ್ಮದ ಮಹಾನ್ ಶರಣ ಜಗದ್ಗುರು ರೇಣುಕಾಚಾರ್ಯರು. ಜಾತಿ-ಭೇದವಿಲ್ಲದೇ ಎಲ್ಲರನ್ನು ಪ್ರೀತಿಸಿ, ಅವರಿಗೆ ಮಹನಿಯರ ತತ್ವಾದರ್ಶ ಮತ್ತು ಧಾರ್ಮಿಕ ಶಿಕ್ಷಣ ನೀಡಬೇಕು ಎಂದರು.

ಉಪನ್ಯಾಸ ನೀಡಿದ ಶಿಕ್ಷಕ ಶರಣಯ್ಯ ಅಬ್ಬಿಗೇರಿಮಠ, ರೇಣುಕಾಚಾರ್ಯರು ಭೂಲೋಕದಲ್ಲಿ ಅಧರ್ಮ, ಅಶಾಂತಿ ಸ್ಥಾಪನೆಯಾದಾಗ ಹೋಗಲಾಡಿಸಿ ಸದ್ಧರ್ಮವನ್ನು ಹುಟ್ಟುಹಾಕಲು ಜನಿಸಿದ ಮಹಾನ್ ಶರಣರು. ಶೈವ ಸಮುದಾಯವನ್ನು ಶ್ರೇಷ್ಠತೆಯ ಮೇಲ್ಮಟ್ಟಕ್ಕೆ ತರಲು ಶ್ರಮಿಸಿದರು ಎಂದು ಹೇಳಿದರು.

ರೇಣುಕಾಚಾರ್ಯರ ತತ್ವಗಳು ಸಮಾನತೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ದಾರಿದೀಪದಂತಿವೆ ಎಂದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಜಯಂತಿಯನ್ನು ಅರ್ಥಪೂರ್ಣ ಮಾಡಬೇಕು ಎಂದರು.ಹೆಬ್ಬಾಳದ ಶ್ರೀನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮೈನಳ್ಳಿ-ಬಿಕನಳ್ಳಿಯ ಶ್ರೀಸಿದ್ದೇಶ್ವರ ಶಿವಾಚಾರ್ಯರು, ಕಂಪಸಾಗರದ ನಾಗಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಹಂಪಯ್ಯ ಬನ್ನಿಮಠ, ಅಳವಂಡಿಯ ಗುರುಮೂರ್ತಿಸ್ವಾಮಿ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಕೋಟ್ರಬಸಯ್ಯ, ಕಲ್ಲಯ್ಯಜ್ಜ ಕಲ್ಯಾಣಗೌಡ್ರು, ಶಿವಕುಮಾರ ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠ, ದಯಾನಂದ ಸಿ.ಎಸ್., ಬಾಲಚಂದ್ರಯ್ಯ ಬಿ.ಎಂ., ವೀರೇಶ ಮಹಾಂತಯ್ಯನಮಠ, ನಾಗಭೂಷಣ ಸಾಲಿಮಠ, ವೆಂಕಯ್ಯ ಹಿರೇಮಠ, ಮಂಜುನಾಥ ಕೆದ್ರಳ್ಳಿಮಠ, ಪಂಪಯ್ಯ ಹಿರೇಮಠ, ವಕೀಲ ವಿ.ಎಂ. ಭೂಸನೂರಮಠ, ಬಸಯ್ಯ ಹಿರೇಮಠ, ಪಾರ್ವತಿ ಹಿರೇಮಠ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.ಅದ್ಧೂರಿ ಮೆರವಣಿಗೆ

ರೇಣುಕಾಚಾರ್ಯರ ಜಯಂತಿ ಹಿನ್ನೆಲೆಯಲ್ಲಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಗವಿಮಠದಿಂದ ಆರಂಭವಾದ ಮೆರವಣಿಗೆ ರೇಣುಕಾಚಾರ್ಯ ಭವನದ ವರೆಗೆ ಸಾಗಿತು. ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದಗಿನಮಠ, ಮೈನಳ್ಳಿ-ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ತಹಸೀಲ್ದಾರ್‌ ವಿಠ್ಠಲ್ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌