ಹರಿಹರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಚಿತ್ರನಟ ದರ್ಶನ್ ಸೇರಿದಂತೆ ಇತರರನ್ನು ಶೀಘ್ರವಾಗಿ ಗಲ್ಲಿಗೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ವತಿಯಿಂದ ಶುಕ್ರವಾರ ಗ್ರೇಡ್-೨ ತಹಸೀಲ್ದಾರ್ ಶಶಿಧರಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಪದಾಧಿಕಾರಿಗಳು ಮಾತನಾಡಿ, ಕನ್ನಡ ಚಿತ್ರರಂಗದ ಹೆಸರಾಂತ ನಾಯಕ ನಟ ದರ್ಶನ್ ಹಾಗೂ ಅವರ ಸಹಚರರು ಅಮಾಯಕ ರೇಣುಕಾಸ್ವಾಮಿ ಅವರಿಗೆ ಚಿತ್ರಹಿಂಸೆ ಕೊಟ್ಟು ಅಮಾನುಶವಾಗಿ ಹತ್ಯೆ ಮಾಡಿದ್ದಾರೆ. ಈ ಕೃತ್ಯವನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪೊಲೀಸ್ ಇಲಾಖೆಯ ಮೇಲೆ ಎಷ್ಟೇ ಒತ್ತಡ ಬಂದರೂ ಗಣನೆಗೆ ತೆಗೆದುಕೊಳ್ಳದೇ, ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಬೇಕು. ಅರ್ಹ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬೇಕು. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ₹೧ ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ವೈ.ರಮೇಶ್ ಮಾನೆ, ನಗರಾಧ್ಯಕ್ಷ ಪ್ರೀತಮ್ ಬಾಬು, ಕಾರ್ಯದರ್ಶಿ ವಿನಾಯಕ, ಉಳ್ಳಾಗಡ್ಡಿ ಚನ್ನಬಸಪ್ಪ, ಚಂದ್ರಶೇಖರಪ್ಪ, ಎ.ಇ. ಸುರೇಶ್ ಸ್ವಾಮಿ, ಆಲಿ ಆಕ್ಬರ್, ಸಿದ್ದಣ್ಣ, ಶಂಕರ್, ಗಣೆಶ್ ಮಾನೆ, ವೀರಭದ್ರಯ್ಯ, ರಮೇಶ್, ಸುರೇಶ್ ಹಾಗೂ ಇತರರಿದ್ದರು.
- - --೧೪ಎಚ್‌ಆರ್‌ಆರ್೨: