ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಕಾಮಗಾರಿ ಪೂರ್ಣ: ಶಾಸಕ ಟಿ.ಡಿ.ರಾಜೇಗೌಡ

KannadaprabhaNewsNetwork |  
Published : Jan 20, 2026, 01:30 AM IST
೧೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಮಲೆಯಾಳಿ ಕಾಲೋನಿಯಲ್ಲಿ ನಿರ್ಮಿಸಿರುವ ಬಾಲಸ್ನೇಹಿ ಅಂಗನವಾಡಿ ಕಟ್ಟಡವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ರವಿಚಂದ್ರ, ಪ್ರಭಾಕರ್, ಶಶಿಕಲಾ, ಹೇಮಲತಾ, ಅರುಣೇಶ್, ಚಂದ್ರಮ್ಮ, ನಟರಾಜ್ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರುಶೃಂಗೇರಿ ಕ್ಷೇತ್ರಾದ್ಯಂತ ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಿಸಿದ ರಸ್ತೆಗಳು ಹಾಳಾಗಿರುವಲ್ಲಿ ಗುಂಡಿ ಮುಚ್ಚುವ ಕಾರ್ಯ ಸಂಪೂರ್ಣಗೊಂಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಬಿ.ಕಣಬೂರು ಮಲೆಯಾಳಿ ಕಾಲೋನಿಯಲ್ಲಿ ನೂತನ ಬಾಲಸ್ನೇಹಿ ಅಂಗನ ವಾಡಿ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶೃಂಗೇರಿ ಕ್ಷೇತ್ರಾದ್ಯಂತ ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಿಸಿದ ರಸ್ತೆಗಳು ಹಾಳಾಗಿರುವಲ್ಲಿ ಗುಂಡಿ ಮುಚ್ಚುವ ಕಾರ್ಯ ಸಂಪೂರ್ಣಗೊಂಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಮಲೆಯಾಳಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಾಲಸ್ನೇಹಿ ಅಂಗನ ವಾಡಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ನಾವು ಭರವಸೆ ನೀಡಿದಂತೆ ಜನವರಿ ಅಂತ್ಯ ದೊಳಗೆ ಗುಂಡಿ ಮುಚ್ಚುವ ಕಾಮಗಾರಿ ನಡೆಸಲಾಗಿದೆ. ತುಂಬಾ ಹಾಳಾಗಿರುವ ರಸ್ತೆಗೆ ತಾತ್ಕಾಲಿಕ ಡಾಂಬರೀ ಕರಣ ಮಾಡಿದ್ದು, ಶೀಘ್ರ ಮರು ಡಾಂಬರೀಕರಣ ಕೆಲವೆಡೆ ಕಾಮಗಾರಿ ಆರಂಭಗೊಂಡಿದೆ ಎಂದರು.

ಸುಮಾರು ₹85 ಕೋಟಿ ಅನುದಾನ ವಸ್ತಾರೆ-ಶೃಂಗೇರಿ ರಸ್ತೆಗೆ, ₹10 ಕೋಟಿ ಜಯಪುರ-ಕೊಪ್ಪ ರಸ್ತೆಗೆ, ₹19 ಕೋಟಿ ಕೊರಲಕೊಪ್ಪ-ಕೊಪ್ಪ ರಸ್ತೆಗೆ, ₹7 ಕೋಟಿ ಬೇಗಾರು-ಕೊಪ್ಪ ರಸ್ತೆಗೆ, ಮಾಗುಂಡಿ-ಬಾಳೆಹೊನ್ನೂರು ರಸ್ತೆಗೆ ₹10 ಕೋಟಿ ಮೀಸಲಿಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.ಕ್ಷೇತ್ರದ ಮಾಗುಂಡಿ, ಜಯಪುರ, ಹರಿಹರಪುರ, ಎನ್.ಆರ್.ಪುರ ಈ 4 ಊರುಗಳಲ್ಲಿ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಹಣ ಮೀಸಲಿಟ್ಟಿದ್ದು, ಕೆಲವು ಕಡೆಗಳಲ್ಲಿ ಕಾಮಗಾರಿ ಆರಂಭಗೊಂಡಿದೆ. ಉಳಿದೆಡೆ ಶೀಘ್ರ ಆರಂಭವಾಗಲಿದೆ ಎಂದರು. ಮಲೆಯಾಳಿ ಕಾಲೋನಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಅಲ್ಪ ಸಂಖ್ಯಾತ ನಿಗಮದಿಂದ ₹90 ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ನಿರ್ಮಾಣ, ಗ್ರಾಪಂ ನಿಂದ ₹3.5 ಲಕ್ಷ ಶಾಸಕರ ಅನುದಾನದಿಂದ ₹10 ಲಕ್ಷ ಹಣ ವಿನಿಯೋಗಿಸಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ.ಕಾಂಕ್ರೀಟ್ ರಸ್ತೆಗಳು ಒಂದು ಬಾರಿ ಮಾಡಿದಾಗ ಅದು ಹಾಳಾದಲ್ಲಿ ಅದನ್ನು ಪುನಃ ದುರಸ್ತಿ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆ ಯಲ್ಲಿ ಎಲ್ಲ ಕಡೆಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು. ಕನಿಷ್ಠ 20 ದಿನ ಯಾವುದೇ ವಾಹನಗಳು ಓಡಾಡದೆ, ಕ್ಯೂರಿಂಗ್ ಮಾಡಿದಲ್ಲಿ ಆ ರಸ್ತೆ 50- 60 ವರ್ಷ ಬಾಳಿಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಕಾಂಕ್ರಿಟ್ ರಸ್ತೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು. ಟೀಕೆ ಮಾಡಲೆಂದೆ ಬಿಜೆಪಿಯವರಿದ್ದಾರೆ. ಅವರು ಟೀಕೆ ಮಾಡುತ್ತಿರಲಿ ನಾವು ಅಭಿವೃದ್ಧಿ ಮಾಡುತ್ತಲೇ ಇರುತ್ತೇವೆ. ಕ್ಷೇತ್ರದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಹಲವರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಇದಕ್ಕೆ ಕರಾಳ ಕಾಯ್ದೆಗಳು ಕಾರಣ. ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು ಎಂಬ ಜನವಿರೋಧಿ ಕಾಯ್ದೆ ತಂದಿದ್ದು ಇದರಿಂದ ಸಮಸ್ಯೆ ಯಾಗಿದೆ ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ₹25 ಕೋಟಿಗೂ ಹೆಚ್ಚು ವಿವಿಧ ಕಾಮಗಾರಿ ನಿರ್ವಹಿಸಿ ಅಭಿವೃದ್ಧಿ ಮಾಡಲಾಗಿದೆ. ಮಾದರಿ ಬಾಳೆಹೊನ್ನೂರು ಹಾಲಿ ರೂಪು ಗೊಂಡಿದೆ. ಪಾರ್ಕಿಂಗ್, ಹೈಮಾಸ್ಟ್ ದೀಪಗಳು, ರಸ್ತೆ, ಕುಡಿಯುವ ನೀರು, ಕ್ರೀಡಾಂಗಣ ಮುಂತಾದವು ಮಾದರಿ ಕಾರ್ಯ ಗಳಾಗಿವೆ. ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ವಿವಿಧ ಗ್ರಾಪಂಗಳ ಆಡಳಿತ ಮಂಡಳಿಯವರು ಭೇಟಿ ನೀಡುತ್ತಿದ್ದಾರೆ. ಈ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿದೆ ಎಂದರು.

ಬಿ.ಕಣಬೂರು ಗ್ರಾಪಂ ಸದಸ್ಯರಾದ ಪ್ರಭಾಕರ್ ಪ್ರಣಸ್ವಿ, ಶಶಿಕಲಾ ಉಮೇಶ್, ಎಂ.ಎಸ್.ಅರುಣೇಶ್, ಮಹಮ್ಮದ್ ಜುಹೇಬ್, ಬಿ.ಸಿ.ಸಂತೋಷ್‌ಕುಮಾರ್, ಬಿ.ಕೆ.ಮಧುಸೂದನ್, ಅಂಬುಜಾ, ಜಾನಕಿ, ಫಿಲೋಮಿನಾ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಬಗರ್‌ಹುಕುಂ ಸಮಿತಿ ಸದಸ್ಯೆ ಹೇಮಲತಾ ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎಂ.ನಟರಾಜ್, ಸಿಡಿಪಿಓ ವೀರಭದ್ರಯ್ಯ, ಪಿಡಿಓ ಕಾಶಪ್ಪ, ಅಂಗನವಾಡಿ ಮೇಲ್ವಿಚಾರಕಿ ನಳಿನಾಕ್ಷಿ, ಗುತ್ತಿಗೆದಾರ ಪ್ರಭಾಕರ್ ಶೆಟ್ಟಿ ಮತ್ತಿತರರು ಹಾಜರಿದ್ದರು.೧೯ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಮಲೆಯಾಳಿ ಕಾಲೋನಿಯಲ್ಲಿ ನಿರ್ಮಿಸಿರುವ ಬಾಲಸ್ನೇಹಿ ಅಂಗನವಾಡಿ ಕಟ್ಟಡವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ರವಿಚಂದ್ರ, ಪ್ರಭಾಕರ್, ಶಶಿಕಲಾ, ಹೇಮಲತಾ, ಅರುಣೇಶ್, ಚಂದ್ರಮ್ಮ, ನಟರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕಾಮ’ಚಂದ್ರರಾವ್‌ ಐಪಿಎಸ್‌ - ಪೊಲೀಸ್‌ ಸಮವಸ್ತ್ರದಲ್ಲೇ ಕಚೇರಿಯಲ್ಲಿ ಮಹಿಳೆಯರ ಜತೆ ಸರಸ
ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ