ಕನ್ನಡಪ್ರಭ ವಾರ್ತೆ ಚಳ್ಳಕೆರೆ:
ಕಾಶ್ಮೀರದ ಪೆಹಲ್ಗಾಂನಲ್ಲಿ ಕಳೆದ ಏ.22 ರಂದು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು 26 ಪ್ರವಾಸಿಗರನ್ನು ಗುಡ್ಡಿಕ್ಕಿ ಕೊಂದಿದ್ದಲ್ಲದೆ, ಹಿಂದೂ ಎಂದವರ ಎದೆಯನ್ನು ಬಂದೂಕಿನಿಂದ ಸೀಳಿದ ಕುಕೃತ್ಯಕ್ಕೆ ಭಾರತೀಯ ಸೇನೆ ಆಪರೇಷನ್ ಸಿಂದೂರ ಮೂಲಕ ಉತ್ತರ ನೀಡಿದೆ ಎಂದು ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ ತಿಳಿಸಿದರು.ಮಂಗಳವಾರ ನೆಹರೂ ವೃತ್ತದಲ್ಲಿ ಆಪರೇಷನ್ ಸಿಂದೂರ ದಿಗ್ವಿಜವನ್ನು ಸಾರುವ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತೀಯರನ್ನು ಕೆಣಕುವ ಧೈರ್ಯ ಯಾರೂ ಮಾಡಬಾರದು ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿದ ಕೀರ್ತಿ ನಮ್ಮ ವೀರಸೈನಿಕರದ್ದು.ನಮ್ಮ ಸೈನಿಕರು ನಮ್ಮ ಹೆಮ್ಮೆ ನಮ್ಮ ದೇಶ, ಪ್ರಾಣವನ್ನು ರಕ್ಷಿಸುವುದಲ್ಲದೆ, ಶತ್ರುಗಳ ರಾಷ್ಟ್ರಕ್ಕೆ ಮಿಂಚಿನ ದಾಳಿಯಿಂದ ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂದೂರದ ಕೀರ್ತಿ ದೇಶದ ಪ್ರಧಾನಿ ಮತ್ತು ಅವರ ಮಂತ್ರಿಮಂಡಲಕ್ಕೆ ಸೇರುತ್ತದೆ ಎಂದು ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ ತಿಳಿಸಿದರು.
ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ದೇಶದ ಸೈನಿಕರ ಬಗ್ಗೆ ನಾಡಿನ ಜನಕ್ಕೆ ಅಪಾರವಾದ ಹೆಮ್ಮೆ ಗೌರವವಿದೆ. ಆದರೆ, ಕೆಲವು ಶಕ್ತಿಗಳು ಮಾತ್ರ ಸೈನಿಕರ ವಿರುದ್ಧ ಮಾತನಾಡುವ ಕೆಟ್ಟಚಾಳಿ ಬೆಳೆಸಿಕೊಂಡಿದ್ದಾರೆ. ಇದು ತರವಲ್ಲ, ನಮ್ಮ ಸೈನಿಕರ ಆತ್ಮವಿಶ್ವಾಸವನ್ನು ಇಡೀ ದೇಶವೇ ಕೊಂಡಾಡುವ ಸಂದರ್ಭದಲ್ಲಿ ಅವರ ವಿರುದ್ಧ ಮಾತನಾಡುವವರನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.ರಾಷ್ಟ್ರ ಸೇವಿಕ ಸಮಿತಿ ಜಿಲ್ಲಾ ಕಾರ್ಯವಾಹ ಕುಸುಮದೇಸಾಯಿ ಮಾತನಾಡಿ, ಆಪರೇಷನ್ ಸಿಂದೂರ ಹೆಸರು ಇಂದು ವಿಶ್ವಮನ್ನಣೆ ಗಳಿಸಿದೆ. ಕಾರಣ, ನಿರ್ಧಯವಾಗಿ ಹೆಣ್ಣು ಮಕ್ಕಳ ಮುಂದೆಯೇ ಅವರ ಗಂಡರನ್ನು ಹೆಣವಾಗಿಸಿದ ಉಗ್ರಗಾಮಿಗಳ ಹೀನ ಕೃತ್ಯಕ್ಕೆ ಉತ್ತರ ನೀಡಲು ಆಪರೇಷನ್ ಸಿಂದೂರ ಕಾರ್ಯಚರಣೆ ಮಾಡಲಾಗಿದೆ. ಹೆಣ್ಣು ಮಕ್ಕಳ ಮಾಂಗಲ್ಯದ ಗೌರವ ಅರಿಯದ ಉಗ್ರಗಾಮಿಗಳು ಇಂತಹ ಹೀನಕೃತ್ಯಕ್ಕೆ ಕೈಹಾಕಿದ್ದಾರೆ. ಆದರೆ, ನಮ್ಮ ಸೈನಿಕರು ನೂರಾರು ಉಗ್ರರನ್ನು ಹುಡುಕಿ, ಹುಡುಕಿ ಕೊಂದಿದ್ದಾರೆ. ಸಿಂದೂರ ಪ್ರತಿಯೊಬ್ಬ ಹಿಂದೂ ಮಹಿಳೆಯ ಸೌಭಾಗ್ಯದ ಸಂಕೇತವಾಗಿದೆ. ಇಂತಹ ಸಂಕೇತವನ್ನು ಅವಮಾನಿಸುವ ಕೃತ್ಯವನ್ನು ಯಾರೂ ಮಾಡಬಾರದು ಎಂದರು.
ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಬೌದ್ದಿಕ್ ಪ್ರಮುಖ್ ಅಭಿಲಾಷ್ ಪಂಡ್ರಹಳ್ಳಿ ಮಾತನಾಡಿ, ಇಂದು ಇಲ್ಲಿ ನಡೆಯುತ್ತಿರುವ ತಿರಂಗಯಾತ್ರೆಗೆ ಸ್ವಯಂ ಪ್ರೇರಣೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ದೇಶದ ಅಭಿಮಾನಿಗಳು ರಸ್ತೆಗಿಳಿದು ಭಾರತೀಯ ಸೈನಿಕರಿಗೆ ನಮನಗಳನ್ನು ಸಲ್ಲಿಸುವುದಲ್ಲದೆ, ಅವರಿಗೆ ಕೃತಜ್ಞತೆಗಳನ್ನು ಈ ಮೂಲಕ ತಿಳಿಸಿದ್ಧಾರೆ. ಈ ದೇಶದ ಜನ ಎಂದಿಗೂ ಸೈನಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುವುದನ್ನು ಜನ ತೋರಿಸಿಕೊಟ್ಟಿದ್ಧಾರೆ. ಕೇವಲ ಭಾರತವಷ್ಟೇಯಲ್ಲ, ವಿದೇಶಗಳೂ ಸಹ ನಮ್ಮ ಸೈನಿಕರ ಹೋರಾಟವನ್ನು ಪ್ರಶಂಸಿಸಿದ್ಧಾರೆ. ಪಾಕಿಸ್ತಾನದ ಉಗ್ರಗಾಮಿಗಳ ನೆಲೆಗಳನ್ನು ನಾಶಮಾಡಿದ ದೇಶದ ಎಲ್ಲಾ ವಿಭಾಗಗಳ ಸೈನಿಕರ ಕಾರ್ಯಚರಣೆಗೆ ಎಲ್ಲೆಡೆಯಿಂದ ಹರ್ಷೊದ್ಗಾರ ಹರಿದುತ್ತಿರುತ್ತಿದೆ. ಇಂದು ಇಡೀ ದೇಶವೇ ಸೈನಿಕರಿಗೆ ತಲೆಬಾಗಿ ನಮಸ್ತರಿಸುತ್ತಿದೆ. ಆದರೆ, ನಮ್ಮ ಕೆಲವು ರಾಜಕಾರಣಿಗಳು ಮಾತ್ರ ಅಪಸ್ವರ ಎತ್ತುವ ಮೂಲಕ ಸೈನಿಕರ ಶಕ್ತಿಯನ್ನು ಕುಂದಿಸುವ ಕೆಲಸ ಮಾಡುತ್ತಿದ್ಧಾರೆ. ಪಾಕಿಸ್ತಾನದ ಪ್ರಧಾನಮಂತ್ರಿ, ಅಲ್ಲಿನ ಸೇನಾಧಿಕಾರಿ ದೇಶದ ಸೈನಿಕರ ಪರಾಕ್ರಮಕ್ಕೆ ಮಂಡಿಯೂರಿದ್ಧಾರೆ. ಇಂತಹ ಸಂದರ್ಭವನ್ನು ಯಾರೂ ಸಹ ಜೀವಮಾನದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ತಿರಂಗಯಾತ್ರೆ ಮೂಲಕ ನಾವೆಲ್ಲರೂ ನಮ್ಮ ಸೈನಿಕರ ಪರಾಕ್ರಮಕ್ಕೆ ತಲೆಬಾಗೋಣ. ಸೈನಿಕರ ಹೋರಾಟವನ್ನು ಸ್ಮರಿಸೋಣ ಅವರಿಗೆ ಭಗವಂತ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.ತಿರಂಗಯಾತ್ರೆಯಲ್ಲಿ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ, ಭಜರಂಗದಳದ ಉಮೇಶ್, ಕೃಷ್ಣ, ಮಹಂತೇಶ್, ಮಾಜಿಸೈನಿಕ ಶಿವಮೂರ್ತಿ, ತಿಮ್ಮಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಬಿಜೆಪಿ ಮುಖಂಡರಾದ ಸಿ.ಎಸ್.ಪ್ರಸಾದ್, ಕೆ.ಟಿ.ಕುಮಾರಸ್ವಾಮಿ, ಜೆ.ಪಿ.ಜಯಪಾಲಯ್ಯ, ಎನ್.ರಘುಮೂರ್ತಿ, ಡಿ.ಸೋಮಶೇಖಮಂಡಿಮಠ, ಮಾತಾಜಿತ್ಯಾಗಮಯಿ, ದೊರೆನಾಗರಾಜು, ಸಿ.ಶ್ರೀನಿವಾಸ್, ಡಿ.ಜಿ.ಪ್ರಕಾಶ್, ಎಂ.ಸತ್ಯನಾರಾಯಣರಾವ್, ಸೀತಾಲಕ್ಷ್ಮಿ ವಾದಿರಾಜ್, ಗೀತಾ ಕೃಷ್ಣಮೂರ್ತಿ, ಡಾ.ಕೆ.ಎಂ.ಜಯಕುಮಾರ್, ಗಂಗಾಧರ, ಡಾ.ಎಲ್.ಎಸ್.ವೀರೇಶ್, ಶ್ರೀನಿವಾಸ್‌ಮೂರ್ತಿ, ನವೀನ್, ಪಿ.ರಾಮಕೃಷ್ಣರೆಡ್ಡಿ, ಚನ್ನಗಾನಹಳ್ಳಿಮಲ್ಲೇಶ್, ಮಧು ಮುಂತಾದವರು ಉಪಸ್ಥಿತರಿದ್ದರು.