ಮೂಲಭೂತ ಹಕ್ಕುಗಳನ್ನು ಗೌರವಿಸದಂತೆ. ಬೇರೆಯವರ ಹಕ್ಕುಗಳನ್ನು ಎಂದೂ ಉಲ್ಲಂಘನೆ ಮಾಡಬಾರದು
ಕನ್ನಡಪ್ರಭ ವಾರ್ತೆ ಗೋಕಾಕ
ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.ನಗರದ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ 75ನೇ ಗಣ್ಯರಾಜೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮೂಲಭೂತ ಕರ್ತವ್ಯಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಯು ಸರಿಯಾಗಿ ಪಾಲಿಸಿದರೆ, ಮೂಲಭೂತ ಹಕ್ಕುಗಳನ್ನು ಗೌರವಿಸದಂತೆ. ಬೇರೆಯವರ ಹಕ್ಕುಗಳನ್ನು ಎಂದೂ ಉಲ್ಲಂಘನೆ ಮಾಡಬಾರದು ಎಂದ ಅವರು ಸರ್ಕಾರ ನಮಗೆ ಎಲ್ಲವನ್ನೂ ನೀಡುತ್ತಿವೆ ಅವುಗಳ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರೂ ಸ್ವಾವಲಂಭಿ ಜೀವನವನ್ನು ನಡಿಸಬೇಕು. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದ್ದು, ಪರಿಸರ ಹಾಳುಮಾಡದೆ ಎಲ್ಲರೂ ಪ್ಲಾಸ್ಟಿಕ್ ನಿಷೇಧಿಸಬೇಕು. ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಇಓ ಜಿ.ಬಿ. ಬಳಗಾರ, ಸಿಪಿಐ ಗೋಪಾಲ ರಾಠೋಡ, ಪೌರಾಯುಕ್ತ ಎಸ್.ಎ.ಮಹಾಜನ್, ಡಾ.ಮೋಹನ ಕಮತ, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಎ.ಬಿ.ಮಲ್ಲಬನ್ನವರ, ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ, ಕೃಷಿ ಅಧಿಕಾರಿ ಎಂ ಎಂ ನದಾಫ್, ಹೆಸ್ಕಾಂನ ಎಸ್.ಪಿ.ವರಾಳೆ, ಶಿವಾನಂದ ಹಿರೇಮಠ, ತಾಲೂಕು ವೈದ್ಯಾಧಿಕಾರಿ ಎಂ.ಎಸ್.ಕೊಪ್ಪದ, ವಕೀಲ ಕೊಪ್ಪ, ಪಿಎಸ್‌ಐ ಕೆ.ವಾಲಿಕರ, ಎಂ ಎಲ್ ಜನಮಟ್ಟಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಬಸವರಾಜ ಆರೆನ್ನವರ, ಪ್ರಕಾಶ ಮೂರಾರಿ, ಬಾಬು ಮುಳಗುಂದ, ಸಿದ್ದಪ್ಪ ಹುಚ್ಚರಾಮಗೋಳ, ಸೋಮಶೇಖರ್ ಮಗದುಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.