ಬಿಸಿಯೂಟ ಅನುದಾನ ಹೆಚ್ಚಳಕ್ಕೆ ಮನವಿ

KannadaprabhaNewsNetwork |  
Published : Jul 25, 2026, 02:15 AM IST
ಬಿಸಿಯೂಟ ಅನುದಾನ ಹೆಚ್ಚಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಶಾಲೆಗಳ ಬಿಸಿಯೂಟ ಯೋಜನೆಯಡಿ ಮೊಟ್ಟೆ ಹಾಗೂ ತರಕಾರಿ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಪ್ರಸ್ತುತ ಒಂದು ಮೊಟ್ಟೆಗೆ ನೀಡಲಾಗುತ್ತಿರುವ ₹6 ಅನುದಾನ ಸಾಕಾಗುತ್ತಿಲ್ಲ.

ಗದಗ: ಬಿಸಿಯೂಟ ಅನುದಾನ ಹೆಚ್ಚಳ ಸೇರಿದಂತೆ ಶಿಕ್ಷಕರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಗದಗ ಗ್ರಾಮೀಣ ವಲಯದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌, ಡಿಡಿಪಿಐ ಆರ್.ಎಸ್. ಬುರಡಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಸರಸ್ವತಿ ಕನವಳ್ಳಿ ಹಾಗೂ ತಾಲೂಕು ಪಿ.ಎಂ. ಪೋಷಣಾ ಸಹಾಯಕ ನಿರ್ದೇಶಕ ಶಂಕರ ಹಡಗಲಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಲೆಗಳ ಬಿಸಿಯೂಟ ಯೋಜನೆಯಡಿ ಮೊಟ್ಟೆ ಹಾಗೂ ತರಕಾರಿ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಪ್ರಸ್ತುತ ಒಂದು ಮೊಟ್ಟೆಗೆ ನೀಡಲಾಗುತ್ತಿರುವ ₹6 ಅನುದಾನ ಸಾಕಾಗುತ್ತಿಲ್ಲ. ಮೊಟ್ಟೆಯನ್ನು ಖರೀದಿಸುವುದು, ಕುದಿಸುವುದು ಹಾಗೂ ಸುಲಿಯುವುದು ಸೇರಿದಂತೆ ಉಂಟಾಗುತ್ತಿರುವ ಹೆಚ್ಚುವರಿ ವೆಚ್ಚದಿಂದ ಮುಖ್ಯೋಪಾಧ್ಯಾಯರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಆದ್ದರಿಂದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆ ಹಾಗೂ ಅಡುಗೆ ವೆಚ್ಚದ ಅನುದಾನವನ್ನು ತಕ್ಷಣವೇ ಹೆಚ್ಚಿಸಬೇಕೆಂದು ಒತ್ತಾಯಿಸಲಾಯಿತು.

ಇದೇ ವೇಳೆ, ಎಸ್.ಎ.ಟಿ.ಎಸ್‌ನಲ್ಲಿ ನಿರಂತರವಾಗಿ ಸಿಂಕ್ ಆಗದಿರುವ ತಾಂತ್ರಿಕ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು. ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳ ಹಾಜರಾತಿ ನಿರಂತರದಲ್ಲಿ ದಾಖಲಾಗದ ಕಾರಣ ಅನುಷ್ಠಾನದ ಅನುದಾನ ವೆಚ್ಚ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಯನ್ನು ನಿವಾರಿಸಬೇಕು. ಅಕ್ಷರ ದಾಸೋಹ ಯೋಜನೆಯಡಿ ಅಗತ್ಯ ದಾಸ್ತಾನುಗಳನ್ನು ಕಾಲಕಾಲಕ್ಕೆ ಪೂರೈಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಈ ವೇಳೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ವಿ.ಎಂ.ಹಿರೇಮಠ, ಎಸ್.ಆರ್. ಬಂಡಿ, ಎಂ.ಪಿ. ಶೀರನಳ್ಳಿ, ವಿ.ಸಿ. ಉಳ್ಳಾಗಡ್ಡಿ, ಬಿ.ಬಿ. ಹಡಪದ, ಎಂ.ಪಿ. ಮೋಹನ, ಎನ್.ಎಚ್. ಪಾಟೀಲ, ಎಸ್.ಎಂ. ಬಸೇಗೌಡ್ರ, ಎಸ್.ಎಸ್. ಲಕ್ಷಕೊಪ್ಪ, ಎಸ್.ಪಿ. ಕುರಿ, ಕೆ.ಬಿ. ಕೊಣ್ಣೂರ, ಬಿ.ವೈ. ಹುಡೇದಮನಿ, ಎಸ್.ಡಿ. ಗುಂಜಳ, ಎನ್.ಆರ್. ಶೈಲಾ, ಪಿ.ಕೆ. ಅವರಡ್ಡಿ, ಬಿ.ಎಸ್. ತಮ್ಮನಗೌಡ್ರ, ಎಫ್.ಎಸ್. ಗಾಣಿಗೇರ, ಪಿ.ಬಿ. ಮುಧೋಳಮಠ, ಟಿ.ಡಿ. ಲಮಾಣಿ, ಪಿ.ಎಫ್. ಅಗಸಿಮನಿ, ಬಿ.ವಿ. ಹೊಸಮನಿ, ಜೆ.ಎನ್. ದೊಡ್ಡಮನಿ, ವಿ.ಎಫ್. ಕಲಕಂಬಿ, ಬಿ.ಎಸ್. ಆಲೂರ, ಎಸ್.ಬಿ. ಅಂಗಡಿ, ಎ.ವಿ. ಪ್ರಭು, ಎಸ್.ಕೆ. ಹೊಟ್ಟಿನ, ರವಿ ಪಡೆಸೂರ, ವಾ.ಯು. ಅಣ್ಣಿಗೇರಿ, ಉದಯಕುಮಾರ್, ಎ.ಡಿ. ಬಂಡಿ, ಸಿ.ಕೆ. ಮರಿಗೌಡ್ರ, ಎಸ್.ಎಸ್. ಗಾಣಿಗೇರ, ವೆಂಕಟೇಶ ಕರಿಗಾರ, ಸೊಕ್ಕಿ, ಡಿ.ಎಂ. ಬಾಳಿ, ವನಜಾಕ್ಷಿ, ಕೆ.ಎನ್.ಎಂ. ಹೂಗಾರ, ಕೆ.ಎಸ್. ದಿಂಡಿ, ತೇಜಪ್ಪ ಹಂಸನೂರ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಕಾರಿ ಆಸ್ಪತ್ರೆ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವರಿಗೆ ಮನವಿ
ಯುವಕರಲ್ಲಿ ನಾಯಕತ್ವ ಗುಣ ಬೆಳೆಸಲು ಭಾರತ್‌ ಜೋಡೋ ಆರಂಭ: ಜಿಲ್ಲಾಧಿಕಾರಿ ಶ್ರೀಧರ್